ಝುಳು ಝುಳು ನಡು ಬಳುಕಿಸಿ ಬಂದಳು ನೀರೆ ಯಾರಿವಳು ಹೇಳೆ || ಮೌನದಿ ತೂಗುತ ಜಾಲವ ಬೀಸುತ ಚಂಚಲೆ ಇವಳು ಯಾರಿವಳು ಹೇಳೆ || ವೈಯಾರಿ ಇವಳು ಗಯ್ಯಾಳಿ ಇವಳು ಮರ್ಮವ ತಿಳಿ ಯಾರಿವಳು ಹೇಳೆ || ಊರ ಹೊರಗೆ ಊರನಾಳ್ವಳು ಆಗರ್ಭ ಸಂಜಾತೆ ಇವಳೆ ಇವಳು ಕೇಳೆ ||...

ಬಾಳನ್ನು ಒರೆಗೆ ಹಚ್ಚಿನೋಡು ಇಂದ್ರಿಯಗಳಿಗೆ ತೊಂದ್ರೆ ಇಟ್ಟು ಕಾಡು ಮನಸ್ಸಿನ್ನು ಮುಕ್ತಿ ಮಾರ್ಗಕ್ಕೆ ದೂಡು ಆತ್ಮನ ಸಹಚರದಲಿ ಪರಮಾತ್ಮನ ಹಾಡು ಯಾವಕ್ಷಣಗಳಿವು ಮನುಜ! ಬರೀ ಮೋಜೆಂದು ಬಗೆದೆಯಾ? ಇಂದ್ರಿಯ ಗಟ್ಟಿ ಇರುವಾಗು ಸುಖ ನಂತರ ಪಾಪದ ಪರ್ವತ ಕ...

ನಿಂದಿಸದಿರು ನೀ ಕಾಲವನು ವಿಧಿಯ ನೆಪಮಾಡಿ| ದೂಷಿಸದಿರು ನೀ ಈ ಜನ್ಮವನು ಹಿಂದಿನ ಕಾಲಕರ್ಮನು ಹಗೆಮಾಡಿ|| ಕಠಿಣ ಪರಿಶ್ರಮವಿಲ್ಲದೆ ಬರಿಯ ಅದೃಷ್ಟವನೇ ನಂಬಿ ಬದುಕಲು ಸಾದ್ಯವೇನು?| ಬಿಲ್ಲನೆತ್ತಿ ಬಾಣವ ಹೂಡದೆ ಬರೀ ಠೇಂಕರಿಸಿದರೆ ಗುರಿಯತಲುಪಲು ಸಾಧ್...

ಸಾಲ ಸರ್ಪವು ಬಂದು ಸಂಸಾರ ಸೇರಿತು ಚಿತ್ತ ಚಿತ್ತವನೆಲ್ಲ ಹುತ್ತವ ಮಾಡಿತು. ಸಣ್ಣ ಸಂದೀಲಿ ತೂರಿ ಬಂದಾ ಸರ್ಪ ಹೆಡೆಯತ್ತಿ, ಸತಿಗೆ ಆಯ್ತಲ್ಲ ಸವತಿ ಸವತಿಯ ಸಂತತಿ ಬುಸುಗುಟ್ಟಿ ಬೆಳೆದಂತೆ ಸಂಸಾರದಾಗೆ ಇನ್ನೆಂಥ ಶಾಂತಿ! ಸುತ್ತಿ ಬಳಸಿದ ಸರ್ಪ, ಆಲಿಂಗ...

ಮಂಗಳಂ, ಮೈಸೂರಿನರಮನೆಗೆ ಮಂಗಳಂ. ಜಯದ ಹೆಸರಿನ ಚಾಮರಾಜಂಗೆ ಮಂಗಳಂ. ಮುಮ್ಮಡಿಯ, ನಾಲ್ಮಡಿಯ ದಿವ್ಯ ತೇಜಂಗಳಂ ಒಮ್ಮುಡಿಯೊಳಾಂತೆಸೆವ ಧೀರಂಗೆ ಮಂಗಳಂ. ತಂದೆತಾಯ್ ಪಯಿರಿಟ್ಟ ಪುಣ್ಯದ ಫಲಂಗಳೇ, ಸೋದರನ ಸೌಭಾಗ್ಯದಮೃತ ಕಳಶಂಗಳೇ, ಲಾವಣ್ಯ ಲಕ್ಷ್ಮಿಯರನಾಳ...

ಸೂರ್ಯ ಅಪೂರ್ಣ ಚಂದ್ರ ಅಪೂರ್ಣ ತಾರಾಗಣ ಅಪೂರ್ಣ ಗಗನ ಅಪೂರ್ಣ ಭೂಮಿ ಅಪೂರ್ಣ ವಾರಿಧಿಯು ಅಪೂರ್ಣ ಭೂತ ಅಪೂರ್ಣ ಭವಿಷ್ಯ ಅಪೂರ್ಣ ವರ್ತಮಾನ ಅಪೂರ್ಣ ಅರಿವು ಅಪೂರ್ಣ ಆಯುಸ್ಸು ಅಪೂರ್ಣ ಯುಗ ಯುಗಾದಿ ಅಪೂರ್ಣ ಮಾತು ಅಪೂರ್ಣ ಮೌನ ಅಪೂರ್ಣ ಶಬ್ದಾರ್ಥ ಅಪೂ...

ಕೆಲವರು ಬಯಸುತ್ತಾರೆ ತಾವು ಇಡುವ ಪಾದಗಳ ಕೆಳಗೆ ಇರಬೇಕೆಂದು ರತ್ನಕಂಬಳಿಗಳು ಅಮೃತ ಶಿಲೆಗಳು ಡಾಂಬರಿನ ನಯ ನಾಜೂಕಿನ ರಸ್ತೆಗಳು ಆದರೆ ತಮ್ಮ ಕಾಲುಗಳ ಕೆಳಗೆ ಹಿಮಾಲಯ ಪರ್‍ವತಗಳ ಶಿಖರಗಳೆ ಇರಬೇಕೆಂದು ಮೆಟ್ಟಿದವರು ತೇನಸಿಂಗ್, ಹಿಲೇರಿಗಳು *****...

ಹುಟ್ಟೂರು ಹೆತ್ತವರು, ಒಡಹುಟ್ಟಿದವರು, ನೆಂಟರಿಷ್ಟರ ಬಗ್ಗೆ ಮಾತಾಡುವಾಗ ಹೊಟ್ಟೆ ತುಂಬಿದಂತಾಗುತ್ತೆ ಹಿಟ್ಟು ಕಾರವನ್ನೇ ತಿಂದರೂ ಒಂದ್ಸಾರಿ ನೋಡಿಕೊಂಡು ಬರಬೇಕೆನಿಸುತ್ತೆ ಯಾವ ಕಾಲನೂ ಹೇಳಬೇಡ ಮಹಾನವಮಿ ಕಾಲವೊಂದು ಬಿಟ್ಟ ಮೇಲೆ ದಿಣ್ಣೆ, ದೀಪಾಂತರ...

ಕಿಡಿಯೊಂದೆ! ಅದನು ಸಿಡಿಸುವ ಕೈಯೊಂದೆ!! ಆದರೆ ಪರಿಣಾಮ – ಯಾರು ಬಲಿಯಾದರೆ ಏನಂತೆ? ಊರೇ ಉರಿದರೂ ಏನಂತೆ?? ಸ್ವಾರ್ಥದ ಕಿಚ್ಚು ಹೊರಗೆ ಮುಖವಾಡ ಹೆಜ್ಜೆ ಹೆಜ್ಜೆಗೂ ನರಿಯ ನಾಚಿಸುವ ಅಗಣಿತ ಲೆಕ್ಕಾಚಾರ ಮಾತಲಿ ಜೇನು ಕಣ್ಣಲಿ ಹೊಗೆ ನಾಭಿ ಮೂಲದ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...