ಪ್ರಾನ್ಸಿಸ್ ಬೇಕನ್‌ನ “Of Ambition” ಮಹತ್ವಾಕಾಂಕ್ಷೆಯ ಮೇಲಿನ ಟಿಪ್ಪಣಿ

ಪ್ರಾನ್ಸಿಸ್ ಬೇಕನ್‌ನ “Of Ambition” ಮಹತ್ವಾಕಾಂಕ್ಷೆಯ ಮೇಲಿನ ಟಿಪ್ಪಣಿ

ಭಾಗ – ೧

“Ambition, as a selfish or at best a self-regarding quality, is an infirmity, but as a striving for excellence it is an infirmity of noble minds, the spur of the clear spirit” ಮಹತ್ವಾಕಾಂಕ್ಷೆ ಎಂದರೆ ಸ್ವಕೇಂದ್ರಿತ ಸ್ವಾರ್ಥಪರ ದೌರ್ಬಲ್ಯ. ಅದಾಗ್ಯೂ ಸದಾ ಅದ್ವೀತಿಯತೆಯನ್ನು ಗಳಿಸುವಲ್ಲಿ ಅದರ ಹುಡುಕಾಟ, ಹೆಣಗಾಟ. ಸ್ಪಷ್ಟ ಆತ್ಮಬಲದ ಪ್ರೇರಕ ಶಕ್ತಿ ಎಂದರೆ ಅದು ಮಹತ್ವಾಕಾಂಕ್ಷೆ ಯೆಂದು ಬೇಕನ್ ಹೇಳುತ್ತಾನೆ.

ಮಹತ್ವಾಕಾಂಕ್ಷೆ ಮನುಕುಲದ ಆದಮ್ಯ ಉದ್ದೇಶ. ಅದು ಬದುಕಿನ ಶ್ರೇಷ್ಠ ಸಂಗತಿಯಲ್ಲೊಂದು. ಆದರೆ ಬೇಕನ್ ತನ್ನ ಪ್ರಬಂಧದಲ್ಲಿ ಮಹತ್ವಾಕಾಂಕ್ಷೆಯ ಅಪಾಯದ ಒಲವನ್ನು ಎಚ್ಚರಿಕೆಯ ಗಂಟೆಯೊಂದಿಗೆ ಪ್ರಾರಂಭಿಸುತ್ತಾನೆ. ಶುದ್ಧ ನೈತಿಕತೆಯಿಂದ ಪ್ರೇರಕ ಶಕ್ತಿಯ ಪ್ರಬಲ ಮೂಲವನ್ನು ಹೊಂದಲಾಗದು. ಆಗ ಮಹತ್ವಾಕಾಂಕ್ಷೆಯೆಂಬ ಬಲವಾದ ಭಾವನೆ ಸಂಪೂರ್ಣತೆಗೆ ಪರಿಪೂರ್ಣ ಕ್ರಿಯೆಯತ್ತ ಪ್ರಚೋದಿಸುತ್ತದೆ. ಇದನ್ನು ಹೊರತು ಪಡಿಸಿ ಬೇರಾವ ಭಾವವೂ ಅತ್ಯಪೂರ್ವ ಪರಿಣಾಮವನ್ನೂ ಸೃಷ್ಟಿಸಲಾರದು. ಸಾಮಾನ್ಯ ಗೃಹಿಕೆ ಎಂದರೆ ಮಹತ್ವಾಕಾಂಕ್ಷಿಯಾದ ವ್ಯಕ್ತಿ ತನ್ನದೇ ಆದ ಸ್ವಂತ ಸ್ವಯಂಪೂರ್ಣ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಅಲ್ಲಿಯೇ ಭದ್ರ ಹೆಜ್ಜೆಗಳನ್ನೂ ಇಡಬಯಸುತ್ತಾನೆ. ಮಹತ್ವಾಕಾಂಕ್ಷಿಗೆ ಅಸಾಧ್ಯವೆಂಬುದೇ ಇಲ್ಲ. ಮಹತ್ವಾಕಾಂಕ್ಷೆಯೊಂದು ಚಿತ್ತವೃತ್ತಿ, ಪ್ರವೃತ್ತಿ, ಅದನ್ನು ಉದ್ದೀಪಿಸಿದಾಗ ಮನುಷ್ಯನಲ್ಲಿ ಕ್ರೀಯಾಶೀಲ, ಸಭ್ಯ, ಲವಲವಿಕೆಯ, ಚಲನಶೀಲತೆಯ ಮನೋವೃತ್ತಿಯನ್ನು ಉತ್ತೇಜಿಸುತ್ತದೆ. ಆದರೆ ಈ ಮಹತ್ವಾಕಾಂಕ್ಷೆಗೆ ತಡೆ ಉಂಟಾದಾಗ, ಹೊಂದಾಣಿಕೆ ಅನಿವಾರ್ಯವಾದಾಗ ವ್ಯಕ್ತಿತ್ವದಲ್ಲಿ ದ್ವೇಷಭರಿತ, ಪರ ನಿಂದನೆಯ ಚಟವನ್ನು ಸೃಷ್ಟಿಸುತ್ತದೆ. ಹಾಗಾಗೇ ಮಹತ್ವಾಕಾಂಕ್ಷಿಗಳು ತಮ್ಮ ಸಾಧನೆಯ ಹಾದಿಯಲ್ಲಿ ಏಳ್ಗೆಗೆ ಪೂರಕವಾದ ಮಾರ್ಗದಲ್ಲಿ ಭಯಂಕರ ಎನ್ನುವಂತೆ ಕಾರ್ಯಶೀಲರಾಗುತ್ತಾರೆ. ಅದೇ ಯಶಸ್ಸಿನ ಮೆಟ್ಟಿಲು ಅವರಿಚ್ಛೆಯಂತೆ ಕೈಗೂಡದಿದ್ದಲ್ಲಿ ಅತೃಪ್ತರಾಗಿ ನಕಾರಾತ್ಮಕ ವಿಚಾರಗಳ ಕೂಪವಾಗಿ ಅದರಲ್ಲಿಯೇ ಬಿದ್ದು ಹೊರಳಾಡುತ್ತ, ಅನ್ಯ ಸಂಗತಿಗಳನ್ನು ಅನ್ಯರನ್ನು ಅನಾವಶ್ಯಕವಾಗಿ ಜರೆಯುತ್ತ, ನಿಂದಿಸುತ್ತ ಕಾಮಾಲೆ ಕಣ್ಣುಗಳಿಂದ ಕೆಟ್ಟ ದೃಷ್ಟಿಯನ್ನು ತಾವಾಗೀಯೇ ದಯಪಾಲಿಸಿಕೊಂಡು, ಅನ್ಯರಿಗೆ ಕೆಡುಕಾದಾಗ ಸುಖಪಡುತ್ತಾರೆ ಎಂದು ಬೇಕನ್ ಅಭಿಪ್ರಾಯಪಡುವುದರಲ್ಲಿ ಸುಳ್ಳಿಲ್ಲ. ಇದು ಬಹುತೇಕ ಎಲ್ಲರ ಅನುಭವವೂ ಹೌದು.

ಯಾವ ಶ್ರೇಷ್ಟ ಸಂಗತಿ ಮನುಷ್ಯನನ್ನು ಮುಂದಕ್ಕೆ ಪ್ರಚೋದಿಸುತ್ತದೆಯೋ ಅದು ಒಳ್ಳೆಯದು. ಆದರೆ ಕೆಲವೊಮ್ಮೆ ಹಾಗಾಗದೇ ಅದಮ್ಯ ಉತ್ಸಾಹಿಗಳು ನಿಂತು ಬಿಡುತ್ತಾರೆ. ವ್ಯಕ್ತಿತ್ವ ಸೋರಿ ಹೋಗುತ್ತದೆ. ಬೇಕನ್ ಪ್ರತಿಪಾದಿಸುವ ವಿಚಾರಗಳು ವಿನೂತನ ಸಂಗತಿಗಳಲ್ಲದಿದ್ದರೂ ಅವುಗಳನ್ನು ಸ್ಪುಟಪಡಿಸುವ ಆತನ ವಿಧಾನ ಮಹತ್ವದ್ದಾಗಿದೆ.

ಬೇಕನ್ ಆ ಕಾಲದ ರಾಜ್ಯವ್ಯವಸ್ಥೆಯಲ್ಲಿಯ ಮಹತ್ವಾಕಾಂಕ್ಷೆಯ ನ್ಯೂನ್ಯತೆಗಳ ಎತ್ತಿ ಹೇಳುತ್ತಾನೆ. ಇದೊಂದು ಅಪಾಯದ ಆಸ್ತಿ ಎಂದೇ ಹೇಳುತ್ತಾನೆ. ರಾಜನಾದವ ತನ್ನ ಸೈನಿಕರಲ್ಲಿ ಅತಿಬುಧ್ಧಿವಂತ ಮಹತ್ವಾಕಾಂಕ್ಷಿಗಳ ಹೊಂದುವುದು ಅಪಾಯಕಾರಿ. ಅವರ ಸಂಭಾಳಿಸಲು ಪ್ರಗತಿಗಾಮಿ ಕೆಲವು ತಂತ್ರಗಳ ಅರಿತಿರಬೇಕು. ಆದರೆ ಅದರಲ್ಲೂ ಅಡಚಣೆಗಳೂ ಇರುತ್ತವೆ. ಎರಡನೇಯ ಮುಖ್ಯ ಸಂಗತಿಯೂ ಇಲ್ಲಿದೆ. ಕೆಲವೊಮ್ಮೆ ಕಮಾಂಡರುಗಳಂತಹ ಉತ್ತಮ ಸ್ಥಾನದಲ್ಲಿ ಮಹತ್ವಾಕಾಂಕ್ಷಿಗಳ ಅವಶ್ಯಕತೆ ಇದೆ. ಹಾಗಂತ ಇದು ಕೂಡ ಕಂಡಂತೆ ಸುಲಭವಲ್ಲ. ಒಂದೊಮ್ಮೆ ಆಕಾಂಕ್ಷಿಯಲ್ಲದ ಯೋಧ ಸೈನ್ಯದ ಮುಂಚೂಣಿಯಲ್ಲಿರಲು ಅನರ್ಹನಾಗಿರುತ್ತಾನೆ. ಗುರಿಯಿಲ್ಲದವ ತನ್ನ ಪಾಲಿನ ಆದೇಶಗಳಿಗಾಗಿ ಕಾಯುತ್ತ ಸ್ವಯಂಪ್ರೇರಣೆಯಿಂದ ವಿಮುಖನಾಗಿರುತ್ತಾನೆ. ಇನ್ನು ಕೆಲವು ಸಲ ಮಹತ್ವಾಕಾಂಕ್ಷಿ ಯೋಧರು ರಾಜನಿಗೆ ತಡಿಕೆ ಇದ್ದಂತೆ. ಸೈನ್ಯವನ್ನು ಯಾವ ಅಂಜಿಕೆಗೆ ಒಳಪಡದೆ ಅತಿಯಾದ ದೈರ್ಯ ಸ್ಥೈರ್ಯದಿಂದ ಮುನ್ನೆಡೆಸುತ್ತಾರೆ. ರಾಜ ಅವರನ್ನು ತನ್ನ ಗೆಲುವಿಗೆ, ಉಳಿವಿಗೆ ಹರಕೆಯ ಕುರಿಗಳಂತೆ ಬಳಸಿಕೊಳ್ಳಬಹುದು. ಅವರು ಪಾರಿವಾಳಗಳಂತೆ ದೂರದ ಎತ್ತರಕ್ಕೇ ದೃಷ್ಟಿನೆಟ್ಟು ಶ್ರೇಷ್ಟತೆ ಅಥವಾ ಅಪಯಶಸ್ಸಿನ ಕುರಿತು ಚಿಂತಿಸದೇ, ಕಾರ್ಯದ ಸಾಧೂತ್ವಗಳ ವಿವೇಚಿಸದೇ, ಮೂರ್ಖರಂತೆ ತಮ್ಮ ಗುರಿಯತ್ತ ದೃಷ್ಠಿಯಿಟ್ಟು ಕೊನೆಯನ್ನು ಕಾಣುತ್ತಾರೆ. ಅವರ ಈ ದೌರ್ಬಲ್ಯ ಒಡೆಯನಿಗೆ ಅನುಕೂಲವಾಗುತ್ತದೆ.
ಬೇಕನ್ ಅದಕ್ಕೆ ಕೊಡುವ ಉದಾಹರಣೆ ರೋಮನ್ ಚಕ್ರವರ್ತಿ ಅತಿಯಾದ ಮಹತ್ವಾಕಾಂಕ್ಷಿಯಾದ ತನ್ನ ಸ್ನೇಹಿತನೂ ಮಂತ್ರಿಯೂ ಆದ ಕಡಿವಾಣ ಹಾಕಲು ಬಳಸಿಕೊಂಡ.

ಮುಂದೆ ಬೇಕನ್ ಹೇಗೆ ರಾಜ ತನ್ನ ಯೋಧರ ಅತಿ ಮಹತ್ವಾಕಾಂಕ್ಷೆಯನ್ನು ನಿಯಂತ್ರಿಸುವ ವಿಧಾನಕ್ಕೆ ಆಪ್ತರನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿಯಂತ್ರಿಸುವುದೆಂದು ಹೇಳುತ್ತಾನೆ. ಕ್ಷುಲಕ ಹುಟ್ಟು ಹೊಂದಿದ, ಸಭ್ಯ ಸಜ್ಜನನಾದ, ಇಲ್ಲವೇ ಸರಳ ಸ್ವಭಾವದ ಆದರೆ ದಿಟ್ಟ ಗುಣಗಳ ವ್ಯಕ್ತಿಗಳಿದ್ದರೆ ಅವರು ಅಲ್ಪ ಅಪಾಯಕಾರಿಗಳೆಂದು ಬೇಕನ್ ಹೇಳುತ್ತಾನೆ.
ರಾಜ ಬಳಸಬಹುದಾದ ಇನ್ನೊಂದು ವಿಧಾನವೆಂದರೆ ಆದು ತನ್ನ ವಲಯದಲ್ಲಿ ಮಹತ್ವಾಕಾಂಕ್ಷಿಗಳ ನಿಯಂತ್ರಿಸಲು ಆಪ್ತರ ಬಳಕೆ. ಅವರನ್ನು ಲಗಾಮಿನಲ್ಲಿಡಲು ಕೆಲವು ತಂತ್ರಗಳ ಹೂಡುತ್ತಿರಬೇಕು. ಮಹತ್ವಾಕಾಂಕ್ಷಿಗಳ ಸಮತೂಗಿಸಬೇಕು. ಮಹತ್ವಾಕಾಂಕ್ಷಿಯಾದ ಯೋಧನ ಶಿಕ್ಷಿಸಲು ಸಾಧ್ಯವಿಲ್ಲದ ಸಂದರ್ಭಗಳಿರುತ್ತವೆ. ಆಗ ರಾಜ ತನ್ನ ಆಪ್ತರ ವಲಯದಲ್ಲಿ ಆಗಾಗ ಒಳ ಬದಲಾವಣೆಗಳ ಹೂಡುತ್ತಿರಬೇಕು. ಹೀಗಾದಾಗ ಮಹತ್ವಾಕಾಂಕ್ಷಿ ಯಾವ ನಿರೀಕ್ಷೆಗಳನ್ನು ಮಾಡಲಾರ.

ಪ್ರಬಂಧದ ಅಂತ್ಯದಲ್ಲಿ ಬೇಕನ್ ಸದ್ಗುಣದ, ಸಚ್ಛಾರಿತ್ರ್ಯದ ದೂರದರ್ಶಿತ್ವವನ್ನು ವಿಮರ್ಶಿಸುತ್ತಾನೆ. ರಾಜಕಾರಣಿ ಹೇಗೆ ಅತಿ ವೇಗವಾಗಿ ರಾಜ ದರ್ಬಾರಿನ ಅಲೆಗಳಲ್ಲಿ ಮೇಲಕ್ಕೆ ಏರುತ್ತಾನೋ ಅಷ್ಟೇ ರಭಸದಲ್ಲಿ ಕೆಳಮುಖವಾಗಿ ಜಾರುವುದು ಸಾಮಾನ್ಯ. ಮೂಲತಃ ಮಹತ್ವಾಕಾಂಕ್ಷೆ ಎನ್ನುವುದು ಪ್ರಯೋಜನದ ಹಿನ್ನೆಲೆಯಲ್ಲಿ ಒಡಮೂಡುವಂತಹುದು. ಹಾಗಾಗೇ ರಾಜ ಹೇಗೆ ತನ್ನ ಆಕಾಂಕ್ಷೆಭರಿತ ಯೋಧರನ್ನು ಯಾವ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕೆಂದು ಸರಳವಾಗಿ ಹೇಳುತ್ತಾನೆ. “Shrewd and politics but not elevated. Ambition is to be used only, so far as there is no danger of overtoppling the monarch. i.e. only so far as there is identity between the interests of the minster and the sovereign”

ಬೇಕನ್‌ನ ಕಾಲಕ್ಕೆ ಸಿಂಹಾಸನದ ಅಭಿಪ್ಸೆ ಹೊಂದಿದ ರಾಜನ ಆಪ್ತ ವಲಯದ ಸಮರ್ಥ ಮಂತ್ರಿಗಳು, ಯೋಧರು, ಒಳ ಶತ್ರುಗಳಾಗಿದ್ದರು. ಅವರನ್ನು ತನ್ನ ಹತೋಟಿಯಲ್ಲಿಟ್ಟು ಕೊಳ್ಳುವುದು ರಾಜನ ಚಾಣಾಕ್ಷತನವೂ ಆಗಿತ್ತು. ಸ್ವಯಂಪ್ರತಿಷ್ಟೆ ಮತ್ತು ಪ್ರಚಾರಪ್ರಿಯತೆಯ ಬಯಕೆಯಿಂದ ಮಹತ್ವಾಕಾಂಕ್ಷೆ ಹಾಗೂ ಆತ್ಮ ಶ್ಲಾಘನೆಯು ಜೀವ ತಾಳುತ್ತವೆ ಎಂದು ಭೇಕನ್ ಅಭಿಪ್ರಾಯಿಸುವುದರಲ್ಲಿ ಸುಳ್ಳಿಲ್ಲ. ಅಂದಿನ ಕಾಲಕ್ಕೆ ರಾಜ ವ್ಯವಸ್ಥೆಯ ಸಂಗತಿಗೆ ಹೊಂದುತ್ತಿದ್ದ ವಿಚಾರಗಳು ಇಂದು ಪ್ರಜಾಪ್ರಭುತ್ವ ಕಾಲದಲ್ಲಿ ರಾಜಕೀಯ ಪುಢಾರಿಗಳ ಸುತ್ತಲ ಸಂಗತಿಗಳಿಗೆ ತಾಳೆ ಯಾಗುತ್ತದೆ.

ಪ್ರಾನ್ಸಿಸ್ ಬೇಕನ್‌ನ ಪ್ರಬಂಧಗಳ ಮೂಲತತ್ವಗಳು ಜ್ಞಾನದ ತಳಹದಿಯ ಸಂಗತಿಗಳು. ಆತ ಪ್ರಮುಖವಾಗಿ ಸೂತ್ರ ಆಧಾರಿತ, ಪ್ರಾಯೋಗಿಕ ವಿಧಾನಗಳನ್ನು ಶಿಫಾರಸ್ಸು ಮಾಡುತ್ತಾನೆ. ಶಿಕ್ಷಣದಲ್ಲಿ ಹೊಸ ವಿಧಾನಗಳ ಪ್ರಸ್ತಾಪಿಸುತ್ತ ಆಗಿನ ಇಂಗ್ಲೀಷ ವಿಶ್ವವಿದ್ಯಾಲಯಗಳ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯನ್ನು ಸ್ಪಷ್ಟವಾಗಿ ವಿಶ್ಲೇಷಿಸಿದ್ದ. ಆತನ ಪ್ರಬಂಧಗಳು ವ್ಯಕ್ತಿನಿಷ್ಟವಲ್ಲದ ಭಾವನಾತ್ಮಕ ಸಂಗತಿಗಳಿಂದ ಹೊರತಾದ ವಿಚಾರಗಳನ್ನು ಪೋಷಿಸುತ್ತವೆ. ವಿಚಾರಗಳ ವೈಜ್ಞಾನಿಕ ಸತ್ಯಾಸತ್ಯತೆಗಳ ಪರಿಶೋಧಕನಾಗಿ ತತ್ವಾಧಾರಿತ, ತರ್ಕಬದ್ಧ ಪ್ರಸ್ತುತತೆ ಆತನ ಪ್ರಬಂಧಗಳ ವೈಶಿಷ್ಟ್ಯ. ಬಳಸಿದ ಭಾಷೆ ಕೂಡ ಆತ ವಿಷದಪಡಿಸಿದ ವಿಚಾರಗಳಂತೆ ಸ್ಪಷ್ಟ ಮತ್ತು ಸ್ವಚ್ಛ. ಹಿತವಾದ ಆಕರ್ಷಿಸುವ ವರ್ಣಪೂರ್ಣ ನಿರೂಪಣಾ ಶೈಲಿಯಿಂದ ಬೇಕನ್‌ನ ಪ್ರಬಂಧಗಳು ಗಮನ ಸೆಳೆಯುತ್ತವೆ ಕೂಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆ-ಡಗೆ
Next post ಭಾವುಕ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

cheap jordans|wholesale air max|wholesale jordans|wholesale jewelry|wholesale jerseys