ಹಳೆಯೂರ ಧಿಕ್ಕರಿಸಿ ಹೊಸ ಊರುಗಳ ಕನಸಿ ಕಟ್ಟಿದ್ದ ಕೆಡವಿ ಹೊರಟಿರುವ ಹೆಣ್ಣೆ ತಿರುಗಿ ನೋಡೇ ಒಮ್ಮೆ ಇಳಿದ ದಿನ್ನೆ “ನಾ ಮುಡಿದ ಹೂವು, ನಾ ತೊಟ್ಟ ಕೈಬಳೆ, ಹಣೆಗೆ ಇಟ್ಟ ಸಿಂಧೂರ, ಎದೆಕವಚ ನೀನೇ” ಎಂದು ನನ್ನೂರ ದಾರಿಯನು ತೂರಿ ತೇರಿನ ...

ಕತ್ತಲಲ್ಲಿ ಕಣ್ಣು ಮಿಟುಕಿಸಿದಂತೆ, ಕಾಣಲಾಗದ ಹಸಿವಿನ ಒಡಲಾಳದಲ್ಲಿ ರೊಟ್ಟಿಗೊಂದು ಪುಟ್ಟ ಘನವಾದ ಸ್ಥಾನವಿದೆಯಂತೆ. ಪ್ರತ್ಯಕ್ಷ ನೋಡಲಾಗದ ಸತ್ಯ ಇದ್ದರೂ ಇರದಂತೆ....

ಮಳೆಗೂ ಇಳೆಗೂ ಜಗಳ ಅದಕಾಗಿ ಬಲಿಯೂ ನಡೆದು ಹೋಯಿತು *** ನದಿಗೂ ಕ್ರೌರ್ಯ ಇದೆ ದಡದಲ್ಲಿನ ಬದುಕು ಸ್ಮಶಾನವಾಗಿದೆ *** ಭೂಮಿತಾಯಿ ಮೇಲೆ ಮುಗಿಲ ಮಗಳ ಮುನಿಸು ನದಿ ಪ್ರವಾಹವಾಗಿ ಬಯಲ ಬದುಕು ಮತ್ತೆ ಬಯಲಾಗಿಸಿತು **** ಮನುಷ್ಯ ಕಟ್ಟಿದ್ದನ್ನೆಲ್ಲಾ ಮಳ...

ಯಾವ ವಿಷಾಧಗಳಿಲ್ಲ ಚೌಕಟ್ಟು ಮೀರಿ ಅಂಕೆ‌ಇಲ್ಲದ ಆಕಾರ ಸುರುಳಿ ಸುತ್ತಿಯಾಗಿ ಚೌಕಟ್ಟು ದಾಟಿ ನದಿ ಹರಿದು ಬಯಲು ಸೇರಿದ ಬಯಕೆ ನನ್ನದಲ್ಲದ್ದು. ಕಿಟಕಿಗಳ ತಬ್ಬಿದ ಗೋಡೆಗಳಾಚೆ ಇದೆ ನೀಲಬಾನ ತುಂಬ ಚುಕ್ಕಿಗಳು ಯಾವ ತಡೆಯಿಲ್ಲದೇ ತೇಲಿ ಮೀರಿ ಬೆಳದಿಂಗಳ...

ಬರಬರನೆ ಪ್ರೆಶರ್‍ ಏರುವ ಟ್ಯೂಬ್ ಒಡೆಯಬೇಕೆಂದಾಗ – ಟ್ಯೂಬ್‌ಲೈಟ್ ಟ್ಯೂಬಿನ ತಾಳ್ಮೆ ನಂತರದ ಶುಬ್ರ ಬೆಳಕು ನೋಡುತ್ತಿದ್ದಂತೆಯೇ ನಾರ್ಮಲ್ ಆಗಿತ್ತು ಬ್ಲಡ್ ಪ್ರೆಶರ್‍. *****...

ನೆನಪಿಸಿಕೊಳ್ಳಿ ರೆಡಿಂಗ್‌ನಿಂದ ಬ್ರೌಟನ್‌ವರೆಗಿನ ನಮ್ಮ ಯಾತ್ರೆಯನ್ನು. ಇಂಗ್ಲೆಂಡ್ ಮುಗಿದು ವೇಲ್ಸ್ ಮೊದಲಾಗುತ್ತಲೆ ಬದಲಾದ ಹವೆಯನ್ನು. ಬ್ರೌಟನ್ ಪಬ್ಬಿನಲ್ಲಿ ಸಂಜೆ ಕೈಗೊಂಡ ಮದ್ಯಪಾನ–ತಟಕ್ಕನೆ ಆರಂಭವಾದ ಬ್ಯಾಂಡಿಗೆ ತಾಳ ಹಾಕುತ್ತ ನೀವು...

ಅತಿ ಜರೂರು ಕರೆ ಓಗೊಟ್ಟು ನಡೆಯಲೇ ಬೇಕು ದೂಡಲಾಗದು ಮುಂದೆ ಹೇಳಲಾಗದು ನೂರು ನೆಪ ಅವ ದೂರ್ತನೆಂದರೂ ಬದುಕಿಗೆ ಬಾರದಿರೆ ಸಾಕೆಂದರೂ ದುತ್ತೆಂದು ಹೆಗಲೇರಿ ತಳ್ಳಿ ಬಿಡುವ ಕೂಪಕ್ಕೆ ಮುಗ್ಧ ಎಸಳುಗಳ ಕೂಡ ಕೊಚ್ಚಿ ಹಾಕುವ ಕ್ರೂರ ಕಣ್ಣೀರ ಧಾರೆಗೂ ಆರ್ತನ...

ಹೇಳಬಾರದು, ಅಂದುಕೊಂಡರೂ ದಿಗ್ಗನೆ ಎದೆಗೆ ಒದ್ದು ದುಡುದುಡು ಓಡಿಬಂದು ಗಂಟಲಲ್ಲಿ ಗಕ್ಕನೆ ಕೂತು ಹೊರಳಿ-ತೆವಳಿ ನಾಲಿಗೆಯ ತುದಿಗೆ ಬಂದು ನಿಂತಾಗ ಕಿಕ್ಕಿರಿದ ಸಭಾಂಗಣದಲ್ಲಿ ಹೆಜ್ಜೆತಪ್ಪಿದ ನರ್ತಕಿಯಂತೆ ಗೆಜ್ಜೆ ಧ್ವನಿಗಳೂ ಅಸ್ಪಷ್ಟ ಹಾವ ಭಾವಗಳು ಮ...

ಇಂದು ಒಂದು ಕರಿಕಾಗೆ ಕೆರೆ ಅಂಚಿನ ನೀರಲ್ಲಿ ಕತ್ತುವರೆಗೆ ಮುಳುಗುವುದು, ಮೇಲೆದ್ದು ರೆಕ್ಕೆ ಬಡಿಯುವುದು, ಮತ್ತೆ ಮುಳುಗುವುದು, ಎದ್ದೆದ್ದು ರೆಕ್ಕೆ ಬಡಿಯುವುದು ಮಾಡುತ್ತಲೇ ಇತ್ತು. ಪ್ರಾಯಶಃ ಚೆನ್ನಾಗಿ ಸ್ನಾನ ಮಾಡಿ ಬಿಳೀ ಬೆಳ್ಳಕ್ಕಿಯಂತಾಗಿ ಬಿ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...