ಖಾಲಿಯಾದ ಬಾನು ನೀಲಿಯಾಗಿದೆ ಬಿಸಿಲು ಬಗೆಯ ಬೆರಗಿಗೆ ಮೋಡಗಳು ವಲಸೆ ಹೋಗಿವೆ ಒಂಟಿ ಹಕ್ಕಿ ಬಿರುಬಿಸಿಲಲ್ಲೂ ಹಾಡುತಿದೆ. ನೆತ್ತರದ ಕೆಂಪು ಧರೆಯ ಕಾನ್ವಾಸಿನ ತುಂಬೆಲ್ಲಾ ತಿಳಿ ಹಸಿರು ಚಿಗುರು ಮರಗಿಡಗಳು ದಾರಿಯಲಿ ಯಾರ್‍ಯಾರೋ ದಾಟಿ ಹೋದ ಹೆಜ್ಜೆಗಳು...

ಆ ಸಮುದ್ರದಾಚೆಯಲ್ಲಿ ಮುಗಿಲು ನೆಲವ ಕೂಡುವಲ್ಲಿ ಹಿರಿಯಲೆಗಳ ಮಡಿಲಿನಲ್ಲಿ ದೀಪವೊಂದಿದೆ ನಿನ್ನ – ಜೀವವಲ್ಲಿದೆ ! ನೆಲವಾಗಸ ಸೇರುವಂತೆ ನಮ್ಮಿಬ್ಬರ ಒಲವಿನ ಜತೆ ಆ ಕೊನೆಯಲ್ಲಿ ಒಂದೆ ಅಂತೆ ನನ್ನ ಕನಸದು ಬರಿಯ – ಹೊನ್ನ ಕನಸದು ಅಂತು ಅ...

ಪ್ರೀತಿ ಇಲ್ಲದ ಮೇಲೆ ಇಬ್ಬರ ಸಂಗಮವಾದೀತು ಹೇಗೆ? ತಮ್ಮ ಸಂಸಾರದ ರಥ ಸಾಗೀತು ಹೇಗೆ? ದಿನಂಪ್ರತಿ ಕಾಲ ಕಳೆಯುತ್ತ ವಂಶದ ಕುಡಿ ಹೆಚ್ಚೀತು ಹೇಗೆ? ಪ್ರೀತಿ ಇಲ್ಲದ ಮೇಲೆ ಭೂಮಿ ಮೇಲೆ ಆಹಾರ ಧಾನ್ಯ ಬೆಳೆದೀತು ಹೇಗೆ? ಆಕಾಶದಿ ಮೋಡ ಕಟ್ಟಿತು ಹೇಗೆ? ನೆಲದ...

ಉದ್ದಕ್ಕೆ ಏಳು ಅಡ್ಡಕ್ಕೆ ಐದು ಸರಳುಗಳ ಕಿಟಕಿಯ ಕೆಳಗೆ ರೋಡು ಬಜಾರು ಮನೆ ಮಠ ಬಯಲು ಬಯಲು ಆಚೆ ಸಮುದ್ರ ಏರಿಳಿತ ಕೊರೆತ ಮೊರೆತ ಈಚೆ ಸಂತೆಗೆ ಹೋಗುವ ಹೊರೆಗಳ ಭಾರದ ಕೆಳ ಓರೆಕೋರೆ ರೇಖೆಗಳಲ್ಲಿ ಅಸ್ತಿತ್ವಗೊಂಡು ಮೂಡಿ ಮಾಯುವ ಮುಖಗಳು ಹರಿಯುತ್ತಿರುವ...

ಇವಳು ನನ್ನವ್ವ ತಂಪಿಗಾಗಿ ಕಾದವಳು ಹನಿ ಬೀಳದೆ ಒಡಲೆಲ್ಲ ಬಿರುಕು ಬಿರುಕು ಬರಗಾಲ ಒಳಗೂ ಹೊರಗು ಒಲೆಯ ಒಳಗಿನ ಬಿಸಿ ಕಾವು, ಕಾವಿನಲಿ ಬೆಂದ ಅವ್ವ ಹನಿಗಾಗಿ ಮೊಗವೆತ್ತಿ ನಡುನೆತ್ತಿಯ ಮೇಲಿನ ಕಪ್ಪು ಮೋಡಕ್ಕಾಗಿ ಕಾಯುತ್ತಲೇ ಇರುವಳು ಬೆಳ್ಳ ಬೆಳ್ಳನೆ ...

ಕನ್ನಡಿಯೊಳಗೇ ಅವಿತು ಕುಳಿತು ಬಿಂಬಕ್ಕೆ ಪಾದರಸದ ಪರದೆಯೆಳೆದು ಪಾರದರ್ಶಕದ ಪ್ರತಿಬಿಂಬವಾಗಿ ಕನ್ನಡಿಯಾಚೆಯ ಮೂರ್ತಬಿಂಬದ ಅಮೂರ್ತ ಪಡಿಯಚ್ಚು ಭೂಮಿ ಮೇಲೆಷ್ಟೋ ಒಳಗೂ ಅಷ್ಟೇ! ಕನ್ನಡಿಗೆ ಮುಖಾಮುಖಿಯಾದ ಪ್ರತಿಯೊಂದು ಬಿಂಬಕ್ಕೆ ತಕ್ಕ ಪ್ರತಿರೂಪ ಪಾತ್...

ಒಂದು ಪೈಸೆ ಫೀಸು ಇಲ್ಲದ ಪುಕ್ಕಟೆ ಸಲಹೆ ಕೊಡ್ತೀನಿ ಕೇಳಿ ಬಾಸು ಕೋಪ ಬಂದು ಜಗಳಾಡ್ತಿರೊ ಹೆಂಡ್ತಿ ಹತ್ತಿರ ಮಾತಿಗಿಂತ ಮೌನವೇ ಲೇಸು ತಲೆಬಿಸಿಯಾದರೆ ಆಸುಪಾಸ್ ನಲ್ಲಿರೋ ಹೋಟೆಲ್ಲಿಗೆ ಹೋಗಿ ಕುಡಿಯಿರಿ ಒಂದು ದೊಡ್ಡ ಗ್ಲಾಸು ತಣ್ಣನೆಯ ಐಸು ಹಾಕಿದ ಜ್...

ಕವಿಯ ಹೃದಯ; ಕವನದುದಯ ಸವಿಯ ರಸವು; ದೇವನೊಲವು ಓ ಅವನ ಹೃದಯ ಕಲೆಯು ಆವ ಲೀಲೆಯೋ ಕಾವ್ಯದೊಲವು ಎಲ್ಲ ಕಲೆಗಾರನಹುದು ಕವಿಯು ಇವನ ಮನವು ಸ್ವೈರ ಮನೆಯು ಹರುಷ ಹೊರಸು ಹೆಣೆವ ಕಲೆಯು ವಿರಸ ಹೊನಲು ತರುವ ಕವಿಯು ಅವನ ಉಕ್ತಿ ಓಟ; ಓ ಹೃದಯ ಶಲೆ! ಕಾಣದದನು ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....