ದೇವರೇ ನಿನ್ನಲ್ಲಿ ನಾ ಬೇಡುವದೊಂದೆ
ನನ್ನೆದುರಿನಲ್ಲಿ ಈ ಸಿರಿ ತೋರಬೇಡ
ಈ ಸಂಪತ್ತಿನಲ್ಲಿ ನಾನು ಮುಳುಗಿ ಮುಳುಗಿ
ನಿನ್ನ ಧ್ಯಾನವು ನಾನು ಮರೆಯದಿರಲಿ
ದೇವರೇ ನಿನ್ನಲ್ಲಿ ನಾಬೇಡುವದೊಂದೆ
ನನ್ನೆದುರಿನಲಿ ಈ ರತಿ ಮೋಹ ಬೇಡ
ನಾನು ಈ ಸೌಂದರ್ಯದಲಿ ತೇಲಿ ಹೋಗಿ
ನಿನ್ನ ಧ್ಯಾನವು ನಾನು ಮರೆಯದಿರಲಿ
ದೇವರೆ ನಿನ್ನಲ್ಲಿ ನಾಬೇಡುವದೊಂದೆ
ನನ್ನೆದುರಿನಲಿ ಆಸೆ ಅಮಿಷ ತೋರಬೇಡ
ನಾನು ಈ ಲೋಭದಲಿ ಕರಗಿ ಕರಗಿ
ನಿನ್ನ ಧ್ಯಾನವು ನಾನು ಮರೆಯದಿರಲಿ
ದೇವರೆ ನಿನ್ನಲ್ಲಿ ನಾಬೇಡುವುದೊಂದೆ
ನನ್ನಲ್ಲಿ ಈ ತನುವಿನ ಅಹಂಕಾರಬೇಡ
ಈ ಕಾಯದ ಮಾಯೆಯಲಿ ನಾನು ಒಂದಾಗಿ
ನಿನ್ನ ಧ್ಯಾನವು ನಾನು ಮರೆಯದಿರಲಿ
ದೇವರೆ ನಿನ್ನಲ್ಲಿ ನಾ ಬೇಡುವುದೊಂದೆ
ಹಗಲಿರುಳು ನಿನ್ನ ನಾಮ ಜಪಿಸುತ್ತಿರಲಿ
ಮಾಣಿಕ್ಯ ವಿಠಲನಿಗೆ ಮುಡಿಪಾಗಲಿ
ನಿನ್ನ ದರುಶನವೇ ನನ್ನ ಅಂತಿಮ ಧ್ಯಾನವಾಗಲಿ
*****
















