ಬೆಳೆದೊಡೆಮ್ಮ ಕೈಯುಗುರ ತೆಗೆವಂತೆಮ್ಮ ಬಾಳಿನನುಕೂಲಕಪ್ಪಷ್ಟು ಪ್ರಕೃತಿಯ ಬೋಳಿಸಲವಕಾಶವೆಮಗಿಹುದು ಬಲು ಸರಳವಿದೆಮ್ಮನ್ನವನು ಕೈ ಮುಟ್ಟಿ ಬೆಳೆದೊಡೆಮ್ಮುಗುರು ತಾನೆ ಸವೆಯುವುದು – ವಿಜ್ಞಾನೇಶ್ವರಾ *****...

ಹೊಳೆ ಬೆಳಗಿ ಜಾರುವುದು, ಗಿಳಿ ನೆಗೆದು ಹಾರುವುದು. ಬೆಳೆದ ಹೊಲ ಬಿಸಿಲಲ್ಲಿ ಮಲಗಿರುವುದು; ತಿಳಿಯಾದ ಬಾನಿನಲಿ ಬಿಳಿಮುಗಿಲು ತೇಲುವುದು, ಮಳೆಸೋತ ದಳದಂತೆ ಕದ್ದಡಗಿತು! ಕರೆಯ ಹೊಂಗೆಯ ಮರದ ನೆರಳ ಸೋಂಪಿನೊಳೊರಗಿ ಕುರುಬಹಯ್ದನು ಕೊಳಲನೂದುತಿರಲು, ಕೊ...

ಎನ್ನ ಆಲೋಚನೆಗಳು ಶುದ್ಧವಾಗಿರಲಿ ಅದರಲ್ಲಿ ಮೈಲಿಗೆ ಬಾರದಿರಲಿ ಆಲೋಚನೆ ಕಲುಷಿತ ಗೊಂಡರಾಯ್ತು ಬಾಳೆಲ್ಲ ವ್ಯರ್ಥವೆಂಬುದುದಿರಲಿ ಆಲೋಚನೆಗಳಲಿ ಇಣಕಿದ ಭಾವ ರುದಿರದಲಿ ಹರಿಯದೆ ಇರದು ರಕ್ತದಲಿ ಸಂಚಾರವಾದರಾಯ್ತು ಬಾಳೆಲ್ಲ ವ್ಯರ್ಥವೆಂಬುದಂತಿರಲಿ ರುಧೀ...

ಮರದೊಳಗೊಂದು ರಥವಿದೆ ರಥದೊಳಗೊಂದು ಮರ ಅಮರವಾಗಿದೆ ಆ ಮರ ರಥವಾದ ಬಳಿಕ ಹೊಗಳಿದವರೆಷ್ಟು ಜನ ಕಲಾವಿದನ ಕಲಾ ಚಾತುರ್ಯವನ್ನು ಒಣಗಿದ ಮರಕ್ಕೆ ಪ್ರಾಣ ಇತ್ತವನ ಕೈಚಳಕವನ್ನು ಮರ, ಮರವೇ ಆಗಿದ್ದರೆ ಅದಕ್ಕೇನಿದೆ ಬೆಲೆ? ಶರಣು ಬರುತ್ತಿದ್ದರೇ ಜನ ಬರಡು ಮರ...

ತೋಟಕ ಬಾರೆ ಬೆಳದಿಂಗಳ ಬಾಲೆ ತೋಟಕೆ ಬಾ ಊಟಕೆ ಬಾ ಕಾದಿರುವೆನು ನಾ ಬೆಳದಿಂಗಳ ಬಾಲೆ ಎಂತು ಅರಳಿವೆ ನೋಡು ಇರುಳ ಹೂವುಗಳು ಗಿಡಗಳ ಮೇಲೆ ನಿಂತು ಕಾದಿವೆ ಅವು ನಿನಗಾಗಿ ಸಂಜೆ ಮಲ್ಲಿಗೆ ರಾತ್ರಿ ಮಲ್ಲಿಗೆ ಇರುಳ ರಾಣಿಯರ ಕಂಪು ಹಗುರವಾಗಿ ಇಬ್ಬನಿಯ ತಂಪ...

ಎಲೆ ಮನವೆ, ಮುದಶೀರ್ಷ ಜ್ಞಾನತನು ಶಮಪಾದ ಪ್ರತ್ಯಕ್ಷಭವನಿವನ ಸಾರುತೇನೆರವೆ? ಆಸೆಭಯಲೋಭಗಳನಾಧರಿಸುವೆರೆಕೆಗಳ ಆಯ್ದಾಯ್ದು ತೋರ್ವುದರೊಳೇ ನಿನ್ನ ನಿಲವೆ? ಪತಿಪುತ್ರವಿತನೆಂಬ ಮಿತ್ರಬಾಂಧವನೆಂಬ ಭವವಿತ್ತ ಫಲಕಗಳ ತಿರುವುತ್ತ ನಿಂತು ಶೈವಕರುಣಾಂಶಗಳ ಎಳ...

ಆಡುವ ಭಾಷೆಯೂ ರಾಜಕೀಯ ವಿಷಯವಾಗಿದೆ ಗೂಂಡಾಗಳ ಕೈಯಲ್ಲಿ ಕೂಡುಗತ್ತಿಯಾಗಿದೆ. ಗಾಂಧಿ, ಅಬ್ದುಲ್ ಗಫಾರ್, ನೆಹರೂರವರನು ಹಾದಿ ಬೀದಿಯಲ್ಲಿ ಅವಮಾನಿಸುತ್ತಿದ್ದಾರೆ ಜೇಬುಗಳ್ಳರಿಗಿಲ್ಲಿ ತುಂಬು ಗೌರವದ ಧಿರಿಸು ಒಳ್ಳೆಯವರಿಗಿಲ್ಲಿ ಕಾಲ ಎಲ್ಲಿದೆ ಹೇಳು? ...

ನಾನೇ ಇರುವೆ ನನ್ನ ಪರವಾಗಿ ಪಾರ್ಲಿಮೆಂಟಿನಲ್ಲಿ ವಿ- ಧಾನ ಸೌಧದಲ್ಲಿ ನಾನೆ ಆಗಿಹೆ ನನ್ನ ವಿರೋಧಿ ಇರುವುದ ಬಾಚುವಲಿ ದೇಶವ ತೊಳೆಯುವಲಿ ಗಾಂಧಿ ಇಷ್ಟ ತತ್ವವೂ ಇಷ್ಟ ಎಲ್ಲ ಕಂಠಪಾಠ ಮೈಕು ಹಿಡಿದರೆ ಬರಿ ಚಪ್ಪಾಳೆ ಇದೇ ನಿತ್ಯದಾಟ ಅಲ್ಲವೇ ಹೇಳಿ ನಾನೆ ...

ಮೂಲ: ರವೀಂದ್ರನಾಥ ಠಾಕೂರ್ ಗೀತಾಂಜಲಿ (If thou speakest not ಎಂಬ ಕಾವ್ಯಖಂಡ) ನುಡಿಯದಿದ್ದರೇನು ನೀನು ನಿನ್ನ ಮೌನವನ್ನೆ ನಾನು ಹೃದಯದಲ್ಲಿ ತುಂಬಿ, ವಿರಹದಲ್ಲಿ ಬೇಯುತಿರುವೆ ಅಲುಗದಲೆಯೆ ಕಾಯುತಿರುವೆ ನಿನ್ನನ್ನೇ ನಂಬಿ. ಚುಕ್ಕಿಗಣ್ಣ ಬಿಚ್ಚಿ...

1...2728293031...886

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...