ಕತ್ತಲಲ್ಲಿ ಕಣ್ಣು
ಮಿಟುಕಿಸಿದಂತೆ,
ಕಾಣಲಾಗದ ಹಸಿವಿನ
ಒಡಲಾಳದಲ್ಲಿ
ರೊಟ್ಟಿಗೊಂದು ಪುಟ್ಟ
ಘನವಾದ ಸ್ಥಾನವಿದೆಯಂತೆ.
ಪ್ರತ್ಯಕ್ಷ ನೋಡಲಾಗದ ಸತ್ಯ
ಇದ್ದರೂ ಇರದಂತೆ.