ದೂರದಲ್ಲೆಲ್ಲೋ ಇದ್ದದ್ದು ಹತ್ತಿರಕ್ಕೆ
ಹತ್ತಿರದಲ್ಲಿದೆಯೆಂದುಕೊಂಡದ್ದು ದೂರಕ್ಕೆ
ಈ ದೂರ ಹತ್ತಿರ, ಅಮಾವಸ್ಯೆ ಹುಣ್ಣಿಮೆ
ಇದ್ಯಾವುದೂ ನಿಜವಲ್ಲ;
ಎಲ್ಲ ಮನಸೊಳಗೆ ಕನಸುಗಳ ತನ್ನಷ್ಟಕ್ಕೆ
ಹೆಣೆವ, ಕ್ಯಾಮರಾದ ಝೂಮ್ ಲೆನ್ಸ್ಗಳ ಮಹಿಮೆ.
*****