ಹೃದಯವನ್ನು ವನ ಮಾಡಿದೆ. ಸಂತಸದ ಉಸಿರು ಹಸಿರಲ್ಲಿ ಮೂಡಿತು. ಚಳಿಗಾಲ ಬಂದು ಎಲೆ ಎಲ್ಲಾ ಉದುರಿತು. ಮತ್ತೆ ಬೇಸಿಗೆ ತಾಪ ಸಹಿಸಲಾರದೇ ವಸಂತನಿಗಾಗಿ ಕಾದು ಕುಳಿತೆ. ದಟ್ಟ ಮೋಡಗಳು ಮೂಡಿ ಮಳೆ ಸುರಿಯಿತು. ಚೈತ್ರದ ಚಿಗುರು ಮೂಡಿ ಕೋಗಿಲೆ ಮತ್ತೆ ಪಲ್ಲವಿ, ಅನುಪಲ್ಲವಿ, ಚರಣಗಳ ಸಾಲನ್ನು ಯುಗ ಯುಗಗಳವರೆಗು ಹಾಡುತ್ತಿತ್ತು ಮಾನವ ಹೃದಯದಲ್ಲಿ.
*****