ಆಡಿ ಬಾರೋ ರಂಗ ಅಂಗಾಲ ತೊಳೆದು ನಿನ್ನಾ ಅಪ್ಪಿ ಮುದ್ದಾಡುವೆ ಅನುಗಾಲ| ಅಕ್ಕರೆಯಿಂದಲಿ ಚೊಕ್ಕಮಾಡುತ ನಿನ್ನ ಸೇವೆಯಮಾಡುವೆ ನೂರು ಕಾಲ|| ಬೆಳ್ಳಿಬಟ್ಟಲ ಹಾಲು ಹಣ್ಣು ಫಲಹಾರವ ಅಣಿ ಮಾಡಿರುವೆ ನಿನಗಾಗಿ| ಅದನ್ನೆಲ್ಲಾ ನೀ ಸೇವಿಸೆ ಅಮ್ಮಾ ಸಾಕು ಎಂದೊಮ...

ಹೂತು ಹೋಗಿದೆ ಒಲವಿನ ಮಾತು ಉಸಿರು ನರಳಿದೆ ಸೆಣಸುತ ಸೋತು ಸಾಯುವ ಮುಂಚೆ ನೀರು ಕೊಡಿ ಬಾಯಾರಿದೆ ಹೃದಯ. ಹೊಟ್ಟೆಯ ಒಳಗಿನ ಸುಟ್ಟ ವಾಸನೆ ಬೀದಿಗೆ ಹರಿದು ಬಡತನ ಬಯಲು ಮೂಗು ಮುಚ್ಚಿದೆ ಮನೆ ಮನೆ ಸಾಲು ಬೀದಿ ಬೀದಿಯಲಿ ಹುಡುಕಿ ನೋಡಿದರು ಹೃದಯದ ವಿಳಾಸ...

ಬಿರಿಬಿರಿದ ಬಕುಲ ಪರಿಮಳ ಸೂಸಿಚೆಲ್ಲಿ ಹರವಿರುವ ಹಾಲ್ಬೆಳ್ಳಿ ಬೆಳದಿಂಗಳಲ್ಲಿ ತರುಲತೆಯ ಕಿರುಶಬ್ದ ಸುಳಿಗಾಳಿಯಲ್ಲಿ ಮರಿಕೋಗಿಲೆಯ ಕೂಗು ಮಧುರಧ್ವನಿಯಲ್ಲಿ ಝರಿಯೊಂದು ಚಿಮ್ಮುತಿದೆ ಗಿರಿಶಿಖರದಲ್ಲಿ ದರಿಯಲ್ಲಿ ಹರಿಯುತಿದೆ ಬಹುದೂರದಲ್ಲಿ ಹರವಿಕೊಂಡಿ...

ಕೇಳುತ್ತಿರುವುದೊಂದು ದನಿಯು ಏಕನಾದದಿಂದ ನುಡಿಯು ನೇತಿ ನೇತಿ ಎಂಬ ನಿಗಮ ನೀತಿ ಕೇಳುತಿರುವದಮ್ಮ ಮಿಡಿವುದೇಕೊ ಏಕನಾದ ನುಡಿವುದೇನೊ ಹಲವು ವಾದ. ಒಂದು ತಂತಿಯಿಂದ ಹಲವು ನಾದವೊಡೆದು ರಾಗರಸವು ಹಳೆಯದನ್ನು ಹೊಸದು ಮಾಡಿ ಹೂಸದ ಹಳಯದಾಗಿ ಮಾಡಿ ಧರ್‍ಮವು...

ಕಣ್ಣೀರ ಹನಿಗಳು ಹೃದಯದಾಳಕ್ಕಿಳಿದು ಘನವಾಗುತ್ತಾ ಹೋದಂತೆ ಮಾತುಗಳು ಮೌನವಾಗುತ್ತಾ ಹೋದವು. ಈಗ ಜನ ಕೇಳುತ್ತಿದ್ದಾರೆ ನಿನ್ನ ಕಥೆ ಏನೆ೦ದು ? *****...

ಹಾಲಿಂದ ಮಾಡಿದರೊ ನಿನ್ನ ಮಲ್ಲಿಗೆ ಹೂವಿಂದ ಮಾಡಿದರೊ ಈ ಇಂಥ ಅಂದವ ಹೇಗೆ ಮಾಡಿದರೋ ಕಸ್ತೂರಿಯಿಂದ ಮಾಡಿದರೊ ಚಂದನದಿಂದ ಮಾಡಿದರೊ ಪಾರಿಜಾತದ ಗಂಧದಿಂದ ಮಾಡಿದರೊ ಈ ಮೈಯ ಸೌಗಂಧವ ಹೇಗೆ ಮಾಡಿದರೋ ಬಿದಿರೆಲೆಯಿಂದ ಮಾಡಿದರೊ ಕಬ್ಬಿನ ಕದಿರಿಂದ ಮಾಡಿದರೊ ...

ನಮ್ಮ ಶತ್ರುವು ನಮಗೆ ಕಾಣುತ್ತಿಲ್ಲ ವಿಜಯವು ಹೇಗೆ…. ಇನ್ನು ವಿಜಯವು ಹೇಗೆ? ಕಾಣುವ ದಾರಿ ಕಂಡರೂ ತುಳಿಯುತ್ತಿಲ್ಲ ಮಾತುಗಳೇಕೆ…. ಇನ್ನು ಭವಿಷ್ಯ ಹೇಗೆ? //ಪ// ಭೂಮಿಗೆ ಇಲ್ಲ ಬರ; ಆದರೂ ಕೊಳೆಗೇರಿಗಳು ನದಿಗಳಿಗಿಲ್ಲ ಬರ; ಆದರೂ ಹೋರ...

ನನ್ನಮ್ಮ ಬಂದಳು ನನ್ನಪ್ಪ ಬಂದರು ನನ್ನಣ್ಣ ತಮ್ಮದಿರು ನನ್ನಕ್ಕ ತಂಗೇರು, ನನ್ನವರು ಬಂದರೆಂದು ಸಂಭ್ರಮ ಪಡುವಂಗಿಲ್ಲ ಸ್ವತಂತ್ರವಾಗಿ ಒಂದು ಕರ್ರಂದು ಬೆಳ್ಳಂದು ಮಾಡಿಡುವಂಗಿಲ್ಲ ಕಷ್ಟ, ನಷ್ಟ ಅಂದರೆ ಕೈಲಾದ್ದ ಮಾಡುವಂಗಿಲ್ಲ ಆದರೂ… ಈ ಮನೆ,...

ಆಶೆ ಬಿಡು ಎಂದ ಬುದ್ಧ ಏನು ಮಾಡಲಿ ನಾನಿಲ್ಲ ಸಿದ್ಧ. ಬಯಸದೆ ಹುಟ್ಟಿ ಬಂದೆ ಬಯಕೆಯ ಬುಟ್ಟಿಯಾದೆ ಬುಟ್ಟಿಯನ್ನೇ ನೆಚ್ಚಿಕೊಂಡೆ ಗಂಡ ಮಕ್ಕಳ ಹಚ್ಚಿಕೊಂಡೆ ಬದುಕನ್ನ ಒಪ್ಪಿಕೊಂಡೆ ಬೆಂಕಿಯನ್ನ ಅಪ್ಪಿಕೊಂಡೆ ಆಶೆ ಬಿಡು ಎಂದ ಬುದ್ಧ ಏನು ಮಾಡಲಿ ನಾ ಬದ್ಧ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...