ತಾನ ತಂದ್ರನಾನಾ ನಾನಾ ತಂದ್ರನಾನಾ
ತಂದನೊಂದಾನೋ ತಂದಾನಂದ್ರನಾನಾ
ಮೊಲೆಗಾಲ ಪೂರೆ ಹೊಯ್ಲಿ ಭೂಮಿತನು ಯೆಲ್ಲೀ
ಚಿಂಗಾರೆಲೆ ಮೇನೇ ಶಿರಿ ಬರ್‌ಲೋ ತಾನಾ
ದಕ್ಕನ ಮೈಮುದರೀ ಯದ್ದಿ ಕುಲ್ಲಾ ನಾರಾಯಣಶ್ವಾಮೀ
ಶಲ್ದ ಶಂಡುಕೀ ಕಟ್ಟನೆ ನಾರಾಯಣ ಸ್ವಾಮೀ
ಹಾರನೇ ಪೊಗಡೇ ಕಟ್ಟನೆ ನಾರಾಯಣ ಸ್ವಾಮೀ
ಕೈಕಾಲ್ ಮೊರೇನೇ ತೊಲ್ದ ನಾರಾಯಣ ಸ್ವಾಮೀ
ಕಟ್ಟಿಗೆ ಹಾಶೆ ಮೇನೇ ಕುಂತ ನಾರಾಯಣ ಸ್ವಾಮೀ
ಪಟ್ಟೆಶಂಚೀಯಾ ಬಿಡ್ಶಾನ ನಾರಾಯಣ ಸ್ವಾಮೀ
ರಾಯರೆ ಹಣ್ಣಡಕ್ಕೇ ತೆಗ್ದಾ ನಾರಾಯಣ ಸ್ವಾಮೀ
ಉಕ್ಕಿನಾ ಶೂರೀ ತೆಗ್ದಾ ನಾರಾಯಣ ಸ್ವಾಮೀ
ವಡ್ಡಿ ಮೂರೆ ಹೋಲಾ ಮಾಡನೆ ನಾರಾಯಣ ಸ್ವಾಮೀ
ನಾಗಬಲ್ಲೀಯಾ ಶರೆತಿಗ್ದೀ ನಾರಾಯಣ ಸ್ವಾಮೀ
ಹಾಲಲೇ ಚಂದಾ ಹಣೆಸುಣ್ಣ ತೆಗ್ದೀ ನಾರಾಯಣ ಸ್ವಾಮೀ
ಈಲೆದೊಂದು ಕಲ್ಲಾ ಮೇದಾ ನಾರಾಯಣ ಸ್ವಾಮೀ
ಕತ್ರೆಸ್ ಕರೀ ರುಂಡಾ ಉಲ್ಗಾನ ನಾರಾಯಣ ಸ್ವಾಮೀ
ಕಂಬುಲೀ ಹಾಶುಗಿ ಮಾಡನು ನಾರಾಯಣ ಸ್ವಾಮೀ
ಯೆಣ್ಣಗಂಬುಲೀ ಹೊದ್ಕೆಯ ಮಾಡ್ಕಂಡೀ
ಶಯನ ಮಾಡಿನ್ನೇ ವರ್ಗಾನೆ ನಾರಾಯಣ ಸ್ವಾಮೀ
ಹಿಮದಾ ಗಾಲೀ ಬೀಸದ ನಾರಾಯಣ ಸ್ವಾಮೀ
ಮಾಯದಾ ನಿದ್ರೀ ಬೀಲ್ವದೆ ನಾರಾಯಣ ಸ್ವಾಮೀ
ತಾನ ತಂದ್ರನಾನಾ ನಾನಾ ತಂದ್ರನಾನಾ
*****
ಹೇಳಿದವರು: ದಿಂಬೆ ಕುಪ್ಪ ಗೌಡ ಮತ್ತು ಕುಪ್ಪ ಮಾಟುಗೌಡ, ಕೂಜಳ್ಳಿ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.
















