ಶತ-ಶತಮಾನಗಳಿಂದ ನಾವು
ಬಂಧಿಗಳಾಗಿ ಹೋಗಿದ್ದೇವೆ
ಮತ-ಧರ್ಮಗಳೆಂಬ ಉಕ್ಕಿನ
ಕೋಟೆಯೊಳಗೆ
ಈ ಕೋಟೆಯ ಅಡಿಪಾಯ
ಬಹಳಷ್ಟು ಪ್ರಬಲ
ಹಿಂದೆ, ಈಗ, ಇನ್ನೂ ಮುಂದೆಯೂ
ಅಲುಗಾಡಿಸಲಾರದಷ್ಟು
ನಾವು ನಮ್ಮ ತನವನ್ನು
ಕಳೆದುಕೊಳ್ಳುತ್ತಿದ್ದೇವೆ,
ಧರ್ಮವೆಂಬ ಕೂಡಿ-
ಕಳೆಯುವ ಆಟದಲ್ಲಿ
ಧರ್ಮವೇ ಮಿಗಿಲಾಗುತ್ತಿದೆ
ಮಾನವತೆ ಕುಸಿಯುತ್ತಿದೆ
ನಮ್ಮ ರಕ್ತವನ್ನು ಹರಿಸುತ್ತಿದ್ದೇವೆ
ಯಾವ ಪ್ರಯೋಜನಕ್ಕಾಗಿ?!
ನಾವು ರೂಢಿಸಿಕೊಳ್ಳಬೇಕಾಗಿದೆ
ಮಾನವೀಯತೆಯನ್ನು
ಇದನ್ನರಿತು ಉಳಿಸಿಕೊಳ್ಳಬೇಕಾಗಿದೆ
ನಮ್ಮ ತನವನ್ನು
*****


















