ಒಂದನ್ನೊಂದು ಅಣಕಿಸುವಂತಿವೆ ಅವು! ಅದೇ ಮೈ ಅದೇ ಬಣ್ಣ ಅದೇ ನಿಲುವು ಅದೇ ಬಾಲದ ಅದೇ ಡೊಂಕು ಕಣ್ಣುಗಳಲ್ಲೂ ಅದೇ ಕವಿದ ಮಂಕು ಆದರೆ-ತಿಂಗಳು ನೆತ್ತಿಯ ಮೇಲೆ ಎದ್ದು ತೆಂಗಿನ ಸೋಗೆಗಳಲ್ಲಿ ಆದಾಗ ಸದ್ದು ಒ೦ದು ಭಯದಿಂದ ಹುಯ್ಯಲಿಡುತ್ತದೆ ಇನ್ನೊಂದು ಮಾತ...

ಕುಲಬಂಧು ಕೆಲದಲ್ಲೇ ಪರದೇಶಿಯಾಗುವನು ಬದುಕಿದ್ದು ನಿಷ್ಕ್ರೀಯನು ಜಡ ದೇಹದೊಡೆಯನು ಹಗಲಿರುಳು ಮಲಗಿರಲು ಸಾಧನೆಯು ಹೇಗೆ? ಗಾಳಿ ಗೋಪುರ ಕಟ್ಟಿ ಮನಸಲ್ಲೇ ಮೆಲ್ಲೆ ಗೂಡಂಗಡಿಯ ಕಟ್ಟೆ ಹಾದಿ ಬೀದಿಯ ಚಿಟ್ಟೆ ತೊಟ್ಟಿಕ್ಕಿ ಜಿನುಗುತಿದೆ ಸಂಪತ್ತು ರಾಶಿ ಅರ...

ನಾನು ನನ್ನ ದೇಶದ ಗಡಿಯನ್ನು ಕೊಳೆಯದ ಹೆಣಕ್ಕೆ ಹೋಲಿಸುತ್ತೇನೆ. ನಿತ್ಯ ಕಾವಲು ಕಾಯುವ ನೂರು ಕಣ್ಣುಗಳಿಗಾಗಿ ದುಃಖಿಸುತ್ತೇನೆ. ಹಸಿರು ಉಸಿರಾಡದ ಮರಗಳಿಗಾಗಿ ಗೂಡು ಕಟ್ಟದ ಹಕ್ಕಿಗಳಿಗಾಗಿ ಬೇವನ್ನೆ ನೆಚ್ಚಿ ಸಾಯುವ ಕೋಗಿಲೆಗಳಿಗಾಗಿ ದುಃಖಿಸುತ್ತೇನೆ...

ದೂರದಲ್ಲೆಲ್ಲೋ ಇದ್ದದ್ದು ಹತ್ತಿರಕ್ಕೆ ಹತ್ತಿರದಲ್ಲಿದೆಯೆಂದುಕೊಂಡದ್ದು ದೂರಕ್ಕೆ ಈ ದೂರ ಹತ್ತಿರ, ಅಮಾವಸ್ಯೆ ಹುಣ್ಣಿಮೆ ಇದ್ಯಾವುದೂ ನಿಜವಲ್ಲ; ಎಲ್ಲ ಮನಸೊಳಗೆ ಕನಸುಗಳ ತನ್ನಷ್ಟಕ್ಕೆ ಹೆಣೆವ, ಕ್ಯಾಮರಾದ ಝೂಮ್ ಲೆನ್ಸ್ಗಳ ಮಹಿಮೆ. *****...

ಬಾನ ಬಟ್ಟಲ ತುಂಬಿ ಬೆಳಗುವೆ. ಜ್ಞಾನ ದೀಪದ ಆರತಿ! ನೂರು ಮೆಟ್ಟಿಲು ಏರಿ ಕೂಗಿದೆ ಜಗದ ಬಟ್ಟಲ ಗಟ್ಟಕೆ ಮೂರು ಲೋಕಾ ಮೀರಿ ಹಾರಿದೆ ಶಿವನ ಸುಂದರ ತೋಟಕೆ ಕಣ್ಣ ಅಂಚಲಿ ಮಿಂಚು ಸಂಚಲಿ ಪಕ್ಕ ಬೀಸುತ ಹಾರಿದೆ ಮಣ್ಣ ಲೋಕಾ ಹುಣ್ಣ ಲೋಕಾ ಕಲ್ಪ ಕಲ್ಪವಮೀರಿದ...

ಉರುಳಿ ಅರಿವಿನ ಮೋರಿಯಲ್ಲಿ ನರಳುತ್ತಿರುವೆ ಇಲ್ಲಿ ನೆಮ್ಮದಿ ಎಲ್ಲಿ ? ಕೊಳೆತು ನಾರುತ್ತಿರುದ ಹಳೆಯ ಭೂತ ; ಅದರ ಮೇಲೇ ಮೊಳೆತ ಹೊಸ ಕನಸುಗಳ ತುಡಿತ, ಎರಡು ಗಡಿಗಳ ನಡುವೆ ಒಡೆದು ಬಿದ್ದಿದೆ ರೂಪ. ಹೊಕ್ಕುಳಿನ ಹುರಿ ಕಡಿದು ಹಳಿ ಬಿಟ್ಟು ಹೊರನಡೆದು ಪ...

ಹಠಾತ್ತಾಗಿ ಬಂದ ಚಡಪಡಿಕೆ ಅದ್ಹೇಕೋ ನಿನ್ನ ಪಾದಗಳು ಒಮ್ಮೆಲೆ ನೆನಪಾದವು ಪಾದಗಳ ಬಳಿ ಕುಳಿತು ಸರಿರಾತ್ರಿ ಧ್ಯಾನಿಸಿದ ನೆನಪು ಇಡೀ ದೇಹವನ್ನು ಉಂಡ ಮೇಲೆ ಉಳಿದದ್ದೇನು?? ತೃಪ್ತಿಯಿಂದ ಅಪ್ಪಿ ಮಲಗುವುದಷ್ಟೇ ಕನಸು ನನಸು ಬೀಜ ಮೊರೆತದ ಜೀವ ಮಿಡಿತದ ಸ...

ಕಾಲಕಾಲಕ್ಕೆ ತಿರುಗಿ ತಿರುಗಿ ಏರಿ ಇಳಿದ ರಾಗತಾಳಕ ಅಮ್ಮ ಒಂದೇ ಲಯವಿಟ್ಟಳು ಜೋಕಾಲಿ ಜೀಕಿ ರಾತ್ರಿ ಕತ್ತಲೆ ಹಗಲುಬೆಳಕು ಹದವಿಧದ ಚಲನೆಗೆ ಅಮ್ಮ ಚಾಲನೆ ಕೊಟ್ಟಳು ಕಂದನ ಮೆದುಬೆರಳುಗಳ ಹಿಡಿದು. ಮತ್ತೆ ಮತ್ತೆ ಸುತ್ತ ಸುಳಿವ ಬಿದ್ದು ಏಳುವ ಸಾವಿರಾರು...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...