ದುಃಖ – ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು. ರೂಪಕವಲ್ಲ ಕವಿತೆಯಲ್ಲ ಸುಮ್ಮನೆ ಇರುವ ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು. ದುಃಖ ಸುಮ್ಮನೆ ಅಲ್ಲಿರುವ ಬೆಚ್ಚನೆ ಎದೆ ಸುಮ್ಮನೆ ಅಲ್ಲಿರುವ ರಾತ್ರಿ ದುಃಖ ಮಾತಿನಿಂದ ದೂರವಾಗಿ ಎದೆಯಿಂದ ದೂರ...

(ಗೋವಿನ ಕಥೆಯ ಮಟ್ಟು) ಬೆರಗು ಕಣ್ಣಿನ, ಬೆರಳ ಮೀಸೆಯ, ಬೆರಸಿದಾ ನಗುಮೋರೆಯಾ, | ಅರಸನಿದ್ದನು ಡೊಂಬರಾಟಕೆ ಸೆರೆಯ ಸಿಕ್ಕಿದ ಮನದಲಿ. ||೧|| ದಾಟಿ ಪಡು ಹೊಳೆ, ಜನರ ಸಂದಣಿ ಆಟ ನೋಡಲು ಕೂಡಿತು; | ಕೋಟೆಕೊತ್ತಳ ಮಾಡುಮನೆ ಮರಕೊಂಬೆಗಳ ಮೇಲಿದ್ದರು. ||...

ಕರೆದೇ ಕರೆದೆ ಗಂಟಲು ಹರಿವ ತನಕ ಒಂದೇ ಸಮನೆ ಮೊರೆದೆ. ತಿರುಗಿದೆಯ ನೀನು ತಿರುಗುವುದೆ ಬಾನು ಭೂಮಿಯ ತಾಳಕ್ಕೆ? ಭೂಮಿಯ ತಾಳಕ್ಕೆ ಋತುಗಳ ಗಾನಕ್ಕೆ ತಿರುಗುವವರು ನಾವು, ಯಾವನ ಪುಂಗಿಗೊ ರಾಗದ ಭಂಗಿಗೊ ಎಳ್ಳುಕಾಳಾಗಿ ಕಲ್ಲಗಾಣಕ್ಕೆ ದಿನವೂ ಉರುಳುವ ನೋ...

ಒಂದೇ ಒಂದು ಮನದಾಳದ ಮಾತೊಂದು ಪ್ರೀತಿಯೊಂದು ಪ್ರೇಮ ಪರಾಗಸ್ಪರ್‍ಶ ಒಂದು|| ಮಾತು ಒಂದು ಜೀವ ಒಂದು ಸ್ನೇಹ ಸೆರೆಯ ಬಯಕೆ ನೂರೊಂದು|| ಭಾವನೆಗಳೆಂಬ ಹೂವು ಒಂದು ಅರಳಿ ಸೆಳೆವ ನೋಟ ಒಂದು ಮೌನ ತಾಳಿದ ವಿರಹ ನೂರೆಂಟು|| ಜಗವನು ಮಣಿಸುವ ಮನುಜನ ಸೆಳೆಯುವ...

ಚೆಂಡು ಸದಾ ಹಸಿವಿನಂಗಳದಲ್ಲಿ. ಬೇಕೆನಿಸಿದಾಗ ಅಪ್ಪುವ ಮುದ್ದಿಸುವ ಬೇಡೆನಿಸಿದಾಗ ಒದೆಯುವ ಎಸೆಯುವ ಆಯ್ಕೆ ಹಸಿವೆಗೆ. ಕಾಯುವ ಅನಿವಾರ್ಯತೆಯಷ್ಟೇ ಚೆಂಡಾಗುವ ರೊಟ್ಟಿಗೆ. *****...

ಪ್ರೀತಿಗೊಂದು ಹೆಸರು ಮಮತೆಗಿನ್ನೊಂದು ಹೆಸರು| ತ್ಯಾಗಕೂ ಅದೇನೆ ಹೆಸರು ಅಮ್ಮಾ ಎಂಬಾ ತಾಯಿದೇವರು|| ಕರುಣೆಗೊಂದು ಹೆಸರು ಅಮೃತಾಮಹಿಗೊಂದು ಹೆಸರು| ಮೊದಲಗುರುವಿಗೊಂದು ಹೆಸರು ಅದುವೇ ಅಮ್ಮಾ ಎಂಬಾ ತಾಯಿದೇವರು|| ಶಾಂತಿಗೊಂದು ಹೆಸರು ಸಹನೆಗಿನ್ನೊಂದ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...