ಬಾನ ಬಟ್ಟಲ ತುಂಬಿ ಬೆಳಗುವೆ.
ಜ್ಞಾನ ದೀಪದ ಆರತಿ!

ನೂರು ಮೆಟ್ಟಿಲು ಏರಿ ಕೂಗಿದೆ
ಜಗದ ಬಟ್ಟಲ ಗಟ್ಟಕೆ
ಮೂರು ಲೋಕಾ ಮೀರಿ ಹಾರಿದೆ
ಶಿವನ ಸುಂದರ ತೋಟಕೆ

ಕಣ್ಣ ಅಂಚಲಿ ಮಿಂಚು ಸಂಚಲಿ
ಪಕ್ಕ ಬೀಸುತ ಹಾರಿದೆ
ಮಣ್ಣ ಲೋಕಾ ಹುಣ್ಣ ಲೋಕಾ
ಕಲ್ಪ ಕಲ್ಪವಮೀರಿದೆ

ಬಂತು ಬಂತೈ ಬಂದು ನಿಂದಿತು
ಸತ್ಯ ಲೋಕವು ಮೂಡಿತು
ಹೂವು ಅರಳಿತು ಹಣ್ಣು ನಕ್ಕಿತು
ಹಕ್ಕಿ ಕಂಠವು ಹಾಡಿತು

ಏನು ಕೊಳಗಾ ಬೆಳ್ಳಿ ಬಳಗಾ
ನೋಡು ಬೆಳಗಿನ ದೇವನಾ
ಹಕ್ಕಿ ಕಂಟವು ಉಕ್ಕಿ ಹಾಡಿತು
ಕೇಳು ಕೋಟಿಯ ಗಾಯನಾ
*****