ದುಃಖ –
ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು.
ರೂಪಕವಲ್ಲ
ಕವಿತೆಯಲ್ಲ
ಸುಮ್ಮನೆ ಇರುವ
ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು.

ದುಃಖ
ಸುಮ್ಮನೆ ಅಲ್ಲಿರುವ
ಬೆಚ್ಚನೆ ಎದೆ

ಸುಮ್ಮನೆ ಅಲ್ಲಿರುವ
ರಾತ್ರಿ

ದುಃಖ
ಮಾತಿನಿಂದ ದೂರವಾಗಿ
ಎದೆಯಿಂದ ದೂರವಾಗಿ
ಸುಮ್ಮನೆ ಅಲ್ಲಿರುವ
ಇಂದಿನ ಸಂಗತಿಗಳು.
*****
ಮೂಲ: ಶುನ್‍ತಾರೊ ತನಿಕಾವಾ

ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)