ಹಳ್ಳಿ ರಾಜಕೀಯ

ಹಳ್ಳಿ ರಾಜಕೀಯ –
ಯಾರೊಬ್ಬರೂ ತೇಲಲ್ಲ
ಯಾರೊಬ್ಬರೂ ಮುಳುಗೊಲ್ಲ
ಯಾರೊಬ್ಬರೂ ದಡ ಸೇರಲ್ಲ

ಹಳ್ಳಿ ರಾಜಕೀಯ –
ಯಾರೊಬ್ಬರೂ ಬೆಳಿಯಲ್ಲ
ಯಾರೊಬ್ಬರೂ ಅಳಿಯಲ್ಲ
ಯಾರೊಬ್ಬರೂ ಉಳಿಯಲ್ಲ

ಹಳ್ಳಿ ರಾಜಕೀಯ –
ಹಾವು ಸಾಯೊಲ್ಲ
ಕೋಲು ಮುರಿಯೊಲ್ಲ
ಪರಿತಾಪ ತಪ್ಪೊಲ್ಲ

ಹಳ್ಳಿ ರಾಜಕೀಯ –
ಆರಕ್ಕೆ ಏರೊಲ್ಲ
ಮೂರಕ್ಕೆ ಇಳಿಯೊಲ್ಲ
ಸೀಳುದಾರಿ ತಪ್ಪೊಲ್ಲ

ಹಳ್ಳಿ ರಾಜಕೀಯ –
ಹಳ್ಳಿಯದ್ದೊ ಈ ಸ್ವಾತಂತ್ರ್ಯ
ದಿಳ್ಳಿಯದ್ದೊ ಈ ಕುತಂತ್ರ
ಬಲ್ಲವ ಬಲ್ಲ ಈ ಅತಂತ್ರ
*****

ಕೀಲಿಕರಣ :

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿನ್ನಾಣಗಿತ್ತಿ
Next post ವಿಧಾನಸೌಧದಲ್ಲಿ ಮಠ, ಮಠದಲ್ಲಿ ವಿಧಾನಸೌಧ

ಸಣ್ಣ ಕತೆ