Home / ಕವನ / ಕವಿತೆ / ಕನ್ನಡಕ್ಕೇನು ಕಮ್ಮಿ? ಕರ್‍ನಾಟಕದಲ್ಲಿ

ಕನ್ನಡಕ್ಕೇನು ಕಮ್ಮಿ? ಕರ್‍ನಾಟಕದಲ್ಲಿ

ಕನ್ನಡಕ್ಕೇನು ಕಮ್ಮಿ? ಕರ್‍ನಾಟಕದಲ್ಲಿ
ನವೆಂಬರ್ ಒಂದರಲ್ಲಿ
ಆದರೂ ‘ಕನ್ನಡ ಉಳಿಸಿ’ ಮಾತು
ಇಡೀ ವರ್ಷದಲ್ಲಿ

ಅಲ್ಲೂ ಕನ್ನಡ ಇಲ್ಲೂ ಕನ್ನಡ
ಎಲ್ಲೆಲ್ಲು ಕನ್ನಡವೋ ಕನ್ನಡ
ತಿಂಗಳಾಯಿತೆಂದರೇ…
ನಿರಭಿಮಾನದ ಬಗ್ಗಡವೋ ಬಗ್ಗಡ !

“ಅಲ್ಲಿ ನೋಡು ಕನ್ನಡ ಇಲ್ಲಿ ನೋಡು ಕನ್ನಡ
ಮೇಲೆ ನೋಡು ಕನ್ನಡ ಕೆಳಗೆ ನೋಡು ಕನ್ನಡ”
ಭುವನೇಶ್ವರಿ ವೀರಭಟರ ಬಾಯಿ ತುಂಬ ಕನ್ನಡ
ಅಂಬೇಡ್ಕರ್ ವೀದಿಯಲಿ ನಾಯಕರ ಮೆರವಣಿಗೆಯಲ್ಲಿ

ಕಲ್ಲು ಕಲ್ಲು ನಡುಗುವಂತೆ ಕೇಳಿ ಬಂತು ಕನ್ನಡ
ಕನ್ನಡಕ್ಕೆ ಶಾಪ ಏನೋ
ಕಣ್ಣು ಕಿವಿ ಮುಚ್ಚಿತ್ತು ವಿಧಾನಸೌಧ ಕಟ್ಟಡ !
ಕನ್ನಡ… ಕನ್ನಡ…

ಆಕಾಶವ ತಬ್ಬಿತು
ಗಾಳಿಯನ್ನು ತುಂಬಿತು
ಎಲ್ಲೆಲ್ಲೂ ಚೆಲ್ಲುವರಿದು
ಬಾಯ್ಮಾತಿಗೂ ಇಳಿಯಿತು

ಹೃದಯಕೇಕೋ ಇಳಿಯಲಿಲ್ಲ
ಅಂತರಂಗವಾಗಲಿಲ್ಲ
ಬಹಿರಂಗದ ಕನ್ನಡ
ನಾವ್ ಕೊಂದ ಕನ್ನಡ !
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...