ಮಾತು ಕವಿತೆಯಾಗುವುದು

ಮಾತು ಕವಿತೆಯಾಗುವುದು ನಿನ್ನಿಂದ
ಆ ಕವಿತೆ ರಾಗ ಪಡೆಯುವುದು ನಿನ್ನಿಂದ
ಆ ರಾಗ ಪಡೆದ ಕವಿತೆ ಆಗದಿರಲಿ ಕತೆ
ಆ ಕತೆ ಚಿರಸ್ಥಾಯಿಗೊಳಿಸದಿರಲಿ ವೆತೆ /ಪ//

ಕೋಗಿಲೆ ಕುಹು ಎನ್ನುವುದು ನಿನ್ನಿಂದ
ನವಿಲು ಹೆಜ್ಜೆ ಹಾಕುವುದು ನಿನ್ನಿಂದ
ಚೈತ್ರದಾಗಮನ ಕೂಡ ನಿನ್ನಿಂದ
ಅದಕಾಗೀ ವಸಂತನ ಸಂಬಂಧ

ವರುಷ ನಿಮಿಷವಾಗುವುದು ನಿನ್ನಿಂದ
ನಿಮಿಷ ವರುಷವಾಗುವುದು ನಿನ್ನಿಂದ
ಹಗಲು ರಾತ್ರಿಗಿಲ್ಲ ಬೇಧ ನಿನ್ನಿಂದ
ನೀನಿರದ ಬದುಕಿಗೆಲ್ಲಿ ಸಂಬಂಧ?
*****

ಕೀಲಿಕರಣ :

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿತೆ ಇದು
Next post ಅಧ್ಯಯನ ವಿಷಯ

ಸಣ್ಣ ಕತೆ