ಆಕಾರ ತಪ್ಪುವಂತಿಲ್ಲ
ಹದ ಮೀರುವಂತಿಲ್ಲ
ರೊಟ್ಟಿ ಸದಾ ಗುಂಡಗೇ
ಇರಬೇಕೆಂಬ ಹಠ ಹಸಿವೆಗೆ.
ಯಾಂತ್ರಿಕ ಮಾಟದ
ಕಟ್ಟಳೆ ಮೀರಿ
ಪೊಗರೆಂದರೂ ಸರಿ
ಚಿತ್ತ ಚಿತ್ತಾರದ
ವಿಶಿಷ್ಟಾಕೃತಿಗಳ ರೊಟ್ಟಿ
ಅರಳುತ್ತಲೇ ಜೀವಂತ.
ಆಕಾರ ತಪ್ಪುವಂತಿಲ್ಲ
ಹದ ಮೀರುವಂತಿಲ್ಲ
ರೊಟ್ಟಿ ಸದಾ ಗುಂಡಗೇ
ಇರಬೇಕೆಂಬ ಹಠ ಹಸಿವೆಗೆ.
ಯಾಂತ್ರಿಕ ಮಾಟದ
ಕಟ್ಟಳೆ ಮೀರಿ
ಪೊಗರೆಂದರೂ ಸರಿ
ಚಿತ್ತ ಚಿತ್ತಾರದ
ವಿಶಿಷ್ಟಾಕೃತಿಗಳ ರೊಟ್ಟಿ
ಅರಳುತ್ತಲೇ ಜೀವಂತ.