ಗಿಡಿಗಿಡಿ ಗಿಡಿಗಿಡಿ ಗಿಡಿಗೆಂವ್ ಬುಡುಬುಡು ಬುಡುಬುಡು ಬುಡುಗೆಂವ್ ಬುಡುಬುಡ್ಕಿ ನುಡಿಯೊಂದ ಕೇಳಾರಿ ||ಪಲ್ಲ|| ಕಾಲೊಂದ ಬಂದೇತಿ ಗುರುಕಾಲ ಶುಭಕಾಲ ಮುಂದೀನ ಇಸವೀಯು ಬಲುಜೋರ ನಿಮದೆಲ್ಲ ಕಾರ್‍ಭಾರ ಮನಿಮುಂದ ದರಭಾರ ಮನಿಯಾಗ ಸರಕಾರ ಜೋರ್‍ದಾರ ||೧|...

ಅಯೋಧ್ಯೆಯಲ್ಲಿ ಅಂದು ಹುಚ್ಚೆದ್ದು ಹರಿದ ಕೇಸರಿಹೊಳೆಯಲ್ಲಿ ಕೊಚ್ಚಿ ಹೋದ ಹೆಣಗಳೆಷ್ಟು ಹೇಳೋ ರಾಮಾ! ದೇಶದ ನಾಡಿಯಲ್ಲಿ ಹರಿದ ರಕ್ತದ ಕೆಂಪು ಮಡುಗಟ್ಟಿ ನಿಂತು ಹೆಪ್ಪುಗಟ್ಟಿದೆಯಲ್ಲೋ ರಾಮಾ ಮಂಜುಗಟ್ಟಿದೆಯಲ್ಲೋ! ಧರ್ಮಲಂಡ ಭಂಡ ಭಗವಾಗಳು ಹಚ್ಚಿದ ಕೋ...

ಸಾವಯವದೆಂದರದು ಬಲು ಸರಳ ಜೀವನ ತತ್ತ್ವವಿದನಾ ಪದವೆ ಎದೆ ತುಂಬಿ ಹೇಳಿದರು ಅವಯವಗಳುಪಯೋಗವನಧಿಕ ಗೊಳಿಸಿದರ ದುವೆ ಸಾವಯವವೆಂದೇನೆ ಕೇಳಿದರು ಬಲು ಧನದ ಕುರ್‍ಚಿ ತಾ ಮೆರೆಯುತಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ನನ್ನ ಕಾಲೇಜಿನೆದುರು ಯಮಾಲಯದಂತೆ ನಿಂತಿರುವ ರೋಗಗ್ರಸ್ತ, ಜರ್ಜರ ಮಹಾಮಹಡಿಯ ಪ್ರಾಚೀನ ಮಂದಿರದಲ್ಲಿ ದೇವರಿಲ್ಲ ಅವನ ಬದಲಿಗೆ ಅಧಿಕೃತ ಏಜಂಟ್‌ಗಳಾಗಿ ಮುದಿ, ತರುಣ ವೈದ್ಯರು ಗೌರ, ಮೃದು ಭಾವದ ನರ್ಸುಗಳು ಸೇವೆಯ ಪಣ ಹೊತ್ತು ಯಾವದೋ ಜನ್ಮದ ಋಣತೆರುವ ...

ನನ್ನ ಜನರು ನನ್ನ ಜೊತೆ ಎಲ್ಲಿ ಹೋದರಿರುವರು || ನನ್ನ ಜನರು ನನ್ನ ಜೀವನ ಬದುಕು ನೀಡಿದವರು || ಹೆತ್ತ ಒಡಲು ತಂಪು ನೀಡಲು ಅಮೃತ ಉಣಿಸಿದವರು || ಹಿರಿಯರೆನ್ನ ತಂದೆ ತಾಯಿ ಕಿರಿಯರೆನ್ನ ಬಂಧುಬಳಗ || ಜಾತಿ ನೀತಿ ಭೇದ ಭಾವವಿಲ್ಲ ನನ್ನ ಜನರೆ ನನಗೆಲ್...

ಹರಿ ಮುಕುಂದ ನೀನೆ ಸರ್ವ ನಿನ್ನಿಂದಲೆ ಈ ಬಾಳಿಗೊಂದು ಪರ್ವ ನಾಳಿನ ಬಾಳಿಗೆ ನೀನೇ ಹಿತೈಷಿ ನನ್ನ ಬದುಕಿಗೆ ನೀ ನಾದೆ ಖುಷಿ ಹಗಲು ಇರಳು ಮಾಡಿ ನಿನ್ನ ಧ್ಯಾನವ ಮತ್ತೆ ಪಡೆಯುತ್ತಿರುವೆ ಆತ್ಮ ಜ್ಞಾನವ ನಿನ್ನ ನೆನಪೊಂದು ಅಮೃತದ ಪಾನ ನಿನ್ನ ಸಾಮಿಪ್ಯದ ...

ಕಾಲವೇ ಎಲ್ಲಾ ಈ ಕಾಲನ ಮುಂದೆ, ಕಾಲದ ಜೊತೆಯಲಿ ನಾವಿಕರೇ ಎಲ್ಲಾ|| ಕಾಲವೇ ಬೆಲೆಯ ತರುವುದು ಕಾಲವೇ ಬೆಲೆಯ ಕಳೆವುದು| ಕಾಲವೇ ಮಾನ ತರುವುದು ಕಾಲವೇ ಮಾನ ಕಳೆವುದು|| ಕಾಲವೇ ಕತೆಯ ಬರೆವುದು ಕಾಲವೇ ಕತೆಯ ಅಳಿಸುವುದು| ಕಾಲವೇ ಪ್ರಶ್ನೆಗಳ ತರುವುದು ಕ...

ಯಕ್ಷಿಣಿ ಚಾಪೆಯ ಮೇಲೆ ಗಾಳಿಯಲ್ಲಿ ಗಾಳಿಯಾಗಿ ಕಾಲು ಬಡಿಯುವ ಸಾಹಸ ಕಬ್ಬಂಡೆಯಲ್ಲೂ ಕಮಲದ ಕಂಪು ಮೂಸುವ ಕಾತರ ಆದರ್ಶ ಆನಂದ ಇತ್ಯಾದಿ ಅನಂತ ದತ್ತುಗಳ ಮಧ್ಯೆ ಬಂದ ಕಿಂಡಿ ಕಿಂಡಿಯ ಬೆಳಕಲ್ಲೂ ಕಡಲು ಕಂಡು ಹಡಗಿನ ಪಯಣವನುಂಡು ತೀರ ತಲುಪುವ ತವಕ. ನಿಜದಲ...

ಎಂದು ಬರುವುದೋ ನಿನ್ನ ಕರುಣೆ ಮಳೆಯಾಗಿ ಧರೆಗೆ ಇಳಿದು ಎಂದಿನಂತೆ ಸುರಿದಿಹುದು ಬಿಸಿಲು ಎದೆಯ ಒಣಗಿಸಿಹುದು || ೧ || ಮಳೆಯು ಬಂದರೂ ಒಂದು ಹನಿ ನಿಲ್ಲದೇ ಹರಿಯುತ್ತಿತ್ತು ಇಳಿಯಲೊಲ್ಲದೋ ಕಾವು, ಸುಡುತಲಿದೆ ಒಳಗಿನಿಂದ ಸತ್ತು || ೨ || ಬಂದಾಯ್ತು ಮ...

ನಮ್ಮ ವಠಾರದ ಪೂರ್ಣಕುಂಭಾ ಜಂಭಾ ಕುಳಿತರೆ ಸೋಫಾ ತುಂಬಾ ಹರಡುವ ಭಾರೀ ನಿತಂಬಾ ಹುಟ್ಟಿನಲ್ಲೇ ಬೆಂಕಿ ಪೊಟ್ಟಣ ಉರಿಯಿತು ಒಳಗೇ ಹೊರಗೇ ಪಟ್ಟಣ ಕೋಣೆ ಕಛೇರಿಗಳೊಳಗೆ ಹರೆಯದ ಕಿಚ್ಚಿನ ನೂರೆಂಟು ಸಾಕ್ಷಿ ಇವರು ಶ್ರೀಮತಿ ಮದಿರಾಕ್ಷಿ ತುಟಿ ಚೂಪು ಮಾಡಿ ಕಿ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...