ಸುತ್ತಲೂ ಸುತ್ತುತ್ತಿದೆ ಸ್ವಾರ್ಥದ ವರ್ತುಲ ಸುತ್ತಿ ಸುತ್ತಿ ಮತ್ತೆ ಮತ್ತೆ ಪರಿಧೀಯಲ್ಲೇ ನಡೆದು ನಡೆದು ದಾರಿಯೇ ಸವೆಯದಾಗಿದೆ ಸವೆದ ಹಾದಿಯಲ್ಲಿಯೇ ಮತ್ತೆ ನಡೆಯುತ್ತಲೇ ಅಡಿಯಿರಿಸುತ್ತದೆ ಸ್ವಾರ್ಥದ ನಡಿಗೆ ತಾನು, ತನ್ನದರ ನಡುವೆಯೇ ಬಾಡಿ ಬಸವಳಿದ...

ಕನಸಿಳಿಯದ ಗಂಟಲಿನಲಿ ನೋವುಗಳ ತುಂಬಿಸಿದಂತೆ! ಒಡಲಾಳದೊಳಗೆ ಮಥಿಸಿ ಮಥಿಸಿ ಲಾವಾರಸವಾದ ಅಮೂರ್ತ ನೋವುಗಳು ಸಿಡಿಯಲಾಗದ ಜ್ವಾಲಾಮುಖಿಯಂತೆ! ಧ್ವನಿಯಡಗಿಸಿದ ಕಂಠವಾಗಿ ಹನಿಯಡಗಿಸಿದ ಕಡಲಾಗಿ ಅವ್ಯಕ್ತಗಳ ಹಿಡಿದಿರಿಸಿದ ಒಡಲಾಗಿ ನೋವುಗಳು ಮಾತಾಗುವುದೇ ಇ...

ನಮ್ಮ ಮನೆಯ ಹತ್ತಿರದ ದೊಡ್ಡ ಬಂಗಲೆಯಲ್ಲಿದ್ದ ಶ್ರೀಮಂತ ಗಂಡ ಹೆಂಡತಿ ಜಗಳ ಕಾದು ಕಾದು, ನೂರು ಡಿಗ್ರಿ ಕುದಿದ ಮೇಲೆ ಮುಂದೇನು ಕೋರ್ಸ್ ಇದ್ದಿದ್ದು ಒಂದೇ ಒಂದು; ಡೈವೋರ್ಸು, ಬಂಗಲೆ ಮಾರಿ ದುಡ್ಡು ಹಂಚಿಕೊಳ್ಳಲು ಕೊಟ್ಟರು ಕನ್ಸೆಂಟ್, ಬಂದ ದುಡ್ಡಿನ...

ದಿಳ್ಳಿಯೊಂದರ ಒಳಗೆ, ದಿಬ್ಬವೊಂದರ ಮೇಲೆ, ದೊಡ್ಡ ದೀವಿಗೆಯಡೆಗೆ ನಾ ಕುಳಿತಿದ್ದೆ. ಯಾವುದೋ ಎಡೆಯಲ್ಲಿ; ಹಣತೆಯೊಂದರ ಮೇಲೆ ಮಿಣುಗುವಾ ಜಿನುಗುದೀವಿಗೆ ಕಂಡಿದ್ದೆ ಬೀಸುಗಾಳಿಯ ಮೇಲೆ ಈಸು ಬಾರದೆ ಸಾಗಿತ್ತು ಇಲ್ಲಿಯೋ ಅಲ್ಲಿಯೋ ಎಂಬಂತೆ ಮುಳುಗಿ ಮರೆಯಾ...

ಹಿಮಾಛ್ಛಾದಿತ ಬೆಟ್ಟಗಳ ಮೇಲೆ ಮೇಲೆ ಆಕಾಶ ಮಾರ್ಗದ ಈ ಪಯಣ ಅದೆಂಥಾ ಸುಂದರ ನಯನ ಮನೋಹರ ನನ್ನ ಕಿಡಕಿಯಾಚೆ ಏನದ್ಭುತ ನೀಲಿ ಆಕಾಶದ ಹಾಸು ಉದ್ದಗಲ ನಡುನಡುವೆ ಮೈ ಮರೆತು ಮಾತನಾಡುವ ಬಂಗಾರ ಬೆಳ್ಳಿ ಸೆರಗಿನ ಮೋಡ ಹುಡುಗಿಯರು ನಕ್ಕು ನಗೆಯಾಡುವ ಅವರೊಮ್ಮ...

ಯಾವ ರಾಗ ಪಲ್ಲವಿಯ ಪದದನುಪದದನುನಯ ಸರ ಸ್ವರದಮೃತ ಮಾನಸದನುಲಾಪದದನಾಲಯ | ಋತು ಋತುವಿನ ಕ್ರತುವು ನೀನು, ಬಾಳಿನೆಳೆಯ ತಂಬೆಲರವು, ಪಥ ಪಂಥ ಪಾಂಥದ ಪಥವು ನೀನು, ಬೆಳಗು ಬೆಳಕಿನ ಕಿರಣವು. ನನ್ನ ಜಲಧಿಯ ತುಂಬು ಬಿಂಬವು ನಿನ್ನ ಚಿಲುಮೆ ಬಿಂದು ಕಸವರ, ಒ...

ಕಡಲೊಳಗಿನ ಹನಿ ಹನಿ ಸೂರ್ಯನೊಳಗಿನ ಬೆಳಕ ರೇಖೆಗಳು ಎಲ್ಲ ಜಂಜಡವ ಹೊತ್ತು ಸಾಗಿದ ಕಾಲ. ಮನದ ಭಾಷೆದ ಅರಳಿದ ಶಬ್ದ ಶಬ್ದದೊಳಗಿನ ನಿಶ್ಶಬ್ದ ಎಲ್ಲ ಮಥಿಸಿದ ಆತ್ಮ ಸಂಗಾತ. ಕನವರಿಸಿದ ಏಕಾಂತ ಮೊಳಕೆ ಒಡೆಯುವ ಬೀಜ ಎಲ್ಲ ಫಸಲೊಡೆದ ಪೈರು. ಕುಡಿ ಒಡೆದ ಚಿಗ...

ಮದುವೆಯಾಯಿತು ಉಷೆಗೆ ಮಸಣ ಮಂಟಪದಲ್ಲಿ. ಕೇಳಲಿಲ್ಲವೆ ಊರು, ಜನರದರ ವೈಖರಿಯ? ವರನ ಬಳಗವು ಬಂದು ನಿಂತಿತ್ತು, ಅಲ್ಲಲ್ಲಿ ಹೆಜ್ಜೆ ಹೆಜ್ಜೆಗು ವಧುಗೆ ಕಾಲ ಕೂಡಿಟ್ಟುರೆಯ ಮೂಳೆಯಾಭರಣಗಳ ಬಳುವಳಿಯ ನೀಡುತ್ತ! ವಧುವಿನದು ಮೃದುಪಾದ ನೊಂದರಾಗದು ಎನುತ ನಾಲ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....