ಯಕ್ಷಿಣಿ ಚಾಪೆಯ ಮೇಲೆ ಗಾಳಿಯಲ್ಲಿ ಗಾಳಿಯಾಗಿ
ಕಾಲು ಬಡಿಯುವ ಸಾಹಸ
ಕಬ್ಬಂಡೆಯಲ್ಲೂ ಕಮಲದ ಕಂಪು ಮೂಸುವ ಕಾತರ
ಆದರ್ಶ ಆನಂದ ಇತ್ಯಾದಿ ಅನಂತ ದತ್ತುಗಳ ಮಧ್ಯೆ
ಬಂದ ಕಿಂಡಿ ಕಿಂಡಿಯ ಬೆಳಕಲ್ಲೂ ಕಡಲು ಕಂಡು
ಹಡಗಿನ ಪಯಣವನುಂಡು
ತೀರ ತಲುಪುವ ತವಕ.
ನಿಜದಲೆಗಳಬ್ಬರಕ್ಕೆ ನಿಬ್ಬೆರಗಾಗುವಾಗಲೇ
ಬರ್ನಾದರೆ ಬಲ್ಬು
ಪಾತಾಳಕ್ಕೆ ಹಡಗು
ಮುನಿದ ಮುಗಿಲಲ್ಲಿ ಸಿಡಿಲು ಗುಡುಗು.
*****