ಗೋಲು ಗೋಲು ಗೋಲಾಕಾರ
ಪರಿಭ್ರಮಿಸುವ ರೊಟ್ಟಿ
ಬೀದಿಯಳೆಯುತ್ತಲೇ
ಒಳಗೆ ಬೆಳೆಯುತ್ತಲೇ
ಬತ್ತಲಾಗುತ್ತದೆ.
ಆ ಮಹಾ ಬೆಳಕಿನಲಿ
ಮಿಂದು ತಣಿಯುತ್ತದೆ
ವಿರಕ್ತಿಯಲಿ ಅಂತರಂಗ ಮಾಗಿಸಿ
ತಾನು ತಾನಲ್ಲವೆಂಬಂತೆ
ಬಹಿರಂಗದಲಿ ಹಸಿವೆಗೆ
ಸುಮ್ಮನೆ ಮಣಿಯುತ್ತದೆ.
*****
Latest posts by ರೂಪ ಹಾಸನ (see all)
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೫ - April 13, 2021
- ಮೌನದೊಳಗೆ - April 7, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೪ - April 6, 2021