ಸುಮ್ಮನಾಲೋಚಿಸಿರಿ ನೀವೊಂದು ಸ್ಥಿತಿಯ ಎಮ್ಮ ಬಂಡಿಯ ಚಕ್ರ ಚೌಕವಾದೊಡದರ ಗತಿಯ ಗಮ್ಮತಿನ ಪಟ್ಟಣಕು ವಾಹನಕು ಹೊಂದಲಿಕೆಂ ದೆಮ್ಮ ಪ್ರಗತಿ ಪಥ ನೈಸಾಗುತಿರುವಂತೆ ಎಮ್ಮ ಪ್ರಕೃತಿ ರಥ ಚಕ್ರಗಳೊಂದೊಂದೆ ಚೌಕಾಗುತ್ತಿದೆ – ವಿಜ್ಞಾನೇಶ್ವರಾ *****...

ಕಾಡಿನೊಳು ನೀನಿಲ್ಲ , ಬೀಡಿನೊಳಗಿಲ್ಲ, ಬಯಸುವೊಡೆ ಬೇಸಗೆಯ ತೊರೆಯಾದೆಯಲ್ಲ! ಮತ್ತೆ ಮಳೆ ಕೊಳ್ಳುತಲೆ ಏನದರ ಮೊಳಗು! ಇನ್ನು ಜಯ ನಮಗೆಲ್ಲಿ? ನಿನಗೆಲ್ಲಿ ಬೆಳಗು? ಕಣದ ಬಳಿ ಕೊಯ್ಯುವುದು ಜೋಲುತಲೆ ಹೊಡೆಯೆ, ರಣದೊಳಗೊ ಹೊಯ್ಯುವುದು ನೆರೆದಾಳ ತೊಡೆಯೆ....

ಮನವು ನಿಗ್ರಹಿಸಬೇಕು ನಿತ್ಯ ಮನದ ಭಾಷೆಯ ಅರಿಯಬೇಕು ಮನಕ್ಕೆ ತನ್ನವನಾಗಿ ಮಾಡಿಕೊಬೇಕು ಮನದ ಮೈಲಿಗೆಯ ತೊಳೆಯಬೇಕು ಮನವು ಪಾರದರ್ಶಕದಂತಿರಬೇಕು ಮನವು ನಿತ್ಯವೂ ಪಾವಿತ್ರ್ಯ ಇರಬೇಕು ಮನಕ್ಕೆ ನಿತ್ಯವೂ ಸೋಸಬೇಕು ಕಾಮ ಕ್ರೋಧಗಳು ಮೈಲಿಗೆ ತೆಗೆಯಬೇಕು ಮ...

ಕತ್ತಲಿಗೂ ಬೆಳಕಿಗೂ ನಡೆಯಿತೊಮ್ಮೆ ಮಾತಿನ ಚಕಮಕಿ “ನಾನೇ ಶ್ರೇಷ್ಠ” ಅಂದಿತು ಕತ್ತಲು ಪಟ್ಟು ಸಡಿಲಿಸದು ಬೆಳಕು “ನಾನಿಲ್ಲದೆ ಲೋಕವೆಲ್ಲಾ ಕತ್ತಲೆ” ಹೆಮ್ಮೆಯಿಂದ ಬೀಗಿತು ಬೆಳಕು “ನಾನಿಲ್ಲದೆ ನಿನಗಾವ ಬೆಲೆ?” ಪ...

ರಾತ್ರಿ ಕಂಡ ಕನಸುಗಳ ಚಿತ್ರಿಸುವುದಕ್ಕೆ ಕುಂಚಗಳೇ ಇಲ್ಲ ಕುಂಚಗಳ ತಂದು ಬಣ್ಣಗಳ ಕಲಸಿ ಕ್ಯಾನ್ವಾಸಿನ ಮುಂದೆ ಕುಳಿತಾಗ ಕನಸುಗಳಿರೋದಿಲ್ಲ ನೆನಪಿನಲ್ಲಿ ಅವು ಎಲ್ಲಿರುತ್ತವೋ? ಬಹುಶಃ ಕಿಟಿಕಿಗಳ ಹಿಂದೆ ಛಾವಣಿಗಳ ಸಂದಿಗಳಲ್ಲಿ ದಾರಂದದಲ್ಲಿ ಅತ್ತಾರದ ...

ಸಂಸ್ಪೃಷ್ಟ ದೇವಾಂಶುಸಿಕ್ತರೀ ಭಕ್ತ ಜನ ಆತ್ಮಸಂದರ್ಶನೋತ್ಸೃಷ್ಟ ಭವರು ಮನದ ಮಾಗಿಯ ಕಳೆದ ಚಿದ್ವಸಂತೋತ್ಸವರು ಮುದದ ತುಂತುರನು ಸಿಂಪಿಸುತ ನಡೆವರು. ಕಣ್ಣಿಗಳವಡುವೆಲ್ಲ ವಸ್ತುಗಳು ಮೆರಸುವೊಲು ತಮ್ಮ ಹೊಳೆಸುವ ರವಿಯ ತೇಜದಲೆಯ ಗವಿಯುಳಿದ ಹೊನಲಿನಂತಿವ...

ಎಡೆಬಿಡದೇ ಸುರಿದ ಮಳೆಗೆ ತತ್ತರಿಸಿದ ಮುಂಬೈ ನಗರಿ ಚೇತರಿಸಿ ಉಸಿರಾಡುತ್ತಿದ್ದಂತೆಯೇ ಒಂದರ ಹಿಂದೊಂದರಂತೆ ಸರಣಿ ಬಾಂಬುಗಳ ಸ್ಪೋಟ ದುರಂತಗಳ ಮಧ್ಯದಲ್ಲಿಯೇ ಎದ್ದು ನಿಲ್ಲುತ್ತದೆ ಮುಂಬೈನಗರಿ ಪಿನಿಕ್ಸ್ ಹಕ್ಕಿಯ ಸಾವಿನಂತೆ ಮತ್ತೆ ಮತ್ತೆ ಸತ್ತು ಬದು...

ಕೋಪವು ಬರುವದು ಸಾಬರಿಗೆ ಸುಮ್ಮನೆ ಅವರ ಉ- ಸಾಬರಿಗೆ ಹೋಗುವುದೇಕೆ? ಎಚ್ಚರ-ಜೋಕೆ- ಅವರ ಕೈಯಲಿದೆ ಡಂಬೂಕು ತಲೆಯಲಿ ತುಂಬಿದೆ ತಂಬಾಕು! *****...

ಬೇಲೂರ ಗುಡಿಯಲ್ಲಿ ಕಲೆಯಾದ ಶಿಲೆಯಲ್ಲಿ ದೀನ ದುರ್ಬಲರೊಡಲ ಬಿಸಿಯುಸಿರಿದೆ ಆ ಬಿಸಿಯು ಮೈಸೋಕಿ ತೆರೆದ ಈ ಕಣ್ಮುಂದೆ ಕಪ್ಪು ಇತಿಹಾಸ ಸಂ-ಪುಟ ತೆರೆದಿದೆ ಭವ್ಯತೆಯ ಹಂಪೆಯಲಿ ಬೆವರು ಕಂಬನಿ ರಕ್ತ ಹೊಳೆ ತುಂಗೆಭದ್ರೆಯಾಗಿ ಹರಿದಾಡಿದೆ ಇದರಲ್ಲಿ ಮಿಂದೆದ...

ಮೂಲ: ಡಿ.ಎಚ್. ಲಾರೆನ್ಸ್ (The snake ಎಂಬ ಇಂಗ್ಲಿಷ್ ಕವನ) ಒಂದು ದಿನ ರಣ ರಣ ಬಿಸಿಲು ಹಾವೊಂದು ಬಾಯಾರಿ ಬಂತು ಮನೆ ನೀರಿನ ತೊಟ್ಟಿಗೆ ಸೆಖೆ ಅಂತ ನಾನೂ ಪೈಜಾಮದಲ್ಲಿಯೇ ಹೊರಟಿದ್ದೆ ಅಲ್ಲಿಗೆ ಕಪ್ಪಗೆ ಸೊಪ್ಪು ಜಗ್ಗಿದ್ದ ಹೊಂಗೆಯ ದಟ್ಟನೆರಳಲ್ಲಿ ...

1...2021222324...886

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...