
ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ ಗುರುತಿನ ಕಾರ್‍ಡು ನೇಣು ಹಗ್ಗದಂತೆ ಕಾಣಿಸುತ್ತದೆ ನನಗೆ ನಾನು ಹೆಂಡತಿಯಾಗಲಾರೆ. ಸಂಕೇತಗಳ ಬೇಡಿಯನ್ನು ಅಂಗಾಂಗಗಳ ಮೇಲೆಲ್ಲಾ ಹೇರಿ ಕುಂಕುಮವ ನೆತ್ತಿಗೆ ಮೆತ್ತಿ, ಮುತೈದೆ ಮಂಗಳೆ ಎಂದೆಲ್ಲ ಊದುವ ಶಂಖನಾ...
ಮುಂಜಾವದಲ್ಲಿ ರೈಲಿನ ಕಿಟಕಿಯಿಂದ ನೋಡಿದಾಗ ಮಲಗಿದ್ದ ನಗರಗಳು, ರಕ್ಷಣೆಗೆ ಗಮನಕೊಡದೆ ಬೆನ್ನಡಿಯಾಗಿ ಬಿದ್ದುಕೊಂಡ ದೈತ್ಯ ಪ್ರಾಣಿಗಳು. ವಿಶಾಲ ಸರ್ಕಲ್ಲುಗಳಲ್ಲಿ ನನ್ನ ಆಲೋಚನೆಗಳು ಮತ್ತು ಬೆಳಗಿನ ಗಾಳಿ ಮಾತ್ರ ಸುಳಿದಾಡುತ್ತವೆ : ಕಛೇರಿಯ ಗೋಪುರದಲ...
ಎಲೆ ಕರ್ಣಾಟದೀಂದ್ರ ಚೂತವನ ಚೈತ್ರ! ಪ್ರೌಢ ಲಕ್ಷ್ಮೀಶ| ಗಾ | ವಿಲನಾದೆನ್ನ ಬಳಲ್ದ ಬಂಜೆ ನುಡಿಯಂ ನೀನಾಲಿಸೈ ಲಾಲಿಸೈ! | ಲಲಿತ ಸ್ಮಾರಕ ಕಂಭದೊಲ್ ಕೃತಿಯೆ ನಿನ್ನಾ ನಾಮಮಂ ಕೀರ್ತಿಸಲ್, | ಹುಲುಮಾತಿಂ ಪೊಗಳಿರ್ಪ ಮೂಢ ಕವಿಯುಂ ಪಕ್ಕಾಗನೇ ನಿಂದೆಗಂ? ...
ಅವ್ವನ ಹಸಿರ ರೇಶಿಮೆ ಸೀರೆ ನೆರಿಗೆಯ ನಕ್ಷತ್ರಗಳು ನಾವು || ಮೇಘವರ್‍ಣಗಳ ನಡುವೆ ಹೂವು ಗೊಂಚಲುಗಳಾಗೆ ಅವಳ ಸೆರಗ ಬಳ್ಳಿಗಳು ನಾವು || ಅವಳ ತನುಮನದ ಹೊಲಗದ್ದೆ ಗಳ ಉಳುಮೆ ಗರಿಯಲಿ ಗರಿಗೆದರಿದ ನವಿಲುಗಳು ನಾವು || ಸಾವಿರದ ಸಹಸ್ರ ಕಣ್ಣುಗಳ ಸಹಸ್ರ ...
ಅಷ್ಟೆಲ್ಲಾ ತಾರೆಗಳ ಬಿಗಿ ಪಹರೆಯ ನಡುವೆಯೂ ತಿಂಗಳಿಗೊಮ್ಮೆ ಕಣ್ಮರೆಯಾಗುವ ತುಂಟ ಚಂದಿರನಂತೆ, ಮೈ ಎಲ್ಲಾ ಕಣ್ಣಾಗಿ ಕಾದಿರುವ ಹಸಿವಿನ ಪರಿಧಿ ದಾಟಿ ಮರೆಯಾಗಿ ನಿಡುಸುಯ್ಯುತ್ತದೆ ರೊಟ್ಟಿ. *****...













