ಮಳೆಗೂ ಇಳೆಗೂ
ಜಗಳ
ಅದಕಾಗಿ ಬಲಿಯೂ
ನಡೆದು ಹೋಯಿತು
***
ನದಿಗೂ ಕ್ರೌರ್ಯ ಇದೆ
ದಡದಲ್ಲಿನ ಬದುಕು
ಸ್ಮಶಾನವಾಗಿದೆ
***
ಭೂಮಿತಾಯಿ ಮೇಲೆ
ಮುಗಿಲ ಮಗಳ
ಮುನಿಸು
ನದಿ ಪ್ರವಾಹವಾಗಿ
ಬಯಲ ಬದುಕು
ಮತ್ತೆ ಬಯಲಾಗಿಸಿತು
****
ಮನುಷ್ಯ ಕಟ್ಟಿದ್ದನ್ನೆಲ್ಲಾ
ಮಳೆ ಕಸಿಯಿತು
ನದಿಯ ಸುತ್ತಲಿದ್ದವರ
ಕನಸು‌ ಕುಸಿಯಿತು
***
ನದಿ ದಂಡೆ , ನಗರ ಪಟ್ಟಣದಿ
ನಿನ್ನದೇ ಸುದ್ದಿ
ಯಾಕೆ ಹೀಗೆ ಕುದಿಯುತಿರುವೆ
ಮಳೆಯೇ ?
****
ಹೊಲ ಗದ್ದೆ ರೈತ
ವ್ಯಾಪಾರಿ, ಪೂಜಾರಿ, ದೇವರು, ತಾಯಿ, ಮಗು, ಅಜ್ಜ
ಎಲ್ಲರೂ ಸೋತಿದ್ದಾರೆ
ಕೋಪ ಇಳಿದಿಲ್ಲವೇ ಮಳೆಯೇ ??
*****