ಸುತ್ತಲೂ ಸುತ್ತುತ್ತಿದೆ
ಸ್ವಾರ್ಥದ ವರ್ತುಲ
ಸುತ್ತಿ ಸುತ್ತಿ
ಮತ್ತೆ ಮತ್ತೆ
ಪರಿಧೀಯಲ್ಲೇ
ನಡೆದು ನಡೆದು
ದಾರಿಯೇ ಸವೆಯದಾಗಿದೆ
ಸವೆದ ಹಾದಿಯಲ್ಲಿಯೇ
ಮತ್ತೆ ನಡೆಯುತ್ತಲೇ
ಅಡಿಯಿರಿಸುತ್ತದೆ
ಸ್ವಾರ್ಥದ ನಡಿಗೆ
ತಾನು, ತನ್ನದರ
ನಡುವೆಯೇ ಬಾಡಿ
ಬಸವಳಿದ ಜೀವ
ಮುಕ್ತಿ ಕಾಣಲು
ಹವಣಿಸುತ್ತಿದೆ
ಹೊರ ಬರಲು
ಅಡ್ಡಲಾಗಿ
ಚಕ್ರವ್ಯೂಹ ನಿಂತಿದೆ
ದಾಟಲಾದೀತೇ
ವಿಷಚಕ್ರವ
*****