ಒಂದೇ ಒಂದು
ಮನದಾಳದ ಮಾತೊಂದು
ಪ್ರೀತಿಯೊಂದು ಪ್ರೇಮ
ಪರಾಗಸ್ಪರ್‍ಶ ಒಂದು||

ಮಾತು ಒಂದು
ಜೀವ ಒಂದು
ಸ್ನೇಹ ಸೆರೆಯ
ಬಯಕೆ ನೂರೊಂದು||

ಭಾವನೆಗಳೆಂಬ ಹೂವು
ಒಂದು ಅರಳಿ ಸೆಳೆವ
ನೋಟ ಒಂದು ಮೌನ
ತಾಳಿದ ವಿರಹ ನೂರೆಂಟು||

ಜಗವನು ಮಣಿಸುವ
ಮನುಜನ ಸೆಳೆಯುವ
ಮನವನು ತಣಿಸುವ
ಸಾವಿರ ಬಳುವಳಿ ನಗೆಯು ಒಂದು||

ಬಡತನ ಅಳೆಯುವ
ಸಿರಿತನವ ಕಳೆಯುವ
ಸಪ್ತಸ್ವರ ಹಾಡಿಗೆ ಬದುಕು
ಕಟ್ಟಿ ನಲಿವ ಪ್ರೇಮ
ಪರಾಗಸ್ಪರ್‍ಶ ಒಂದು||

ನಮ್ಮತನದ ಬವಣೆ
ಯಾರಿಗೂ ಬೇಡದ ಕರುಣೆ
ಕೋಟಿ ಸೂರ್‍ಯನ ಕಿರಣವ
ನಪ್ಪಿದ ಕೆಳೆಯ ಸೆಲೆಯು ಒಂದು||
*****