ತಾನ ತಂದ್ರನಾನಾ ನಾನಾ ತಂದ್ರನಾನಾ ತಂದನೊಂದಾನೋ ತಂದಾನಂದ್ರನಾನಾ ಮೊಲೆಗಾಲ ಪೂರೆ ಹೊಯ್ಲಿ ಭೂಮಿತನು ಯೆಲ್ಲೀ ಚಿಂಗಾರೆಲೆ ಮೇನೇ ಶಿರಿ ಬರ್‌ಲೋ ತಾನಾ ದಕ್ಕನ ಮೈಮುದರೀ ಯದ್ದಿ ಕುಲ್ಲಾ ನಾರಾಯಣಶ್ವಾಮೀ ಶಲ್ದ ಶಂಡುಕೀ ಕಟ್ಟನೆ ನಾರಾಯಣ ಸ್ವಾಮೀ ಹಾರನೇ ...

ದೇವರೇ ನಿನ್ನಲ್ಲಿ ನಾ ಬೇಡುವದೊಂದೆ ನನ್ನೆದುರಿನಲ್ಲಿ ಈ ಸಿರಿ ತೋರಬೇಡ ಈ ಸಂಪತ್ತಿನಲ್ಲಿ ನಾನು ಮುಳುಗಿ ಮುಳುಗಿ ನಿನ್ನ ಧ್ಯಾನವು ನಾನು ಮರೆಯದಿರಲಿ ದೇವರೇ ನಿನ್ನಲ್ಲಿ ನಾಬೇಡುವದೊಂದೆ ನನ್ನೆದುರಿನಲಿ ಈ ರತಿ ಮೋಹ ಬೇಡ ನಾನು ಈ ಸೌಂದರ್ಯದಲಿ ತೇಲಿ...

ಶತ-ಶತಮಾನಗಳಿಂದ ನಾವು ಬಂಧಿಗಳಾಗಿ ಹೋಗಿದ್ದೇವೆ ಮತ-ಧರ್ಮಗಳೆಂಬ ಉಕ್ಕಿನ ಕೋಟೆಯೊಳಗೆ ಈ ಕೋಟೆಯ ಅಡಿಪಾಯ ಬಹಳಷ್ಟು ಪ್ರಬಲ ಹಿಂದೆ, ಈಗ, ಇನ್ನೂ ಮುಂದೆಯೂ ಅಲುಗಾಡಿಸಲಾರದಷ್ಟು ನಾವು ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ, ಧರ್ಮವೆಂಬ ಕೂಡಿ- ಕಳೆ...

ಅರ್‍ಧದಲ್ಲೆ ಎದ್ದು ಹೋಗುವರು ನಾವು ಪೂರ್‍ಣತೆಯ ಮಾತೆಲ್ಲಿ ಬಂತು ಪೂರ್‍ಣಯ್ಯ ಅಯ್ಯಾ ಅರ್‍ಧವೇ ಯಾವಾಗಲೂ ಕತೆಯರ್‍ಧ ಹರಿಕತೆಯರ್‍ಧ ಕಾವ್ಯವರ್‍ಧ ಪುರಾಣವು ಅರ್‍ಧ ನಮ್ಮ ವತಾರವು ಅರ್‍ಧ ಸುಖವರ್‍ಧ ದುಃಖವರ್‍ಧ ಹರುಷವರ್‍ಧ ಸ್ಪರ್‍ಶವು ಅರ್‍ಧ ನಮ್ಮು...

ಪ್ರವಹಿಸಲಿ ಮುಗಿದ ಕೈ ಮೈನಳಿಗೆಯಿಂದೆಲ್ಲ ನಮನಂಗಳೆನ್ನ ನಾ ಸಿರಿಪದದ ತಡಿಗೆ, ಮಣಿಗೆಯೊಳು ಮದವಳಿದು ಋಣಗಳೆಲ್ಲವ ನೆನೆದು ತಿಳಿಮೆಯೊಳು ಹರಿವೆನ್ನ ಚೇತನದ ಜತೆಗೆ, ಕುಲ ವಿದ್ಯೆ ಸಂಸ್ಕಾರ ಹಿರಿತನಗಳೆಣಿಕೆಗಳ ತಡಿಕೆಯೊಳು ಹೊಳೆದ ಕಳೆಗಳು ಭೂತಿನಿಧಿಗೆ...

ಸೂರ್‍ಯ ಹುಟ್ಟುವ ಮುನ್ನ ಆ ಪುಟ್ಟ ಹುಡುಗಿಯ ಬರಿಗಾಲಿನ ನಡೆಗೆ ಆರಂಭ ಹರಡಿದ್ದ ತಲೆಗೂದಲು ಬಾಚಿಕೊಳ್ಳುವ ಗೊಡವೆಯಿಲ್ಲ ತಡವಾದರೆ ಚಿಂದಿ, ಪ್ಲಾಸ್ಟಿಕ್ ಬೇರೆಯವರು ಆಯ್ದುಕೊಂಡಾರು ಕಣ್ಣುಜ್ಜಿಕೊಳ್ಳುತ್ತಲೇ ಎದ್ದು ಕೊಳಕು ಚೀಲವೊಂದು ಹೆಗಲಿಗೇರಿಸಿ ಹ...

೧ ಮುಳ್ಳಗಳ್ಳಿ ಬಳಿಯೆ ನೀನು ಕಳ್ಳಿಕರಿಯ ಹುಳದ ಕೊಲೆಗೆ ಅಳಲಿ ಬಳಲಿ ಬಾಯಬಿಟ್ಟು ನೊಂದು ಬೆಂದು ಬೂದಿಯಾಗಿ ಕಾಣುತಿರುವೆಯ ಚಂದದಿಂಪು ಸಂದಿತೆಂದು ಸವೆಯುತಿರುವೆಯ ೨ ಕೋಟಗೀಟೆಯಂತೆ ಬೇಲಿ ಕೂಟಕೆಲ್ಲ ನಿನ್ನ ನಡಿಸೆ ಮಾಟವಾಗಿ ಮೆರೆದು ನಿಂದು ಸೊಬಗಿನಿಂ...

ಕನ್ನಡಕ್ಕೇನು ಕಮ್ಮಿ? ಕರ್‍ನಾಟಕದಲ್ಲಿ ನವೆಂಬರ್ ಒಂದರಲ್ಲಿ ಆದರೂ ‘ಕನ್ನಡ ಉಳಿಸಿ’ ಮಾತು ಇಡೀ ವರ್ಷದಲ್ಲಿ ಅಲ್ಲೂ ಕನ್ನಡ ಇಲ್ಲೂ ಕನ್ನಡ ಎಲ್ಲೆಲ್ಲು ಕನ್ನಡವೋ ಕನ್ನಡ ತಿಂಗಳಾಯಿತೆಂದರೇ… ನಿರಭಿಮಾನದ ಬಗ್ಗಡವೋ ಬಗ್ಗಡ ! “ಅಲ್ಲಿ ನೋಡ...

ಮೂಲ: ವಿಷ್ಣು ಡೇ ನರಕ ಹೊರಕ್ಕೆ ಬರಲಿ, ಪಾಪಲೋಕ ತಾಪದಿಂದ ಬಿಡುಗಡೆಯಾಗಲಿ; ಕೊರೆವ ಮಂಜಿನ ದಾರಿ ಸವೆಸುತ್ತ ನಡೆಯುವ ಕುಂತೀಪುತ್ರನ ಹಾಗೆ ಶುದ್ದಿಲೋಕದ ಕಡೆಗೆ ಸಾಗಲಿ. ಪಯಣಕ್ಕೆ ಜೊತೆಗಾರ ಅಪರಿಚಿತ ನಾಯಿ, ಸತತ ಅನ್ವೇಷಣೆಯ ದಾರಿಯುದ್ದಕ್ಕೂ ರಕ್ತ ಬ...

ರಮಣನೊಡಗೂಡಿ ನೆರೆದಿಂಗಳೂಟವನುಣಲು- ಅವಳಿಗೆನಿಸಿತು ಬಾಳ್ವ ಸುಖದ ಬಿದ್ದಣವೆಂದು. ಭಾವಿಸಿದಳವಳದುವೆ ಚಿಂತೆಗಿಹ ಬಯಲೆಂದು ಮೋಡ ಮುತ್ತುತ, ನಸುವೆ ಓರೆಯಾಗಿರೆ ಹಗಲು. ಮಳೆಯಾಗಿ ಮಿಂಚು ಸಿಡಿಲಿಂದ ಕೂಡಿರೆ ಮುಗಿಲು, ಸೂರ್‍ಯನಾರಾಯಣನು ಕಾಣದಾಗಿರೆ, ನೊ...

1...5253545556...886

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...