
ಕೃಷ್ಣನಿಗಾಸೆ ನೂರು ಅದಕೆ ಹೆಂಡಿರು ಮೂರು ಹೆಂಡಿರಿಗಾಸೆಯೆ ಇಲ್ಲ ಮರ್ಮವ ತಿಳಿದವರಾರು? ಪತಿವ್ರತೆಯೆಂಬುದು ಧರ್ಮ ಪುರುಷನಿಗ್ಯಾವುದು ಧರ್ಮ ಧರ್ಮವ ಹೇರಿದ ತಪ್ಪಿಗೆ ಕಾವಲು ಇವನ ಕರ್ಮ! ಹೆಣ್ಣು ಪೂರ ಅಬಲೆ ಜೊತೆಗೆ ಕೊಂಚ ಚಂಚಲೆ ಯಾರ ಬಾಯಿಂದ ಈ ಮಾತ...
ತಿರುಗಿ ಬಾ! ಹೃದಯವೇ! ಹುಲ್ಲುಮಾನವರೊಡನೆ ದಂದುಗವು ಸರಿಬರದು. ನಿನ್ನ ಪಲ್ಲವನೇತ್ರ ಬೆಳಗುಜಾವವಿದೆಂದು ಮೋಹಗೊಂಡಿತು ಮಾತ್ರ. ಅಲ್ಲಿಹುದು ಕತ್ತಲೆಯ ಮೊನೆ, ಹೇಯವಿಹ ನಟನೆ! ತಿರುಗಿ ಬಾ: ತ್ಯಜಿಸಿಬಿಡು ರಜನಿಯನು, ಆ ಮೃಡನೆ ಮುಟ್ಟದಿಹ ಬೂದಿಯನು. ಇನ...
ಎಲ್ಲಿ ಮನುಕುಲ ಕೆರಳಿ ನಿಂತಿದೆ ಅಲ್ಲಿ ಗುರುಕುಲ ಅರಳಿದೆ ಎಲ್ಲಿ ಜನಮನ ಜಾರಿ ಬಿದ್ದಿದೆ ಅಲ್ಲಿ ಜಂಗಮ ಬೆಳಗಿದೆ ಐದು ನಡೆಮಡಿ ಎಂಟು ಉಡುಗೊರೆ ಆರು ಅಟ್ಟದ ಗುಡಿಯಿದು ಗುರುವು ಮುಟ್ಟಿದ ಮಂತ್ರ ಪೀಠದ ನೂರ ಒಂದರ ಮಠವಿದು ಯಾಕೆ ತಳಮಳ ಸಾಕು ಕಳವಳ ಕೇಳ...
“ಪುಷ್ಪವಿದ್ದಂತೆ ಮೊಗ್ಗೆಯನರ್‍ಪಿಸಿಕೊಂಡ ಶಿವನು! ಪಕ್ವವಾದ ಫಳವಿದ್ದಂತೆ ಕಸುಗಾಯ ಕೊಯ್ಯನು ಶಿವನು! -(ಬಾಲ ಸಂಗಯ್ಯನ ಮರಣ ಕಾಲಕ್ಕೆ ಬಸವದೇವನ ವಿಲಾಪ) ಕೊಳಲಾಗಬಹುದಾಗಿತ್ತು, ಕಳಿಲಿದ್ದಾಗಲೇ ಕಡಿದ ಕಾಳ! ದೇವ! ಮಗುವೆಂದು ತಿಳಿದಿದ್ದೆ ಆದಾ...
ಸರಮಾಲೆ ಕಷ್ಟದೊಳು ಮನುಜಕುಲ ನೊಂದಿಹುದು ತರತರದ ವಿಶ್ವದಿನ ದಿನಕೊಂದು ದೋಷ ಸರಿಸಲಿಕೆಂದು ಏನೆ ಮಾಡಿದೊಡದು ಕುಂದು ಪರಿಹಾರ ಸುಲಭದೊಳಿಹುದೆಲ್ಲ ತೊಂದರೆಗು ಚರ್‍ಯೆಯೊಳು ದಿನಪನೊಡಗೂಡಿ ಬಾಳಿದಂದು – ವಿಜ್ಞಾನೇಶ್ವರಾ *****...
ನಾನು ಕವಿಯಲ್ಲ; ಆದರೆ ಕವನಗಳನ್ನು ಬರೆಯಬಲ್ಲೆ ಒಂದಿಷ್ಟು ಕುತೂಹಲದಿಂದ, ನನ್ನ ಮನದ ಸಂತೋಷಕ್ಕಾಗಿ ಪದಪುಂಜವ ಜೋಡಿಸಿ ಭಾವನೆಯೆಳೆಯನ್ನು ಬಿಡಿಸಿ ಪದಗಳಿಗೆ ಭಾವನೆಯೆಂಬ ವಸ್ತ್ರವನ್ನು ತೊಡಿಸುತ್ತೇನೆ ಕವನದ ರೂಪದಲ್ಲಿ ಮನದ ಮೂಲೆಯಲ್ಲೆಲ್ಲೋ ಅಡಗಿದ ಕ...













