ರವಿಕಿರಣ ತಿಳಿಬೆಳಕು ಬಾನಿನಲಿ ಬೆಳಗುತಿರೆ, ಮೇಘಮಯ ಮುಗಿಲಲ್ಲಿ ಚಲುರಶ್ಮಿ ಬೆಳಗುತಿರೆ, ಮೂಡಲಿನ ನಾಡಿನಲಿ ವೈಭವವು ನಲಿಯುತಿರೆ, ಮುಂಜಾನೆ ಮೆರೆಯಿತು ನಿಶಿದೆಸೆಯ ನೆರೆದಾಟೆ. ತೆಂಕಲಿನ ತಂಗಾಳಿ ತೀಡುತಿರೆ ಇಂಪಾಗಿ, ಮೋದದಲಿ ಹಾಡುತಿರೆ ಹಕ್ಕಿಗಳು ...

ನಿರಭ್ರವಾದ ನಭೋಮಂಡಲ! ಮಧ್ಯರಾತ್ರಿಯಲ್ಲಿ ಸಹ ನೀನು ನಿಚ್ಚಳವಾಗಿ ಕಾಣುವೆಯಲ್ಲ! ಕುಳಿರನ್ನು ಪಾತಾಳಕಟ್ಟಿದೆ ನೀನು, ತಳಿರೊಡೆದ ನೆಲವನ್ನು ಎವೆಯಿಕ್ಕದೆ ನೋಡಿ ನಿಂತಿರುವೆ! ಸಾಗರವು ಸಹ ಸಾಗರಬೀಳುವದು,- ಈ ನಿನ್ನ ಚೆಲುವನ್ನು ನೋಡಿ! ಚಿಕ್ಕಮಕ್ಕಳಂತ...

ಸಾಗಿ ಸದ್ಗುರು ಯೋಗಿ ಬಂದರ | ಹೋಗಿ ನೋಡುಣ ಗುರು- | ಮೋಕ್ಷವ ಬೇಡುಣ ||ಪ|| ಕಲ್ಯಾಣ ಮನಿಯಾಗ, ಎಲ್ಲ ಶರಣರ ಕಂಡೆ ಬಲ್ಲಿದನ ಕಂಡೆ ಬಸವಣನ | ಗುರುವೆ || ಸಾ || ಪಾದಕ ಚೆಲ್ಯಾಡಿ ಬಂದೆ ನನ ಮನವ | ಗುರುವೆ || ಸಾ || ೧ ಕಲ್ಯಾಣ ಪುರದಾಗ, ಎಲ್ಲರಿಗು ...

ತಿಪ್ಪೆಗುಂಡಿಯ ಬಿಸಿಯ ಬೂದಿಯಲಿ ಮೈಮುದುರಿ ಮಲಗಿ ಜೋಂಪಿಸುತಿರುವ ಗಂಡು ನಾಯಿ; ಹಸಿದು ಕುಸಿದಿಹ ಹೊಟ್ಟೆಗೊಂದು ತುಕಡಿಯ ಬಯಸಿ ಮೆಲ್ಲನೆದ್ದಿತು; ಅಂತೆ ಮೈಯ ಮಣಿಸಿತು ನಿಂತು ತೆರೆದು ಬಾಯಿ. ಲಟಪಟನೆ ಕಿವಿಯ ಬಾರಿಸಿ ದೂಳು ಜಾಡಿಸಿತು ಹೊರಟಿತು ಸಂದಿ...

ಜಯದೇವಿ ಜಯದೇವಿ ಜಯ ಶ್ರೀ ಶಾರದೆಯೇ ನಾಲಗೆ ರಂಗವ ಮಾಡಿದೆ, ಮನೆ ಮಾಡಿದೆ ಎದೆಯೇ ||ಜಯದೇವಿ|| ಮೌನದ ಬಸಿರೊಳಗೆದ್ದಿಹ ನಾದದ ಬಲೆಯಲ್ಲಿ ಬ್ರಹ್ಮಾಂಡಂಗಳು ಜೋ ಜೋ ಆಡುವ ನೆಲೆಯಲ್ಲಿ ವೇದದ ಮಂತ್ರವ ವಾದವ ಮಾಡುವ ತಲೆಯಲ್ಲಿ ನೀರೋ ನೀರೆಯೊ ಎನುವೊಲು ಇಹೆ...

೧ ಯುದ್ಧ ಮುಗಿಯಿತು ಎಂಬ ಮಾತಿನ ಹಿಂದೆ ನಿಂತಿದೆ ಸೂಚನ ಮದ್ದು ಗುಂಡಿನ ಅಣುಸ್ಫೋಟನ; ಮೃತ್ಯು ಮಾರಿಯ ನರ್ತನ ೨ ಕಣ್ಣುಕಾಣದ ಅಣುವಿನಣುವೇ ಜಗವ ನುಂಗಲು ಬಂದಿದೆ; ಮಣ್ಣು ಕಣದತಿ ಸೂಕ್ಷ್ಮ ರೂಪವೆ ಮುಗಿಲ ಮೇರೆಯ ಮೀರಿದೆ ೩ ಕಿರಿದರಲಿ ಕಿರಿದಾದ ಜಡಕೂ ...

ವರುಷವಿಪ್ಪತ್ತಾಯಿತೀಗ ನಮ್ಮ ಗಗನವ ಮುಸುಕಿ ಮೇಘ, ಆಹ, ಇನ್ನಿದೆ ಕಡೆಯದಾಗ, ನನ್ನ, ಮೇರಿ! ಕಾಣೆ ನಿನ್ನಲಿ ಮೊದಲ ಹಮ್ಮ, ದಿನದಿನಕೆ ಬಲ ಕುಗ್ಗಿತಮ್ಮ, ನನ್ನ ಕೊರಗೇ ಕೊರೆದುದಮ್ಮ, ನನ್ನ ಮೇರಿ! ನಿನ್ನ ಸೂಜಿಗಳೊಮ್ಮೆ ಹೊಳೆದು ನನ್ನ ಕೆಲಸಕೆ ದುಡಿದು,...

ಬಗೆಗೆ ಕನ್ನಡಿ ಹಿಡಿದೊಲಿಂದಿಹುದಹಾ ಪ್ರಕೃತಿ! ಹರಹಿದ ಕೆರೆಯ ಕರೆ ತೆರೆಯ ನಿರಿಯ ತಬ್ಬುತಿರೆ; ರಂಗು ರಂಗು ನಭದೊಳು ಹುಚ್ಚಾಗಿ ಹಬ್ಬುತಿರೆ; ಹೊತ್ತಿರಲು, ಎಲ್ಲೆಲ್ಲು ಹರಡುತಿಹ ಮಬ್ಬ, ಕ್ಷಿತಿ; ಬೆಳ್ಳಿ ಯಂಚಿನ ಕರಿಯ ಮೋಡ ಸುತ್ತಿರೆ ನಡುವೆ ತಿಳಿನ...

ಸುಳ್ಳು ಸತ್ಯ ಇಲ್ಲ ತಥ್ಯ ಗೆಲುವು ಒಂದೆ ನಮ್ಮ ಗುರಿ ಒಳ್ಳೆತನವು ಮಳ್ಳತನವು ಬಲವು ಇದ್ದರಲ್ಲಿ ಸರಿ ಬಾಳಿದೊಂದು ಸಮರದಂತೆ, ನುಗ್ಗು ನುಗ್ಗು ಮುಂದಕೆ ವೇಳೆಗಳೆಯ ಬೇಡ ಸಾಗು ಬೀಳಬೇಡ ಹಿಂದಕೆ! ಬಾಳಿಗಿಹುದು ಒಂದೆ ಸೂತ್ರ ಬಾಳುವುದೇ ಪೂರ್ಣ ಅರ್ಥ ಗಾಳ...

1...1011121314...933

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...