ಎಲೆ ಮನವೆ, ಮುದಶೀರ್ಷ ಜ್ಞಾನತನು ಶಮಪಾದ
ಪ್ರತ್ಯಕ್ಷಭವನಿವನ ಸಾರುತೇನೆರವೆ?
ಆಸೆಭಯಲೋಭಗಳನಾಧರಿಸುವೆರೆಕೆಗಳ
ಆಯ್ದಾಯ್ದು ತೋರ್ವುದರೊಳೇ ನಿನ್ನ ನಿಲವೆ?
ಪತಿಪುತ್ರವಿತನೆಂಬ ಮಿತ್ರಬಾಂಧವನೆಂಬ
ಭವವಿತ್ತ ಫಲಕಗಳ ತಿರುವುತ್ತ ನಿಂತು
ಶೈವಕರುಣಾಂಶಗಳ ಎಳೆಬಿಡಿಸುವೆಸಕದೊಳು
ದಿಂಡಿನೀ ಜೀವಾತ್ಮವನೆ ಮರೆವೆಯೆಂತು?
ಅಡಿಗೆರಗಿ ಶಮನಾಂತು ತನುವಪ್ಪಿ ತಿಳಿವಾಂತು ಮುಡಿಮುಟ್ಟ ಮುದವಗೊಂಡು
ಆ ಕರುಣೆವೆಳಗನೇ ನನ್ನೊಳಗೆ ಮಡುಗೊಳಿಸೆಯಾ ಹುರುಳ ಕಂಡು?
*****


















