Home / ಕವನ / ಕವಿತೆ

ಕವಿತೆ

ಆ ದಿನ ಮುಂಜಾವಿನಿಂದ ಸಂಜೆಯ ತನಕ ಬೀದಿಯಲ್ಲಿ, ಬಸ್ ನಿಲ್ದಾಣದಲ್ಲಿ, ಆಫೀಸಿನಲ್ಲಿ, ಪೇಟೆಯಲ್ಲಿ ಎಲ್ಲೆಡೆ ಕಂಡ ಹಲವು ಹತ್ತು ಮುಖಗಳು ಎಲ್ಲ ಪರಿಚಿತ! ಕೊನೆಗೆ – ಹೋಗಿ ಮನೆಗೆ ನಿಂತಾಗ ಕನ್ನಡಿಯ ಮುಂದೆ, ಕಂಡ ಪ್ರತಿಬಿಂಬ ಪರಿಚಿತ ತುಂಬ! ಬರಿ...

ಬಸವ ಚೇತನ ಶಿವನಿಕೇತನ ಭುವನ ಕಾಶಿ ಕ್ಷೇತ್ರಾ ಬಸವ ವಚನಾ ವೇದ ಮಂತ್ರಾ ಪ್ರೇಮಗೀತಾ ಜ್ಞಾನಾ ದೇಹ ದೇಗುಲ ಮನವೆ ಲಿಂಗಾ ಕೋಟಿ ಲಿಂಗದ ಕ್ಷೇತ್ರಾ ನಡೆಯೆ ಲಿಂಗಾ ನುಡಿಯೆ ಜಂಗಮ ಜ್ಞಾನ ಮಾನಸ ಯಜ್ಞಾ ನಾನು ಕಿರಿಯಾ ನೀನು ಹಿರಿಯಾ ಗೌರಿಶಂಕರ ಶಿಖಽರಾ ಸಕಲ...

ಮುಗಿದ ಕತೆಗೆ ತೆರಯಹಾಕಿ ಬಾಳ ಪುಟದ ತೆರೆಯ ಬಿಚ್ಚಿ ಕುಂಚ ಹಿಡಿದು ಬಣ್ಣ ಹಚ್ಚಿ ಚಿತ್ತಾರ ಬಿಡಿಸಿತು ಚಂಚಲ ಮನಸು || ಭಾವಲತೆಯ ದಳವ ಬಿಡಿಸಿ ಬಿರಿದ ಚೆಂದ ಹೂವಾ ಮುಡಿಸಿ ಮುಡಿಯ ಏರಿ ಒಲವ ತೋರಿ ಮನವ ಸೆಳೆಯಿತು ಚಂಚಲ ಮನಸು || ಕತ್ತಲೆಯ ನೀಗಿಸಿ ಬೆ...

ಪ್ರೀತಿ ಒಂದು ಆಸರೆ ಪ್ರೀತಿ ಒಂದು ನಂಬಿಕೆ| ಪ್ರೀತಿ ಒಂದು ದೈವ ಪ್ರೀತಿ ಒಂದು ಬೆಳಕು| ಆ ಬೆಳಕಲಿ ಬಾಳ ಹುಡುಕುವುದೇ ಬದುಕು|| ಪ್ರೀತಿಯಿದ್ದರೇನೇ ಜೀವನ ಇಲ್ಲದಿರೆ ನೀರಸ ಯಾನ| ಪ್ರೀತಿಯಿದ್ದರೇನೇ ಚೇತನ ಇಲ್ಲದಿರೆ ಸ್ಮಶಾನಮೌನ|| ಪ್ರೀತಿ ಒಂದು ಮಧ...

ನಾವು ಕಟ್ಟಿದ ಗೆದ್ದಲಗೂಡು ನಿಮಗಾಯಿತು ಹುತ್ತ. ನಾವು ಹೊತ್ತ ಮಣ್ಣಿನ ಕನಸು ನಿಮಗಾಯಿತು ನನಸು. ನಾವು ನೀರೆರೆದ ಹೂವು ಹಣ್ಣು ನಮಗಾದವು ಹುಣ್ಣು. ಮೂಸಿ ನೋಡದ ಕಾಡು ಕಲ್ಗಳ ಮುದ್ದಾಡಿದೆವು ನಾವು ಕಲ್ಲು ಕಂದಗಳ ಹೊತ್ತು ತಂದೆವು ಕೋಟೆ ಕೊತ್ತಲಕೆ ಕಾ...

ಕನ್ನಡದ ಬಾನಿನಲಿ ಮೂಡಿತದೊ ಬೆಳಕು, ಪುಣ್ಯ ಕಣ್ದೆರೆದಂತೆ ಬೆಳಕು! ಕನ್ನಡಿಗರೊಲುಮೆ ತೆರೆಹೊಮ್ಮಿಸುವ ಬೆಳಕು, ಹೊನ್ನ ಕನಸನು ತರುವ ಹೊಸ ಕಳೆಯ ಬೆಳಕು, ಮುನ್ನರಿಯದಚ್ಚರಿಯ ಮೆಚ್ಚು ಬೆಳಕು. ಬೆಳ್ಳಿ ಬೆಳಗುವ ಬಾನ ಬೆಳ್ಳನೆಯ ಬೆಳಕು, ಒಳ್ಳಿತೊಸರುವ ಹ...

ಪ್ರೀತಿ ನನಗೆ ರೀತಿ ನಿನಗೆ ನನ್ನ ಬೆರಗುಗೊಳಿಸುವಿ ಒಮ್ಮೆ ಹಾಗೆ ಒಮ್ಮೆ ಹೀಗೆ ನನ್ನ ಮರುಳುಗೊಳಿಸುವಿ ಒಮ್ಮೆ ವರ್ಷಧಾರೆಯಂತೆ ಬಂದು ಹೃದಯ ತೊಳೆಯುವಿ ಒಮ್ಮೆ ಮಂಜಿನಂತೆ ಎದ್ದು ಮನವ ಮುಸುಕುವಿ ಒಮ್ಮೆ ಬೆಳಕಿನಂತೆ ಸಕಲ ಜೀವಜಾಲ ಬೆಳಗುವಿ ಒಮ್ಮೆ ಇರುಳ...

ರಥ, ಹರಿದಂತೆ ಈ ಬಾಳು ಸರಿಯಾಗಿದ್ದರೆ ಮಾತ್ರ ಚೆಂದ, ಆನಂದ ಸರಿ ತಪ್ಪಿದರೆ ಕೆಡುವುದು ಎಲ್ಲಾ ಅಂದ ಹೋಗುವವೆ ಒಳ್ಳೆ ಕಾಲ ಬರುವವೆ ಕೆಟ್ಟ ಕಾಲ ನಮ್ಮದೂ ಒಂದು ಕಾಲಾನಾ? ಏನು ಹೇಳಲಿ ಅಂದಿನ ವೈಭವವಾ- ಎಲ್ಲಾ ಕೈ ನೀಡಿದಂಗಿತ್ತು ಎತ್ತ ನೋಡಿದರು ಊರು ಕ...

ಮತ್ತದೇ ತಪ್ಪು ರೈಲು ಹೋದ ಮೇಲೆ ಬಂದ ಟಿಕೇಟು ಕಷ್ಟ ಈ ರೈಲು ಹತ್ತುವುದು ಇಳಿಯುವುದು ದಾರಿಯಲ್ಲಿ ಎದುರಾದವ ರಿಗೆಲ್ಲ ಸಲಾಮು ತಿಳಿಯದೇ ಯಾರ ಮರ್ಮ ಯೋಚಿಸುತ್ತ ನಿಂತೆ ನಿಂತ ಲ್ಲೇ ನೀರಾಗಿ ಹರಿದೆ ಹತ್ತುವ ಯೋಗವಿಲ್ಲ ಬಿಡಿ ಬರಬಹುದು ಇನ್ನೊಂದು ರೈಲು...

ಮಾಗಿದ ದೇಹವಿದು ತೂಗುತಿದೆ ದಿವಸ ನಿತ್ಯವೂ ಸಾಗಿಹುದು ಹಸಿವು ನೀಗಿಸಲು ಈ ಹರ ಸಾಹಸದ ಕೆಲಸ ಹಸಿ ಮೆಣಸಿನಕಾಯಿ ತಿನ್ನಲು ಹೊಟ್ಟೆ ಚುರ್ ಚುರ್ ಕಾಯಕ ಇಲ್ಲದೇ ಉಪವಾಸದಿ ಕುಳಿತರೂ ಹೊಟ್ಟೆ ಚುರ್ ಚುರ್ ಹೊಟ್ಟೆ ಪಾಡಿದು ಜೀವನಕೆ ಜೋಡು ಬಿಡದೇ ಕಾಡುವುದು...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...