ಹಚ್ಚಿಟ್ಟ ಹಣತೆಯಲ್ಲಿ ಹೊಸೆದು ಬತ್ತಿಯಾಗಿರುವ ಹತ್ತಿ ಮಿಂದು ಮಡಿಯುಟ್ಟ ಭಕ್ತನಂತೆ ತೈಲದಲ್ಲಿ ಮುಳುಗಿ ತಮದ ಕತ್ತಲ ಸುಡುತ ಬೆಳಕ ಬಟ್ಟೆಯ ತೊಡುವ ಯೋಗಿಯಂತೆ! ತನ್ನೊಡಲ ನೂಲಿನಲೇ ಜೇಡ ತನ್ನ ಜೀವಜಾಲದ ಕೇಡ ತಾನೇ ಬಗೆದು ಪ್ರಾಣ ನೀಗುವಂತೆ ಹತ್ತಿಯ ಬ...

ನನ್ನ ನಾ ನಿನ್ನ ನೀ ತಿಳಿದುಕೊಳ್ಳುವುದು. ನನ್ನೊಳಗೆ ನೀ ನಿನ್ನೊಳಗೆ ನಾ ಬೆಳಕಾಗುವುದು ಒಳಮೈ ಹೊರಮೈ ಕಾಯಿಸಿಕೊಳ್ಳುವುದು ಕಿರಣಕ್ಕೊಡ್ಡಿ ಮನಸ್ಸನ್ನು ದುಡಿಸಿಕೊಳ್ಳುವುದು ಹಸಿರ ಮತ್ತೆ ಮತ್ತೆ ಮೆದ್ದು ಮುದಗೊಳ್ಳುವುದು ಬೆಳಕ ಆಸರೆಗಾಗಿ ಕನಸ ಕಟ್ಟ...

ಕೆಲವೊಮ್ಮೆ ನಾನು ಭಾವಿಸುವೆನು ಮರುಭೂಮಿಯೊಂದನು ಅದರೊಳಗೆ ಸರೋವರವೊಂದ ನಿರ್ಮಿಸುವೆನು ನೋಡಿದರೆ ನೀರು ಕನ್ನಡಿಯಷ್ಟು ನಿರಾಳ ಅಲ್ಲಿ ಆಕಾಶಕ್ಕೆ ಎತ್ತರದಷ್ಟೆ ಆಳ ಆಚೀಚೆ ಕಣ್ಣಳತೆಯುದ್ದಕೂ ಬರಿ ಮಳಲು ದಿನದಿನವು ಬದಲಾಗುತ್ತ ನಿನ್ನೆ ನೋಡಿದ್ದು ಇಂದು...

ಯಾವಾಗಲೂ ಹೆಜ್ಜೆಸದ್ದು ಯಾವಾಗಲೂ ರಾತ್ರಿಯ ಹೊತ್ತು ಹೆಜ್ಜೆ ಸದ್ದು ರೂಮಿನ ಬಾಗಿಲು ಆಕಾಶದ ಮೋಡದ ಹಾಗೆ, ಯಾವಾಗಲೋ ತೆರೆದುಕೊಂಡು ಬಿಡುತ್ತದೆ ನಿನ್ನನೀಲಿ ನೆರಳನ್ನು ದಿನವೂ ರಾತ್ರಿ ಹಾಸಿಗೆಯಿಂದ ಎಳೆದು ಒಯ್ಯುವವರು ಯಾರು? ಹೆಜ್ಜೆಗಳು ಹತ್ತಿರ ಬರ...

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ? ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ? ಎಲ್ಲಿ ಮುಗಿಲಲಿ ಮಿಂಚಿನೋಲ್‌ ಕಾವೇರಿ ಹೊಳೆ ಹೊಳೆ ಹೊಳೆವಳೋ? ಎಲ್ಲ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ? ಅಲ್ಲೆ ಆ ಕಡೆ ನೋಡಲಾ! ...

ಅಂಥಿಂಥವನಲ್ಲ ರಾಮನಾಥ ಕಾರ್ಬನ್ ಕಾಪಿ ವರದಿಗಾರ, ಎಂಥೆಂಥವರನ್ನೋ ನುಂಗಿ ನೀರು ಕುಡಿದವನು ಒಂದರ್ಥದಲ್ಲಿ ಕ್ರಾಂತಿಕಾರ. ಅಸಾಧ್ಯ ಸತ್ಯವಂತ ರಾಮನಾಥ ನಾ ಹೇಳಿದ್ದನ್ನೇ ಕಕ್ಕಿದ, ಪದ ಅಳಿಸದೆ ಪದ ಬಳಸದೆ ಹೊಸಾ ಹೊಸಾ ಅರ್ಥ ಬೆಳೆದ. ಮಹಾಬುದ್ಧಿವಂತ ರಾಮ...

ಒಂದೊಂದು ಹೂವಿನ ದಳದಲ್ಲೂ ನೂರೊಂದು ಭಾವನೆ ಏಕೋ ಏನೋ ಹೇಳುತಿದೆ ಅದರದೇ ಬವಣೆ|| ಯಾರು ಯಾರಿಗೆ ಸಿಗುವ ಹೂವು ಅರಳಿ ಬಾಡಿ ದಳಗಳು ಬೆಸೆದು ನೆಲದಲಿ ಹಸಿರ ಸೇರಿ ಮುಕ್ತವಾದಂತೆ|| ಮುಕ್ತವಾದ ದಳಗಳು ಹೊಸದೊಂದು ಜೀವನ ಕಟ್ಟಿ ಬೆಳೆದ ಪೈರಿಗೆ ಮನಸಾರೆ ಹಾ...

ಹಸಿವು ರೊಟ್ಟಿಗಾಗಿ ನಿರಂತರ ಕಾಯಬೇಕು ರೊಟ್ಟಿ ಹಸಿವೆಗಾಗಿ ನಿರತ ಬೇಯಬೇಕು ಕಾಯುವ ಬೇಯುವ ಪ್ರಕ್ರಿಯೆಯಲಿ ನಿರ್‍ವಿಕಾರ ಬದ್ಧತೆ ಸ್ಥಾಯಿಗೊಳಬೇಕು. ಅಲ್ಲಿಯವರೆಗೂ ಎಲ್ಲವೂ ಬರೀ ಆಟ. *****...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...