ನಮ್ಮ ಮನೆಯ ಹತ್ತಿರದ ದೊಡ್ಡ ಬಂಗಲೆಯಲ್ಲಿದ್ದ
ಶ್ರೀಮಂತ ಗಂಡ ಹೆಂಡತಿ ಜಗಳ ಕಾದು ಕಾದು, ನೂರು ಡಿಗ್ರಿ
ಕುದಿದ ಮೇಲೆ ಮುಂದೇನು ಕೋರ್ಸ್
ಇದ್ದಿದ್ದು ಒಂದೇ ಒಂದು;
ಡೈವೋರ್ಸು, ಬಂಗಲೆ ಮಾರಿ ದುಡ್ಡು ಹಂಚಿಕೊಳ್ಳಲು
ಕೊಟ್ಟರು ಕನ್ಸೆಂಟ್, ಬಂದ ದುಡ್ಡಿನಿಂದ ಕೊಂಡುಕೊಂಡರು
ಒಬ್ಬರಿಗೊಂದೊಂದು ಎದುರು ಬದುರು ಅಪಾರ್ಟ್-ಮೆಂಟ್.
*****