
ಮನ ಮಂಕಾಯಿತ್ತು. ತನುವು ಮರೆಯಿತ್ತು. ವಾಯು ಬರತಿತ್ತು. ಉರಿ ಎದ್ದಿತ್ತು. ಹೊಗೆ ಹರಿಯಿತ್ತು. ಸರೋವರವೆಲ್ಲ ಉರಿದು ಹೋಯಿತ್ತು. ಒಳಗೆ ಹೊಕ್ಕು ಕದವ ತೆಗೆದು ಬಯಲ ನೋಡಿ, ಬೆಳಗಕೂಡಿದಲ್ಲದೆ ನಿಜ ಮುಕ್ತಿ ಇಲ್ಲವೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್...
ಇಲ್ಲೇ ಎಲ್ಲೋ ಇರುವ ಕೃಷ್ಣ ಇಲ್ಲೇ ಎಲ್ಲೋ ಇರುವ, ಇಲ್ಲದ ಹಾಗೆ ನಟಿಸಿ ನಮ್ಮ ಮಳ್ಳರ ಮಾಡಿ ನಗುವ. ಬಳ್ಳೀ ಮಾಡದ ತುದಿಗೆ – ಅಲ್ಲೇ ಮೊಲ್ಲೆ ಹೂಗಳ ಮರೆಗೆ ಹಬ್ಬಿತೊ ಹೇಗೆ ಧೂಪ – ಅಥವಾ ಚಲಿಸಿತೊ ಕೃಷ್ಣನ ರೂಪ? ಬೀಸುವ ಗಾಳಿಯ ಏರಿ ಮಾಡಿ...
ನಾ ಕೇರಿಯವ! ನನಗೇನು ಗೊತ್ತು? ಸತ್ತ ದನವ, ಕಿತ್ತು ಕಿತ್ತು… ನಾಯಿ, ನರಿ, ಹಂದಿ, ಹದ್ದು, ಕಾಗೆಯಂತೇ… ತಿನ್ನುವುದು ಗೊತ್ತು! * ಕೊಳೆಗೇರೀಲಿ ಹರಕು ಜೋಪಡೀಲಿ ಚಿಂದಿ ಬಟ್ಟೇಲಿ ಹಸಿದ ಹೊಟ್ಟೇಲಿ ಮುರುಕು ಮುದ್ದೆ ತಿಂದು, ಮಗಿ ನೀರು ...
ಎಲ್ಲರಂತೆ ಸಾದಾಬಾದು ಕೈಬೀಸಿಕೊಂಡು ಕಚೇರಿಗೆ ಬರಲು ಇವನಿಗೇನ್ರಿ ಧಾಡಿ ಬರುವಾಗಲೂ ಅಷ್ಟೆ ಹೋಗುವಾಗಲೂ ಅಷ್ಟೆ ಇಲ್ಲದೇ ಇದ್ದ ರಂಪ ರಾಡಿ ಬಣ್ಣಗಳ ಕವಾಯಿತು ಹಕ್ಕಿಗಳ ಪಥಚಲನ ಏಳು ಕುದುರೆ ಸಾರೋಟು, ದಿನಕ್ಕೊಂದು ಬಿಂಕ ಹೊಸ ಹೊಸ ಬಡಿವಾರ ಇದು ಪ್ರಜಾಪ...
ಹಲ್ಲು ಕಡಿಯುವವರು ನೆಟ್ಟಿಗೆ ಮುರಿಯುವವರು ಕೈ ಎತ್ತಿ ಇಳಿಸುವವರು ಬಾಯಿ ಮಾಡುವವರು ಬೊಗಳಿ ಕಚ್ಚದೆ ಬಾಲಮುದುರಿ ನಾಯಿಯಂತೆ ಮಲಗುವವರು ಹೀಗೂ ಇದ್ದಾರೆ *****...














