ಬರೆದವರು: Thomas Hardy / Tess of the d’Urbervilles

ಮೈಸೂರಿನ ರಾಜಕೀಯ ವಾತಾವರಣದ ಹವಾಮಾನ ಬದಲಾಯಿಸಿದೆ. ಮಿಲ್ಲರ್‌ಕಮಿಟಿಯ ಮೊದಲನೆಯ ಫಲವಾಗಿ ಬ್ರಾಹ್ಮಣೇತರರ ಕೂಗು ಭದ್ರವಾಗಿದೆ. ಆಲ್ ಇಂಡಿಯ ಕೌನ್‌ಸಿಲ್ ಗಳಲ್ಲಿ ಮೆಂಬರುಗಳು ಸರ್ಕಾರವನ್ನು ಅಕ್ಷೇಪಿಸುವ ಭಾಷಣಗಳ ಬಿರುಸು ಇಲ್ಲಿಯೂ ಅಸೆಂಬ್ಲಿ ಕೌನ್‌ಸಿಲ್‌ಗಳಲ್ಲಿ ಕಾಣಿಸುತ್ತಿದೆ. ವಿಚಾರಪರರು, ‘ ಬುದ್ದಿನಂತರೆಲ್ಲಾ ಸಿವಿಲ್ ಸರ್ವಿಸ್‌ನಲ್ಲಿ ಸೇರಿಹೋಗುತ್ತಾರೆ. ಉಳಿದವರು ಸಾರ್ವಜನಿಕ ಪಂಕ್ತಿಗಳಲ್ಲಿ ಇದ್ದಾರೆ. ಎಂದಿಗಿದು ಸರಿ ಹೋದೀತು?’ ಎಂದು ಯೋಚಿಸುತ್ತಿದ್ದಾರೆ. ಹೊಸ ರಕ್ತ ಬರುತ್ತಿದೆ. ಆದರೆ ಹೊಸ ಉತ್ಸಾಹ ಪ್ರೊತ್ಸಾಹಗಳು ಕಂಡಿಲ್ಲ. ಏನು ಮಾಡಿದರೂ ಸರಿ. ಸರಕಾರವನ್ನು ಆಕ್ಷೇಪಿಸುತ್ತಿದ್ದರೆ ಸರಿ ಎಂಬ ಭಾವ ಕಾಣುತ್ತಿದೆ. ಆ ಪ್ರತಿಭಟನಕಾರರಲ್ಲಿ ಅಲ್ಲಲ್ಲಿ ಒಂದೊಂದು ಬಿಳಿಯ ಟೋಪಿ ಕಾಣಿಸುತ್ತಿದೆ. ಹಿಂದಿನ ದಿವಾನರು ಯಾರೂ ಕಾಣದ ಪ್ರತಿಭಟನ ಈ ಹೊಸದಿವಾನರ ಜೊತೆಯಲ್ಲಿ ಬಂದಿದೆ. ಅದನ್ನು ತುಳಿಯಲು ಅವರೂ ತಮ್ಮ ಭಕ್ತರನ್ನು ಭಟ್ಟಿಂಗಿಗಳನ್ನು ಹುಟ್ಟಿ ಹಾಕಿದ್ದಾರೆ.

ನಾಯಕನಿಗೆ ಈ ರಾಜಕೀಯ ಬೇಕಿಲ್ಲ. ‘ಮಿಣಿಕೆ ಕಾಯಿ ಬಿರಿಯುವಂತೆ ಸಾರ್ವಜನಿಕ ಜೀವನ ಬಿರಿದಿದೆ. ಹಾಲು ಒಡೆಯು ವಂತೆ ಒಡೆದಿದೆ. ಇನ್ನೂ ಇದೇ ಭಾವ ಬಲಿತರೆ ಸಂಸಾರಗಳೂ ಒಡೆಯುವುದೋ ಏನೋ?’ ಎಂದು ಒಮ್ಮೊಮ್ಮೆ ಪ್ರಕಟವಾಗಿ ಹೇಳುತ್ತಾನೆ. ಎಲ್ಲೆಲ್ಲಿಯೂ ಗುಂಪುಗುಂಪುಗಳು. ನಾಯಕನಿಲ್ಲದ ಗುಂಪುಗಳು: ಹಿಂಬಾಲಕರಿಲ್ಲದ ನಾಯಕರು ಹೆಚ್ಚುತ್ತಿದ್ದಾರೆ. ಕೂಲಿಯ ಸಮಸ್ಯೆ ಬಿಗಡಾಯಿಸಿದೆ.

ಅವನ ಮನೆಯಲ್ಲಿಯೂ ವಾತಾವರಣ ಮೊದಲಿನಂತಿಲ್ಲ. ಮಲ್ಲೀಗೆ ಮಗು ಹೋದುದೇ ಕಾರಣವಾಗಿ ವೈರಾಗ್ಯ ಹೆಚ್ಚಿದೆ. ಗಂಡಹೆಂಡಿರ ಸಂಬಂಧದಲ್ಲಿ ಎಳ್ಳಷ್ಟೂ ಒಗರಿಲ್ಲ. ಅದರೆ ಆ ಮೊದಲಿನ: ಉತ್ಸಾಹವಿಲ್ಲ. ಮೊದಲು ಇಟ್ಟ ನದಿಯಂತೆ ಉತ್ಸಾಹದಿಂದ ಕುಣೆದುಬುರುತ್ತಿದ್ದವಳು ಇಂದು ಬಯಲುನಾಡಿನ ನದಿಯ ಗಂಭೀರವಾಗಿದ್ದಾಳೆ. ನಾಯಕನು ಏನೋ ಬೆಚ್ಚುತ್ತಾನೆ ಅವಳ ಬಳಿ ಬರಲು.

ಅವಳ ಸೌಂದರ್ಯ ಬಹುಮನೋಹರವಾಗಿದೆ. ಸೊಂಪಾಗಿ ಬೆಳೆದಿರುವ ಬಾಳೆಯಮರದಂತೆ ನಯನಮನೋಹರಳಾಗಿದ್ದಾಳೆ. ಮುಖದಲ್ಲಿ ಸೌಂದರ್ಯದ ಜೊತೆಗೆ ಏನೋ ಒಂದು ಅಪೂರ್ವವಾದ ಶಾಂತಿಯಿದೆ. ತುಳುಕುತ್ತಿದ್ದ ಶೃಂಗಾರರಸ ಸೊಬಗಿನ ಸೋನೆ, ಇಂದು ಇನ್ನು ಯಾವುದೋ ಒಂದುರೀತಿಯಲ್ಲಿ ಪಕ್ವವಾಗಿ ಹಿರಿಯ ತನದ ಸಿರಿಯನ್ನು ತಳೆದಿದೆ. ಅಂಗಾಂಗಗಳಲ್ಲಿ ಒಂದು ತುಂಬು ಬಂದು ಭೋಗಿಯ ಭೊಗಸಾಮ್ರಾಜ್ಯಮಂದಿರದ ಸ್ವರ್ಣಕಲಶವೋ ಎಂಬಂತೆ ಕಾಣುತ್ತಿದ್ದರೂ, ಅಲ್ಲಿ `ಯಾವುದೋ ಪವಿತ್ರತೆಯಿದೆ. ತುಂಬಿದ ಮಡುವಿನ ತಿಳಿನೀರು ಕಂಡು ಈಜಬೇಕೆಂದರೂ ಧುಡಮ್ಮನೆ ಧುಮುಕಲು ಅವಕಾಶವಿಲ್ಲ ಎಂಬ ಭಾವ ಬಂದಾಗ ಆಗುವಂತೆ ಇದೆ ಮಲ್ಲಿ ಈಗ ಸಂಸ್ಕೃತ ಕವಿಗಳ ಮಾತಿನಲ್ಲಿ ‘ಮಳೆಯಲ್ಲಿ ನೆಂದು ಪರಿಶುದ್ಧವಾಗಿ ರುವ ನವಮಲ್ಲಿಕಾಲತೆ.’ ಅವಳಿಗೂ ಸುಮಾರು ಮುವ್ವತ್ತು ವರುಷ. ಸೌಂದರ್ಯರಸ ಪೂರ್ಣವಾಗಿ, ಬಿಮ್ಮನೆ ಬೀಗಿರುವ ರಸಪುರಿಮಾವಿನ ಹಣ್ಣಿನಹಾಗಿದ್ದಾಳೆ : ಆದರೆ ರೇಗಿಸುವ ಸೌಂದರವಲ್ಲ ಅವಳದು. ಕಾಮದ ಕಡೆಗೆ ತಳ್ಳಿ, ಚೇಷ್ಟೆಯನ್ನು ಮಾಡಿಸುವ ರಜೋಗುಣದ ಸೌಂದರ್ಯವಲ್ಲ. ಏನೋ ಸಾತ್ವಿಕ ಕಳೆ. ಏನೋ ಮಾತೃಭಾವ : ಅಥವಾ ಸೋದರೀಭಾನ. ನಾಯಕನಿಗೆ ಅವಳು ತನ್ನ ಸ್ವತ್ತು ಅದರೂ: ಅವಳನ್ನು ಮೊದಲಿನಂತಿ ಯಥೇಚ್ಛವಾಗಿ ಉಪಯೋಗಿಸಲಾರ.

ದೇಹವಿಷ್ಟು ಭವ್ಯವಾಗಿ ಸೌಂದರ್ಯದ ಖನಿಯಾಗಿದ್ದರೂ ಅದೇಕೆ ಕಾಮವನ್ನು ಉದ್ಬೋಧಿಸುವುದಿಲ್ಲ? ಅದೇ ಸೌಂದರ್ಯದ ಗುಟ್ಟು. ಅದರಲ್ಲಿಯೂ ಸ್ತ್ರೀಸೌಂದರ್ಯವು ಮನೋಭಾವದ ಕನ್ನಡಿ. ಅಲ್ಲಿ ಮನಸ್ಸು ಚಂಚಲವಾಗಿ, ತಾನು ಚೆಲುವೆಯೆಂಬ ಸೌಂದರ್ಯವತಿಯೆಂಬ ಗರ್ವಗಂಧನು ಬಲಿತರೆ, ಆಗ ಪುರುಷಭ್ರಮರಗಳಲ್ಲಿ ಗತಿ. ಕಾಮ ಕುಸುಮವು ಅರಳುವುದು ಮೊದಲು ಸ್ತ್ರೀ ಹೃದಯದಲ್ಲಿ. ಚಾಪಲ್ಯವು ನೀರಿನ ಸಹಜವಾದ ದ್ರವತ್ವದಿಂದ ಅಲೆಗಳೇಳುವಂತೆ ಸ್ತ್ರೀಯ ಅಂತಃ ಕರಣದಲ್ಲಿ ತರಂಗತರಂಗವಾಗಿ ರೇಗಿದಾಗ, ಕತ್ತಲಲ್ಲಿ ತನ್ನ ಪಾಡಿಗೆ ತಾನು ಹೋಗುತ್ತಿರುವ ಹಾದಿಕಾರನನ್ನು ಎಲ್ಲಿಯೋ ಇರುವ ಪುಷ್ಪ ಸೌರಭವು ಬಂದು ತಾಕಿ ಮೂಗಿಗೆ ದಾರಹಾಕಿ ಎಳೆಯುವುತೆ ಎಳೆಯು ವುದು. ಕಾಮದಲ್ಲಿ ಗಂಡು ಕ್ರೀಡಾವಸ್ತು : ಹೆಣ್ಣು ಕ್ರಿಯಾವಸ್ತು. ಧರ್ಮದಲ್ಲಿ ಹೆಣ್ಣು ಕ್ರೀಡಾವಸ್ತು : ಗಂಡು ಕ್ರಿಯಾವಸ್ತು, ಒಂದರಲ್ಲಿ ಗಂಡಿಗೆ ಅಸ್ತಿತ್ವವಿರುವುದು ಹೆಣ್ಣಿಗೆ ದಾಸನಾಗುವುದಕ್ಕೆ. ಹಾಗೆ ದಾಸನಾಗಿ ಹೆಣ್ಣೆಂಬ ಪ್ರವಾಹದಲ್ಲಿ ಕೊಚ್ಚಿ ಹೋದರೆ ಆಗ ಗಂಡಿಗೆ ಸೌಖ್ಯ. ಧರ್ಮದಲ್ಲಿ ತದ್ವಿರುದ. ನಾಯಕನೀಸೂಕ್ಷ್ಮವನ್ನರಿತಿಲ್ಲ: ಆದರೂ ಅವನಿಗೆ ಮಲ್ಲಿಯ ಗೌರವ ಆದರ ಬೆಳೆದಿದೆ.

ರಾಣಿಗೆ ಆಶ್ಚರ್ಯ: ‘ತಾನು ಮಲ್ಲಿಗಿಂತ ಸುಮಾರು ಇಪ್ಪತ್ತು ವರ್ಷ ದೊಡ್ಡವಳು ತನಗೆ ಶಾಂತಿ ಬಂದಿಲ್ಲ. ನಾಯಕನು ಬಂದ ನೆಂದರೆ ಆತನಮೇಲಿನ ಗಾಳಿ ತನ್ನತ್ತ ಸರಿದಕ್ಕೆ ತಾನು ಚಂಚಲಳಾಗುತ್ತಾಳೆ. ಆರಾಧಿಸಿ, ಆರಾದನನನ್ನು ಪಡೆಯಬೇಕೆಂಬ ಭಾವ ಕೂಡಲೇ ತಾನೇತಾನಾಗುತ್ತದೆ. ಆದರೆ ಮಲ್ಲಿಯಲ್ಲಿ ಈ ಸ್ಥೈರ್ಯವೆಲ್ಲಿಂದ ಬಂತು? ಕಬ್ಬಿನ ಹಾಲು ಕಾಡು ಬೆಲ್ಲವಾಗಿ. ಶುದ್ಧವಾಗಿ, ಉಜ್ಜಿದರೆ ಆಗುವ ಸಕ್ಕರೆಯಂತೆ ಆಗಿದ್ದಾಳೆ. ಅವಳೆಂತು ಹಾಗಾದಳು?’ ಎಂದು ಎಷ್ಟೋ ಯೊಚಿಸುತ್ತಾಳೆ. ‘ ತಾಯಿತನವು ಕೊಟ್ಟ ಭಾಗ್ಯವೇನು?

ಒಂದು ಮಗುವಾದರೆ ಹೆಣ್ಣು ಹೀಗೆ ತಾಯಿತನವನ್ನು ಪಡೆಯುವಳೇನು? ಎನ್ನಿಸುತ್ತದೆ ಹಲವಾರು ಮಕ್ಕಳನ್ನು ಪಡೆದೂ ತಾಯತನವನ್ನು ಪಡೆಯ ದವರನ್ನು ಅವಳು ಬಲ್ಲಳು. ಅದರಿಂದ ಆ ಹೆಣ್ಣು ಈ ತಾಯಿಯನ್ನು ಅರಿಯಳು.

ಮಲ್ಲಿಗೂ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಮನಸ್ಸಿನಲ್ಲಿ ಏನೂ ಬೇಕಾಗದೆ. ಇರುವುದನ್ನು ಕಂಡು ಅವಳಿಗೇ ನಗು, ಕಾಮಕಲಾ ನಿಪುಣೆಯಾಗಿ ಆ ಮಹಾ ರಸಿಕರಾಜನಿಂದ ಮೆಚ್ಚುಗೆಯನ್ನು ಪಡೆ ದವಳು ಇಂದು ಶಾಂತಳಾಗಿದ್ದಾಳೆ. ಯಾವ ಯಾವಭಾಗದಲ್ಲಿ ಯಾವ ಯಾವ ಚೇಷ್ಟೆಯು ಸೊಗಸು ಎಂಬುದನ್ನು ಪೂರ್ಣವಾಗಿಬಲ್ಲ ಮನೋ ಗ್ರಾಹಿಣಿಯಿಂದು ಹರಿಯುವನೀರಿಗಿಂತ ಹೆಚ್ಚು ಚಪಲಳಾಗಿದ್ದವಳು, ಪರಿಮಳವನ್ನು ಹಾರಿಸಿಕೊಂಡು ಹೋಗುವ ಸುಳಿಗಾಳಿಗಿಂತ ಸೂಕ್ಷ್ಮವಾಗಿದ್ದವಳು, ಇಂದು ನದಿಯ ನಡುವಿನ ಬಂಡೆಯಾಗಿದ್ದಾಳೆ. ಅವಳಿಗೇ ತಿಳಿಯದು ತನ್ನ ಭೋಗವೃತ್ತಿ ಏನಾಯಿತು ಎಂಬುದು. ಬರುಬರುತ್ತರಾಣಿಯ ಹಿರಿತನ ಮಲ್ಲಿಯ ಪಾಲಾಗಿದೆ.

ಅವಳಿಗೆ. ಈಗ ಧ್ಯಾನಪ್ರವೃತ್ತಿ ಒಂದು ದಿನ ಅವಳು ಬೇರೆ ಮಲಗುವಂತಿಲ್ಲ. ನಾಯಕನಿದ್ದರೆ ರಾಣಿಮಲ್ಲಿಯರು ಮಹಾವೃಕ್ಷವನ್ನು ಆಶ್ರಯಿಸಿರುವ. ಜಾಜಿಮಲ್ಲಿಗೆಯ ಬಳ್ಳಿಗಳಂತೆ ಆತನ ಪಕ್ಕಗಳನ್ನು ಆಶ್ರಯಿಸುತ್ತಾರೆ. ಇಲ್ಲದಿದ್ದರೆ ಅವನೇ ಆ ಶಯ್ಯಾರತ್ನವನ್ನು ಅಲಂಕರಿಸುತ್ತಾರೆ. ಆದರೂ ಗುಂಡು ಹಾರುವ ವೇಳೆ! ಆಗಲೇ ಮಲ್ಲಿಯೆದ್ದು ಸ್ನಾನಮಾಡಿ ಬಂದು ದೇವರ ಮನೆಯಲ್ಲಿ ಕುಳಿತಿರುತ್ತಾಳೆ. ಈಗ ಗಂಡನ ಶಿವಪೂಜೆಗೆ ಸಿದ್ಧ ಮಾಡುವ ಕೆಲಸ ರಾಣಿಯದು. ರಾಣಿ ಕೆಲಸ ಹೇಳುತ್ತಿದ್ದವಳು ಆ ಹೇಳುವಿಕೆಯ ಹಿರಿಯತನನನ್ನು ಮಲ್ಲೀಗೆ ಒಪ್ಪಿಸಿರುವಂತಿದೆ.

ನಾಯಕನಿಗೆ ಮಲ್ಲಿಯ ಸಹವಾಸದಲ್ಲಿ ಏನೋ ತೃಪ್ತಿ: ಮನ- ಸ್ಸಿಗೆ ಒಪ್ಪಿದ ಊಟವನ್ನು ಮನಸಾರೆ ಮಾಡಿ ಕೈ ತೊಳೆದುಕೊಂಡು ಬಂದು ಕುರ್ಚಿಯಲ್ಲಿಕುಳಿತು ತಾಂಬೂಲವನ್ನು ಒಪ್ಪಿಸಿಕೊಳ್ಳುತ್ತಿರು ವಾಗ ತೋರುವ ಪೂರ್ಣಭಾವ ಇಂದು ನಾಯಕನ ಮನೆಯಲ್ಲಿದೆ.

ಮಲ್ಲಿಯ ಸತ್ಯನಾರಾಯಣವ್ರತ ಫಲವಾಯಿತು. ರಾಣಿಯು ಗರ್ಭವತಿಯಾದಳು. ಮಲ್ಲಿಯು ತನಗೆ ಬೇಡವೆನ್ನುತ್ತಿದ್ದ ಪುಂಸನನ ವನ್ನು ಮಾರನೆಯ ತಿಂಗಳಲ್ಲಿಯೇ ಮಾಡಿಸಿದಳು. ತಾನು ಹೇಗೆ ಹೇಗೆ ಬಯಕೆಯ ಭೋಗಗಳನ್ನು ಪಡುತ್ತಿದ್ದಳೋ ಹಾಗೆಯೇ ತಾನೂ ಅಕ್ಕನಾಗಿ ರಾಣಿಯು ತಂಗಿಯಾಗಿದ್ದರೆ ನಡೆಯಿಸಬಹುದೋ ಹಾಗೆ ನಡೆಯಿಸಿದಳು. ರಾಣಿಯ ಬಾಯಲ್ಲಿ ಬರುವ ಕೋರಿಕೆಯನ್ನು ನೆರ ವೇರಿಸುವುದು ಇರಲಿ: ಅವಳ ಮನಸ್ಸಿನಲ್ಲಿ ಮಾಡುವ ಕೋರಿಕೆಯನ್ನು ಅರಿತುಕೊಂಡು ನಡೆಸುವಳು. ದಿನವೂ ತಾನೇ ಬಸುರಿಗೆ ನೀರು ಎರೆಯುವಳು : ಇದುವರೆಗೂ ಇತರರು ಮಾಡುತ್ತಿದ್ದ ತಲೆಬಾಚುವಿಕೆ ಯನ್ನು ಈಗ ತಾನೇ ಮಾಡುವಳು. ಅಡುಗೆಯನರು ತಂದ ತಿಂಡಿ ಯನ್ನು ಬಾಗಿಲಿಗೆ ಹೋಗಿ ತಾನೇ ತಂದುಕೊಡುವಳು. ರಾತ್ರಿಯ ಹೊತ್ತು ತಾನು ಕುಳಿತು ಹಾಲು ಕಾಯಿಸಿ ತಂದು ಭಕ್ತಿಯಿಂದ ದೇವರಿಗೊಸ್ಪಿಸುವವಳಂತೆ ಒಪ್ಪಿಸುವಳು.

ನಾಯಕನಿಗೆ ತೃಪ್ತಿ. ಹಿರಿಯ ಹೆಂಡತಿ ಬಸುರಾಗಿದ್ದಾಳೆ. ಮಲ್ಲಿ ತಪ್ಪದೆ “ಬುದ್ಧಿಯವರಿಗೆ ಪುತ್ರೋತ್ಸವನಾಗುತ್ತದೆ.” ಎನ್ನುತ್ತಾಳೆ.

ಅಂತೂ ನಾಯಕನ ಅರಮನೆಯಲ್ಲಿ ಎಲ್ಲೆಲ್ಲೂ ಶಾಂತಿ, ತೃಪ್ತಿ ತುಂಬಿದೆ. ಸಂಸಾರ ಗೊನೆಯನ್ನು ಬಿಟ್ಟು ಬಾಳೆಯ ತೋಟದಂತೆ ರಮ್ಯವಾಗಿದೆ. ಒಂದೇ ಒಂದು ಸಣ್ಣ ಯೋಚನೆ. ನರಸಿಂಹಯ್ಯನು ಮಾತ್ರ ಇಲ್ಲ. ಅವನು ದೇಶವನ್ನು ಸುತ್ತಿ ಬರುವೆನೆಂದು ಹೋದವನು ಆರು ತಿಂಗಳಾಗಿದೆ ಎಲ್ಲಿರುವನೋ ಅದೂ ಬರೆದಿಲ್ಲ. ಮನೆಯವರೆಲ್ಲ ದಿನ ದಿನವೂ ಕಾಗದವನ್ನು ನಿರೀಕ್ಷಿಸುತ್ತಿದ್ದಾರೆ : ದಿನವೂ ಅವರಿಗೆ ಆಶಾಭಂಗವಾಗುತ್ತಿದೆ.
*****
ಮುಂದುವರೆಯುವುದು