ಕಾಲವೇ ಎಲ್ಲಾ
ಈ ಕಾಲನ ಮುಂದೆ,
ಕಾಲದ ಜೊತೆಯಲಿ
ನಾವಿಕರೇ ಎಲ್ಲಾ||
ಕಾಲವೇ ಬೆಲೆಯ ತರುವುದು
ಕಾಲವೇ ಬೆಲೆಯ ಕಳೆವುದು|
ಕಾಲವೇ ಮಾನ ತರುವುದು
ಕಾಲವೇ ಮಾನ ಕಳೆವುದು||
ಕಾಲವೇ ಕತೆಯ ಬರೆವುದು
ಕಾಲವೇ ಕತೆಯ ಅಳಿಸುವುದು|
ಕಾಲವೇ ಪ್ರಶ್ನೆಗಳ ತರುವುದು
ಕಾಲವೇ ಉತ್ತರ ನೀಡುವುದು||
ಕಾಲವೇ ಸಂತಸ ತರುವುದು
ಕಾಲವೇ ದುಃಖವ ಕೊಡುವುದು|
ಕಾಲವೇ ಜೀವನ ತರುವುದು
ಕಾಲವೇ ಜೀವನ ಮುಗಿಸುವುದು||
*****
ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್ವೇರ್ ಇಂಜಿನೀಯರ್ ಆಗಿ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.