ಎಲ್ಲಿ ಮನುಕುಲ ಕೆರಳಿ ನಿಂತಿದೆ
ಅಲ್ಲಿ ಗುರುಕುಲ ಅರಳಿದೆ
ಎಲ್ಲಿ ಜನಮನ ಜಾರಿ ಬಿದ್ದಿದೆ
ಅಲ್ಲಿ ಜಂಗಮ ಬೆಳಗಿದೆ
ಐದು ನಡೆಮಡಿ ಎಂಟು ಉಡುಗೊರೆ
ಆರು ಅಟ್ಟದ ಗುಡಿಯಿದು
ಗುರುವು ಮುಟ್ಟಿದ ಮಂತ್ರ ಪೀಠದ
ನೂರ ಒಂದರ ಮಠವಿದು
ಯಾಕೆ ತಳಮಳ ಸಾಕು ಕಳವಳ
ಕೇಳು ಲಿಂಗದ ಜೋಗುಳಾ
ಇರುಸು ಮುರಿಸಿನ ತುರುಸು ಯಾತಕ
ಈಜು ಜಂಗಮ ತಿಳಿಗೊಳಾ
ಸಕಲ ಶಾಸ್ತ್ರದ ಶಸ್ತ್ರದಾಟಿದ
ಗುರುವು ತೋರಿದ ಗುರಿಯಿದೆ
ಅರುಹೆ ಲಿಂಗವು ಕುರುಹು ಅ೦ಗವು
ವೀರಶೈವದ ಸಿರಿಯಿದೆ
*****



















