ಎನ್ನ ಆಲೋಚನೆಗಳು ಶುದ್ಧವಾಗಿರಲಿ
ಅದರಲ್ಲಿ ಮೈಲಿಗೆ ಬಾರದಿರಲಿ
ಆಲೋಚನೆ ಕಲುಷಿತ ಗೊಂಡರಾಯ್ತು
ಬಾಳೆಲ್ಲ ವ್ಯರ್ಥವೆಂಬುದುದಿರಲಿ
ಆಲೋಚನೆಗಳಲಿ ಇಣಕಿದ ಭಾವ
ರುದಿರದಲಿ ಹರಿಯದೆ ಇರದು
ರಕ್ತದಲಿ ಸಂಚಾರವಾದರಾಯ್ತು
ಬಾಳೆಲ್ಲ ವ್ಯರ್ಥವೆಂಬುದಂತಿರಲಿ
ರುಧೀರುದಿರದಲಿ ಪಾಪ ಬಂದರಾಯ್ತು
ತನುವಿನಲಿ ಪ್ರಭಾವ ಬೀರದಿರದು
ಶರೀರ ನೀಚತನಕೆ ಇಳಿದರಾಯ್ತು
ಬಾಳೆಲ್ಲ ವ್ಯರ್ಥವೆಂಬುದು ಅರಿತಿರಲಿ
ಶರೀರದಲಿ ಹೀನತನ ಕಂಡರಾಯ್ತು
ಚರಿತ್ರೆ ಹಾಳಾಗದೆ ಇರದು
ಚರಿತ್ರೆಗೆ ಕಲಂಕ ಬಂದರಾಯ್ತು
ಬಾಳೆಲ್ಲವ್ಯರ್ಥವೆಂಬುದು ಅರಿತಿರಲಿ
ತನುವಿನ ಭಾವ ದೇವನಾಗಲಿ
ಮನಸ್ಸಿನ ಕಲ್ಪನೆ ದೇವನಾಗಲಿ
ಆಚಾರಗಳಲ್ಲಿ ಸೌಗಂಧ್ಯ ಬೀರಲಿ
ಮಾಣಿಕ್ಯ ವಿಠಲನಾಗಿ ನಳಿನಳಿಸಲಿ
*****