ಮೇಷ್ಟ್ರು :- ಹೋಮ್ ವರ್ಕ್ ಯಾಕೆ ಮಾಡಲಿಲ್ಲ?
ಶೀಲಾ :- ಕರೆಂಟ್ ಇರಲಿಲ್ಲ
ಮೇಷ್ಟ್ರು : ಕ್ಯಾಂಡಲ್ ಹಚ್ಚಿಕೊಳ್ಳಬೇಕಾಗಿತ್ತು
ಶೀಲಾ :- ಮ್ಯಾಚ್‌ಬಾಕ್ಸ್ ಇರಲಿಲ್ಲ
ಮೇಷ್ಟ್ರು :- ನಿಮ್ಮ ಮನೆಯಲ್ಲಿ ಮ್ಯಾಚ್ಬಾಕ್ಸ್ ಇರಲಿಲ್ಲವೇ?
ಶೀಲಾ :- ದೇವರ ಮನೆಯಲ್ಲಿತ್ತು…
ಮೇಷ್ಟ್ರು :- ತೆಗೆದುಕೊಂಡು ಹಚ್ಚಿಕೊಳ್ಳಬೇಕಾಗಿತ್ತು
ಶೀಲಾ :- ಸ್ನಾನ ಮಾಡಿರಲಿಲ್ಲ
ಮೇಷ್ಟ್ರು :- ಯಾಕೆ ಮಾಡಲಿಲ್ಲ
ಶೀಲಾ :- ನೀರು ಇರಲಿಲ್ಲ
ಮೇಷ್ಟ್ರು :- ನೀರು ಯಾಕೆ ಇರಲಿಲ್ಲ?
ಶೀಲಾ :- ಮೋಟಾರು ಆನ್ ಆಗ್ಲೇ ಇಲ್ಲ
ಮೇಷ್ಟ್ರು :- ಮೋಟಾರ್ ಯಾಕೆ ಆನ್ ಆಗ್ಲಿಲ್ಲ
ಶೀಲಾ :- ಅದೇ ಸಾರ್ ಕರೆಂಟ್ ಇರಲಿಲ್ಲ
*****