ಹಿಮಾಛ್ಛಾದಿತ ಬೆಟ್ಟಗಳ ಮೇಲೆ ಮೇಲೆ
ಆಕಾಶ ಮಾರ್ಗದ ಈ ಪಯಣ
ಅದೆಂಥಾ ಸುಂದರ ನಯನ ಮನೋಹರ
ನನ್ನ ಕಿಡಕಿಯಾಚೆ ಏನದ್ಭುತ
ನೀಲಿ ಆಕಾಶದ ಹಾಸು ಉದ್ದಗಲ
ನಡುನಡುವೆ ಮೈ ಮರೆತು ಮಾತನಾಡುವ
ಬಂಗಾರ ಬೆಳ್ಳಿ ಸೆರಗಿನ ಮೋಡ ಹುಡುಗಿಯರು
ನಕ್ಕು ನಗೆಯಾಡುವ ಅವರೊಮ್ಮೆ ನೊರೆತೆರೆ
ತೇಲಾಡುವ ಓಲಾಡುವ ಹಂಜಿ ಹೂವುಗಳು
ಉಫ್ ಎಂದರೆ ಹೆದರೋಡುವ ಮೊಲಗಳು.
ಒಮ್ಮೆ ಗೋಚರ ಮತ್ತೊಮ್ಮೆ ಅಗೋಚರ
ಇಲ್ಲೊಂದು ನಿಲ್ದಾಣ ಇದ್ದಿದ್ದರೆ
ಇಳಿದೊಂದಷ್ಟು ವಿಹರಿಸಬಹುದಿತ್ತು ಅವರೊಂದಿಗೆ
ಮೋಡಗಳೊಳಗೆ ಮುಳುಗೆದ್ದು
ಪುರಾಣ ಕಥೆಗಳ ಜಾಡುಹಿಡಿದು
ದೇವಾನುದೇವತೆಗಳರಮನೆ ಹೊಕ್ಕು
ಒಂದಿಷ್ಟು ಅಮೃತಪಾನ ಮಾಡಿ
ಅಮರತ್ವ ಗಳಿಸಬಹುದಿತ್ತು.
*****