ಪ್ರೀತಿಗೊಂದು ಹೆಸರು
ಮಮತೆಗಿನ್ನೊಂದು ಹೆಸರು|
ತ್ಯಾಗಕೂ ಅದೇನೆ ಹೆಸರು
ಅಮ್ಮಾ ಎಂಬಾ ತಾಯಿದೇವರು||

ಕರುಣೆಗೊಂದು ಹೆಸರು
ಅಮೃತಾಮಹಿಗೊಂದು ಹೆಸರು|
ಮೊದಲಗುರುವಿಗೊಂದು ಹೆಸರು
ಅದುವೇ ಅಮ್ಮಾ ಎಂಬಾ ತಾಯಿದೇವರು||

ಶಾಂತಿಗೊಂದು ಹೆಸರು
ಸಹನೆಗಿನ್ನೊಂದು ಹೆಸರು|
ಶ್ರಮಜೀವಿಗೊಂದು ಹೆಸರು
ಅದುವೇ ಅಮ್ಮಾ ಎಂಬಾ ತಾಯಿದೇವರು||

ಸಮಾನತೆಗೊಂದು ಹೆಸರು
ಸಹಿಷ್ಣತೆಗಿನ್ನೊಂದು ಹೆಸರು
ಪುಣ್ಯಜೀವಿಗೊಂದು ಹೆಸರು|
ಜಗದ ಜೀವರಾಶಿಯಲ್ಲರೂ
ಅವಳ ಋಣವ ತೀರಿಸಲಾಗದ
ಅಮ್ಮಾ ಎಂಬಾ ತಾಯಿದೇವರು||
*****

ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)