ಸಂಸ್ಪೃಷ್ಟ ದೇವಾಂಶುಸಿಕ್ತರೀ ಭಕ್ತ ಜನ
ಆತ್ಮಸಂದರ್ಶನೋತ್ಸೃಷ್ಟ ಭವರು
ಮನದ ಮಾಗಿಯ ಕಳೆದ ಚಿದ್ವಸಂತೋತ್ಸವರು
ಮುದದ ತುಂತುರನು ಸಿಂಪಿಸುತ ನಡೆವರು.
ಕಣ್ಣಿಗಳವಡುವೆಲ್ಲ ವಸ್ತುಗಳು ಮೆರಸುವೊಲು
ತಮ್ಮ ಹೊಳೆಸುವ ರವಿಯ ತೇಜದಲೆಯ
ಗವಿಯುಳಿದ ಹೊನಲಿನಂತಿವರೆನಗೆ ಹೊಳೆಸುವರು
ಗುಡಿಯೆಲ್ಲೆಯನು ಕಳೆದ ದೇವಕಳೆಯ-
ಪ್ರೇಮನೈರ್ಮಲ್ಯ ನಮ್ರತಾಸಂತೋಷಸಂಭೂಷಿತಮಿದು
ಜೀವಾತ್ಮ ಸಂದೋಹ; ಅಜಮನಸ್ಸಂಜಾತರಾದಿಮರ ತೆರ ವೆಸೆವುದು.
*****


















