ಒಂದೊಂದು ಹೂವಿನ
ದಳದಲ್ಲೂ ನೂರೊಂದು
ಭಾವನೆ ಏಕೋ ಏನೋ
ಹೇಳುತಿದೆ ಅದರದೇ ಬವಣೆ||

ಯಾರು ಯಾರಿಗೆ ಸಿಗುವ
ಹೂವು ಅರಳಿ ಬಾಡಿ
ದಳಗಳು ಬೆಸೆದು ನೆಲದಲಿ
ಹಸಿರ ಸೇರಿ ಮುಕ್ತವಾದಂತೆ||

ಮುಕ್ತವಾದ ದಳಗಳು
ಹೊಸದೊಂದು ಜೀವನ
ಕಟ್ಟಿ ಬೆಳೆದ ಪೈರಿಗೆ
ಮನಸಾರೆ ಹಾಡ ಕಟ್ಟಿ ನಲಿದಂತೆ||

ಸ್ವಚ್ಛಂದ ಚಂದದ ಹಸಿರು
ಬಸಿರಾಗಿ ಉಸಿರಿನ ಅಲೆಗಳು
ಬವಣೆ ಹೊತ್ತ ಮನಸಿಗೆ
ಸುಖದ ಸೋಪಾನ ಹಾಸಿದಂತೆ||

ಹೂ ಮನಸುಗಳು
ಹೂವಿನ ಸೊಬಗಿಗೆ ಮಾರು
ಹೋಗಿ ಹೂ ಕಟ್ಟಿ ಮಾಲೆಯಾಗಿಸಿ
ವಧುವರರ ಸಿಂಗರಿಸಿದಂತೆ||

ಹೃದಯ ಕಮಲದಾ ಸ್ಪರ್‍ಶವು
ಹೂವಿನ ದಳಗಳು ನಗುವಿನ
ಮೊಗ ತಳೆದು ಬದುಕು
ಬವಣೆಗೆ ಸೆರೆಯಾಗಿ ನಗುವಂತೆ||
*****

Latest posts by ಹಂಸಾ ಆರ್‍ (see all)