ಮನವು ನಿಗ್ರಹಿಸಬೇಕು ನಿತ್ಯ
ಮನದ ಭಾಷೆಯ ಅರಿಯಬೇಕು
ಮನಕ್ಕೆ ತನ್ನವನಾಗಿ ಮಾಡಿಕೊಬೇಕು
ಮನದ ಮೈಲಿಗೆಯ ತೊಳೆಯಬೇಕು
ಮನವು ಪಾರದರ್ಶಕದಂತಿರಬೇಕು
ಮನವು ನಿತ್ಯವೂ ಪಾವಿತ್ರ್ಯ ಇರಬೇಕು
ಮನಕ್ಕೆ ನಿತ್ಯವೂ ಸೋಸಬೇಕು
ಕಾಮ ಕ್ರೋಧಗಳು ಮೈಲಿಗೆ ತೆಗೆಯಬೇಕು
ಮನದ ಮೂಲೆ ಮೂಲೆಗೆ ಇಣಕಬೇಕು
ಮನದ ಸ್ವಾರ್ಥಭಾವ ಕಿತ್ತೆಸೆಯಬೇಕು
ಅನೇಕ ಜನುಮಗಳ ಕಿಲುಬು ಬಿಡಿಸಬೇಕು
ಸದಾ ಅಮರತ್ಯವ ತುಂಬಬೇಕು
ಮನವು ಲೋಕೊರುಚಿ ಮರೆಯಬೇಕು
ಮನವು ದೇವರಿಗೆ ಧ್ಯಾನಿಸಬೇಕು
ಮನವು ಆತ್ಮದ ಪ್ರತಿಬಿಂಬವಾಗಬೇಕು
ಮನವು ಮಾಣಿಕ್ಯ ವಿಠಲನಾಗಬೇಕು
*****
















