ಹರಿಯ ಭಜಿಸಿದವರಿಗಿಲ್ಲ
ಹಸಿವು ಅನ್ನಾದಿಗಳಚಿಂತೆ|
ಹರಿಯ ಭಜಿಸಿದವರಿಗಿಲ್ಲ
ಜ್ಞಾನಾದಿಗಳ ಕೊರತೆ|
ಹರಿಯಭಜಿಸದಲೆ ಅಲೆದರೆಲ್ಲುಂಟು?
ಅಣುರೇಣುತೃಣಕಾಷ್ಠ ಅವನ
ಅಧೀನವಾಗಿರುವಾಗ||

ದುಡಿದವರಿಗೆಲ್ಲಾ
ಧನ ಕನಕಾದಿಗಳು ಪ್ರಾಪ್ತಿಯಾಗಿದಿದ್ದರೆ
ಕುಬೇರನ ಬಳಿಯಲ್ಲಿರುತ್ತಿತ್ತೇ ಭಂಡಾರ|
ಓದಿದವರಿಗೆಲ್ಲ ವಿದ್ಯೆ ಒಲಿದಿದ್ದರೆ
ಸರಸ್ವತಿ ಬಳಿ ಇರುತ್ತಿತೇ ಜ್ಞಾನಸಾಗರ
ಹರಿಯ ಕೃಪೆಯಿಂದಾಗಲಿಲ್ಲವೆ
ವಾಲ್ಮೀಕಿ ರಾಮಾಯಣ||

ಅಕ್ಷರವನರಿಯದ ಬಾಲಕ ತಿಮ್ಮಣ್ಣ
ಹರಿಯನುಭಜಿಸಿ ಆಸ್ಥಾನ ದಿವಾನನಾದ|
ಹರಿಯಭಜಿಸಿ ಅಂತ್ಯ ಸಮಯದಿ
ಅಜಮಿಳನು ಮೋಕ್ಷವ ಪಡೆದ|
ಈ ಕಲಿಯುಗದಲಿ
ಹರಿಯ ನಂಬಿದ ಕನಕದಾಸರು
ಶ್ರೀಕೃಷ್ಣನ ದರುಶನ ಪಡೆದರು||
*****

ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)