ಲೋಕದ ಮನುಜರ ಚಿಂತೆಯು ಕಾಡುವುದು ಚಿತೆಯಾಗಿ ಚಿಂತೆಯು ಬೇಡ ಚಿತೆಯು ಬೇಡ ಬೇಡವೇ ಬೇಡ ಅವರಿವರ ಸಹವಾಸ|| ಸಂಸಾರ ನಿಸ್ಸಾರ ಬಂಧು ಬಳಗ ತಾನವಿತ್ತಾನ ಬಿತ್ತು ನೆಮ್ಮದಿಯ ಬೀಜ ಮರವಾಗೀನ ಫಲ ರುಚಿಯು ಚಿಂತೆಯು ಬೇಡವೇ ಬೇಡ ನಮಗೆ|| ಆಸರೆ ಸೆರೆಯಾಸರೆ ಬದು...

ಗೋಲು ಗೋಲು ಗೋಲಾಕಾರ ಪರಿಭ್ರಮಿಸುವ ರೊಟ್ಟಿ ಬೀದಿಯಳೆಯುತ್ತಲೇ ಒಳಗೆ ಬೆಳೆಯುತ್ತಲೇ ಬತ್ತಲಾಗುತ್ತದೆ. ಆ ಮಹಾ ಬೆಳಕಿನಲಿ ಮಿಂದು ತಣಿಯುತ್ತದೆ ವಿರಕ್ತಿಯಲಿ ಅಂತರಂಗ ಮಾಗಿಸಿ ತಾನು ತಾನಲ್ಲವೆಂಬಂತೆ ಬಹಿರಂಗದಲಿ ಹಸಿವೆಗೆ ಸುಮ್ಮನೆ ಮಣಿಯುತ್ತದೆ. **...

ಒಡಲ ಕುಂಡದಲ್ಲಿ ಹೀಗೆ ನರಳಿ ಹೊರಳಿ ಅರಳುವ ಒಂಟಿತನಕ್ಕೆ ಪಕ್ಕದಲ್ಲಿ ಮರದಲ್ಲಿ ಕುಳಿತು ಹಕ್ಕಿ ಹಾಡಿತು, ರೆಕ್ಕೆ ಬಿಚ್ಚಿ ಹಾರಲು ನೀಲಬಾನುವಿನ ಆಳ ನಿರಾಳ ಲೋಕಕ್ಕೆ ಕಣ್ಣುಗಳು ಹೊರಳಿದವು, ವಿವಶವಾಗಿ ಚಂಗನೆ ಚಿಗುರಿದ ವಿಸ್ಮಯಗಳು ಕಂಡು. ರಾಗವಿಲ್ಲ...

ಕಾಮನಬಿಲ್ಲು ಅಷ್ಟೂ ಬಣ್ಣಗಳನ್ನು ಚೆಲ್ಲಿತು ನನಗೆ ನಾನೆ ಕೇಳಿಕೊಂಡೆ ನಿನಗೆ ಯಾವ ಬಣ್ಣ ಇಷ್ಟ? ಗೊರಟೆ, ಗುಲಾಬಿ, ಸೇವಂತಿಗೆ ದಾಸವಾಳ, ಕನಕಾಂಬರ, ಮಲ್ಲಿಗೆ ಹೆಣೆದು ನಿಂತವು ಅನ್ನಿಸಿತು: ಆಯ್ಕೆ ಬಹಳ ಕಷ್ಟ. ೨ ಹುಲಿ, ಕರಡಿ, ಆನೆ, ಅಳಿಲು? ಜಿಂಕೆ,...

ಜಗದೊಳಗೆ ಹುಟ್ಟಿಬೆಳೆದರೂ ಜನರೊಳಗೆ ಬೆಳೆಯುವುದೇ ಸಾಧನೆ ವೇಮುಲ. ಇಲ್ಲದ ಮೂಲದಲ್ಲೇ ಹುಟ್ಟಿದರೂ ಇಲಾಖೆಗಳನ್ನೇ ಕಟ್ಟಬಲ್ಲವರು ಇಲ್ಲಿಹರು ಇದ್ದರಮನೆಯ ಮಾರಿ ತಿಂದವರು ಇಹರು ಪರಿಪರಿಯ ಪಂಡಿತರು, ಪಾಮರರು, ಅರೆಬರೆಯ ಶಿಕ್ಷಿತರು ಎಲ್ಲರ ಗೂಡಲ್ಲವೇ ಇದ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...