ನಿನ್ನಿರುಳು ಕನಸೊಂದ ಕಂಡೆ, ಅತ್ತ ಕಡೆಯಲಿ, ಪೂರ್ವಕ್ಕೆ, ಕೊಂಚ ಓರೆಗೆ ತೋರುತಿರಲು ಎಳೆ ಚಂದ್ರ, ಕಿಟಕಿಯ ಬಳಿಯೇ ಕುಳಿತೆನ್ನ ಮುಂಗಡೆಗೆ ಕಂಬಿಗಳ ನೆರಳು ಮಲಗಿತ್ತು. ಅತ್ತಿತ್ತ ತುಸು ಬೆಳಕು, ಪಕ್ಕದಲ್ಲಾವುದೋ ಕಿರುಗತೆಯ ಬೆಳೆ ಕೂಡಿಸಿದ ಸಣ್ಣ ಕತೆ...

ಕವಿಯ ಹುಚ್ಚು ಮನಸ್ಸು ಕುಳಿತಲ್ಲಿ ಕೂರುವುದಿಲ್ಲ ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ನೆಗೆಯುತ್ತಲೇ ಇರುತ್ತದೆ ಅದು ಉದಾತ್ತವಾಗಲು ಬಯಸುತ್ತಲೇ ಸಣ್ಣತನವನ್ನೂ ತೋರಿಸುತ್ತದೆ ತಥಾಗತನ ಧ್ಯಾನದಲ್ಲಿ ಕೂಡ ಯೋನಿ ಶಿಶ್ನಗಳ ಕುರಿತು ಯೋಚಿಸುತ್ತದ...

ಅಲ್ಲಿ ವಿದ್ವತ್ತಿನದೇ ಮೇಲುಗೈ ದ್ವೈತಕ್ಕೂ ಅಲ್ಲ, ಅದ್ವೈತಕ್ಕೂ ಅಲ್ಲ ಅಸಲಿಗೆ ದ್ವೈತ ಅದ್ವೈತಗಳೇ ಇಲ್ಲ, ಎಲ್ಲ ವಿದ್ವತ್ತಿನ ಕರಾಮತ್ತು ಹೊಸತು ಹುಡುಕುವ ಪರಿ ಪರಿಪರಿಯಾಗಿ ಇನ್ನೊಂದೆಡೆ ಕಾಂಚಾಣದ ಕುಣಿತ ಸತ್ಯಕ್ಕೂ ಸ್ಥಳವಿಲ್ಲ ಜ್ಞಾನಕ್ಕೂ ಬೆಲೆಯ...

ಒಂದಲ್ಲ ಒಂದು ದಿನ ನಿನ್ನ ಕನಸಿನಲ್ಲಿ ಸದ್ದಿಲ್ಲದೆ ಸುಳಿದು ಬರುವವಳೇ…. ನಾನು ಜಾಡಿಸಿ ಒದ್ದೋಡಿಸಿದರೆ ಬಾಗಿಲ ಕಟಕಟಾಯಿಸಿವೆನು. ನಿನ್ನ ಪೊಗರು ಮಾತೆಲ್ಲ ಗಾಳಿಯಲ್ಲಿ ತೂರಿ ಹೋಗುವ ಹಾಗೆ ಗೆಜ್ಜೆ- ಝಣಗುಟ್ಟಿಸುವೆನು, ಕಣ್- ತಪ್ಪಿಸಿಯಾದರೂ ಒಳನುಗ್...

ಯಕ್ಕಯ್ಯ ಜೋಗಯ್ಯ ಜಲ್ಲೆಂದು ಬಾರಯ್ಯ ಯಲ್ಲವ್ನ ಸಿಂಗಾರ ಕಾಣಬಾರೊ ಒಳಗಣ್ಣು ಜಮದಗ್ನಿ ಹೊರಗಣ್ಣು ಕಾಳಾಗ್ನಿ ನೋಡಲ್ಲಿ ಕೂಗ್ಯಾನೂ ಪರಸುರಾಮೊ ಯಲ್ಲಾರ ಗುಡ್ಡಕ್ಕ ಯಲ್ಲವ್ನ ಕೊಳ್ಳಕ್ಕ ಉದ್ದುದ್ದ ಉದೊಯೆಂದು ಏರಬಾರೊ ನಲ್ಲಪ್ಪ ನಿಲ್ಲಪ್ಪ ಸಂಗಪ್ಪ ಶಿವನ...

ಬಳಲಿದ ಬಾಳಿಗೆ ಭೆರವಸೆಯಾಗಲಿ ಇಂದಿನ ಸಂಕ್ರಾಂತಿ ಒಣಗಿದ ಹಾಳೆಗೆ ಹೊಸ ಮಳೆ ಸುರಿಯಲಿ ಮೂಡಲಿ ಶುಭಶಾಂತಿ ದಿಕ್ಕುಗಳೆಲ್ಲವು ಪ್ರಸನ್ನವಾಗಲಿ ಬೀಸಲಿ ತಂಗಾಳಿ, ಬತ್ತಿದ ನದಿಗಳ ಪಾತ್ರವು ತುಂಬಲಿ ಗಂಗೆಯೆ ಮೈತಾಳಿ, ತೂಗುತಿರಲಿ ಹೊಲಗದ್ದೆಗಳು ತೆನೆಯ ಹಾ...

ಆಕಾರ ತಪ್ಪುವಂತಿಲ್ಲ ಹದ ಮೀರುವಂತಿಲ್ಲ ರೊಟ್ಟಿ ಸದಾ ಗುಂಡಗೇ ಇರಬೇಕೆಂಬ ಹಠ ಹಸಿವೆಗೆ. ಯಾಂತ್ರಿಕ ಮಾಟದ ಕಟ್ಟಳೆ ಮೀರಿ ಪೊಗರೆಂದರೂ ಸರಿ ಚಿತ್ತ ಚಿತ್ತಾರದ ವಿಶಿಷ್ಟಾಕೃತಿಗಳ ರೊಟ್ಟಿ ಅರಳುತ್ತಲೇ ಜೀವಂತ....

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...